ಪಾಲಿಕೆ ಚುನಾವಣೆ ಪ್ರಕ್ರಿಯೆ ಸಕ್ರಿಯ

|ಅಂದು ಕೊಂಡಂತೆ ನಡೆ ದರೂ ಬೇಕು 7-8 ತಿಂಗಳು |ವಾರ್ಡ್‌ ಮರುವಿಂಗಡಣೆ-ಮೀಸಲಾತಿ ಸವಾಲು

Team Udayavani, Dec 18, 2020, 2:59 PM IST

ಪಾಲಿಕೆ ಚುನಾವಣೆ ಪ್ರಕ್ರಿಯೆ ಸಕ್ರಿಯ

ಹುಬ್ಬಳ್ಳಿ: ಮಹಾನಗರ ಪಾಲಿಕೆ ವಾರ್ಡ್‌ಗಳ ಮರುವಿಂಗಡಣೆ, ಚುನಾವಣೆ ಕುರಿತಾಗಿ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ. ಎಲ್ಲವೂ ಅಂದುಕೊಂಡಂತೆ ಕಾಲಮಿತಿ ಯೊಳಗೆ ನಡೆದು ಮತ್ತೆ ಯಾವುದೇ ವಿಘ್ನ ಬಾರದಿದ್ದರೂ ಪಾಲಿಕೆ ಚುನಾವಣೆ ನಡೆಯಬೇಕೆಂದರೆ ಕನಿಷ್ಠ 7-8 ತಿಂಗಳಾದರೂ ಬೇಕಾಗುತ್ತದೆ. ಈ ಮಧ್ಯ ಜನಗಣತಿ ಬರುವುದರಿಂದ ಚುನಾವಣೆ ಇನ್ನಷ್ಟು ವಿಳಂಬವಾದೀತೆ ಎಂಬ ಶಂಕೆ ಅನೇಕರದ್ದಾಗಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಡಳಿತ ಮಂಡಳಿ ಅಧಿಕಾರಾವಧಿ 2019ರ ಮಾರ್ಚ್‌ಗೆ ಕೊನೆಗೊಂಡಿತ್ತು.ಮಹಾನಗರದಲ್ಲಿನ ವಾರ್ಡ್‌ಗಳನ್ನುಮರುವಿಂಗಡಿಸುವ ಹಾಗೂ ವಾರ್ಡ್‌ ಸಂಖ್ಯೆ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ವಾರ್ಡ್ ‌ಗಳ ಮರು ವಿಂಗಡಣೆಯೊಂದಿಗೆ ಮೀಸಲಾತಿ ಘೋಷಿಸಲಾಗಿತ್ತಾದರೂ, ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಕೊನೆಗೆ ಸರ್ಕಾರ ಮೀಸಲಾತಿ ಅಧಿಸೂಚನೆ ಹಿಂಪಡೆಯಬೇಕಾಯಿತು. ಇದೀಗಹೈಕೋರ್ಟ್‌ ಸೂಚನೆಯಿಂದಾಗಿ ಮತ್ತೆ ಪಾಲಿಕೆ ಚುನಾವಣೆ ಪ್ರಕ್ರಿಯೆ ಸಕ್ರಿಯತೆ ಪಡೆದುಕೊಂಡಿದೆ.

82 ವಾರ್ಡ್‌ಗಳು ಅಸ್ತಿತ್ವಕ್ಕೆ?: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 67 ವಾರ್ಡ್‌ಗಳಿದ್ದು, ಮರು ವಿಂಗಡಣೆಯಾದರೆ 82 ವಾರ್ಡ್‌ಗಳಾಗಲಿವೆ.ಸುಮಾರು 15 ವಾರ್ಡ್‌ಗಳು ಹೊಸದಾಗಿಅಸ್ತಿತ್ವಕ್ಕೆ ಬರಲಿವೆ. ರಾಜ್ಯದಲ್ಲಿ ಬೆಂಗಳೂರುನಂತರದಲ್ಲಿ ಎರಡನೇ ಅತಿದೊಡ್ಡ ಮಹಾ ನಗರ ಎಂಬ ಕೀರ್ತಿ ಹೊಂದಿದೆ. ಮಹಾನಗರ ಒಟ್ಟಾರೆ 200 ಚದರ ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, 52ಕ್ಕೂ ಅಧಿಕ ಹಳ್ಳಿಗಳು ಮಹಾನಗರ ಮಡಿಲೊಳಗೆ ಸೇರಿವೆ. ಇದೀಗ ಇನ್ನಷ್ಟು ಹಳ್ಳಿಗಳ ವ್ಯಾಪ್ತಿಯೊಂದಿಗೆ ಮಹಾನಗರ ವಿಸ್ತೀರ್ಣ ಮತ್ತಷ್ಟು ಹೆಚ್ಚಿದೆ. ಮಹಾನಗರದಲ್ಲಿ ಜನಗಣತಿ ಪ್ರಕಾರ 8.68 ಲಕ್ಷ ಜನಸಂಖ್ಯೆ ವಾಸವಾಗಿದ್ದು, ಪ್ರಸ್ತುತ ಜನಸಂಖ್ಯೆ ಇನ್ನು ಹೆಚ್ಚು ಇದೆ. ಹೊಸ ಬಡಾವಣೆಗಳ ಪ್ರಮಾಣ ಹಾಗೂ ಮಹಾನಗರಕ್ಕೆ ವಲಸೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚತೊಡಗಿದೆ. ನಿತ್ಯ ಸುಮಾರು 500-550 ಟನ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ.

ಮಹಾನಗರ ಪಾಲಿಕೆ ಆಡಳಿತ ನಿರ್ವಹಣೆ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಇದ್ದರೆ, ಧಾರವಾಡದಲ್ಲಿ ಕಚೇರಿ ಇದೆ. ಅವಳಿ ನಗರ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯಲ್ಲಿ 8 ಹಾಗೂಧಾರವಾಡದಲ್ಲಿ 4 ಸೇರಿದಂತೆ ಒಟ್ಟಾರೆ 12 ವಲಯ ಕಚೇರಿಗಳನ್ನು ಮಾಡುವ ಮೂಲಕ ಅಧಿಕಾರ ವಿಕೇಂದ್ರಿಧೀಕರಣ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ 67 ವಾರ್ಡ್‌ಗಳಲ್ಲಿ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 48 ವಾರ್ಡ್‌ಗಳು ಬರುತ್ತಿದ್ದು, ಧಾರವಾಡ ವ್ಯಾಪ್ತಿಯಲ್ಲಿ 21 ವಾರ್ಡ್‌ಗಳು ಬರುತ್ತಿವೆ. ವಾರ್ಡ್‌ಗಳ ಮರುವಿಂಗಡಣೆಯಿಂದ 82 ವಾರ್ಡ್‌ಗಳು ಅಸ್ತಿತ್ವಕ್ಕೆ ಬರುತ್ತಿದ್ದು, ಹೆಚ್ಚುವರಿ 15 ವಾರ್ಡ್‌ಗಳಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡ ವ್ಯಾಪ್ತಿಗೆ ಎಷ್ಟು ವಾರ್ಡ್‌ಗಳ ಹಂಚಿಕೆ ಆಗಲಿವೆ ನೋಡಬೇಕಿದೆ.

ಅಧಿಕಾರಿಗಳ ಹೆಗಲಿಗೆ ಜವಾಬ್ದಾರಿ ಹೊರೆ : ವಾರ್ಡ್‌ ಮೀಸಲಾತಿ ಘೋಷಣೆ ಸಾಹಸ ಮತ್ತೂಂದು ರೂಪದ್ದಾಗಿದೆ. ವಾರ್ಡ್‌ ಮೀಸಲು ಘೋಷಣೆ ನಂತರ ಆಕ್ಷೇಪ ಸಾಧ್ಯತೆ ಇಲ್ಲದಿಲ್ಲ. ಈ ಹಿಂದೆ 82 ವಾರ್ಡ್‌ಗಳನ್ನು ರೂಪಿಸಿ ಮೀಸಲಾತಿ ಘೋಷಣೆ ಮಾಡಿದ ನಂತರವೇ ಆಕ್ಷೇಪ ವ್ಯಕ್ತವಾಗಿ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಕೊನೆಗೆ ಸರಕಾರ ತಾನು ಹೊರಡಿಸಿದ ಅಧಿಸೂಚನೆ ಹಿಂಪಡೆಯಬೇಕಾಗಿತ್ತು. ಜತೆಗೆ ಮತದಾರರ ಪಟ್ಟಿ ತಯಾರು ಸಹ ಸುಲಭ ಸಾಧ್ಯವಲ್ಲ. ಮತದಾರರ ಹೆಸರು ಇರುವ ವಾರ್ಡ್‌ ಬಿಟ್ಟು ಇನ್ನೊಂದು ವಾರ್ಡ್‌ಗೆ ಸೇರ³ಡೆಯಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಸೂಚಿಸಿದ ಕಾಲಮಿತಿಯಲ್ಲಿ ವಾರ್ಡ್‌ಗಳ ಮರುವಿಂಗಡಣೆ, ಮೀಸಲು ನಿಗದಿ, ಮತದಾರರ ಪಟ್ಟಿ ಸಿದ್ಧತೆಯ ಅನಿವಾಯìತೆಗೆ ಸಿಲುಕಿರುವ ಅಧಿಕಾರಿಗಳು ಕಾಲಿಗೆ ಚಕ್ರಕಟ್ಟಿಕೊಂಡು ಸುತ್ತಬೇಕಾಗಿದೆ, ಪರಿಶ್ರಮ ವಹಿಸಬೇಕಾಗಿದೆ. ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.