Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Team Udayavani, Dec 29, 2024, 1:29 PM IST
ಹುಬ್ಬಳ್ಳಿ: ಹಳೇಯ ದ್ವೇಷ ಹಾಗೂ ಹಣಕಾಸಿನ ವಿಷಯವಾಗಿ ಹಂದಿ ಸಾಕಾಣಿಕೆದಾರನನ್ನು ಕೊಲೆ ಮಾಡಿದ್ದ ಸಂಬಂಧಿ ಸೇರಿದಂತೆ ನಾಲ್ವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಸುಲೇಮಾನ್ ಬಳ್ಳಾರಿ, ಮೃತನ ಅಕ್ಕನ ಗಂಡ ಟೈಟಾಸ್ ಬಾಬು ವೆನ್ನಮ್ಮ, ಮೊಹಮ್ಮದ್ ಷಾ ಫಿರೋಜಾಬಾದ್, ಮೌಲಾಸಾಬ್ ರಮಜಾನವರ ಬಂಧಿತರಾಗಿದ್ದಾರೆ.
ಇವರು ಮಂಟೂರ ರಸ್ತೆ ಮೈತ್ರಾ ಕಾಲೋನಿಯ ಸ್ಯಾಮ್ಯುಯೆಲ್ ಜಾರ್ಜ್ ಮಬ್ಬು (38) ಎಂಬಾತನನ್ನು ಶುಕ್ರವಾರ ರಾತ್ರಿ ನಗರದ ಹೊರವಲಯದ ಮಂಟೂರ ರಸ್ತೆ ರಿಂಗ್ ರೋಡ್ ಬಳಿ ರಾಡ್, ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಬೆಂಡಿಗೇರಿ ಠಾಣೆಯಲ್ಲಿ ಏಂಜಲ್ ಎಂಬುವರು ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ರವಿವಾರ (ಡಿ.29) ಸುದ್ದಿಗಾರರಿಗೆ ತಿಳಿಸಿದರು.
ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹವೆ ಕಾರಣವೆಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಠಾಣೆಯ ಇನ್ಸಪೆಕ್ಟರ್ ಎಸ್.ಆರ್. ನಾಯಕ ಮತ್ತು ತಂಡವು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’
Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ
New Office Bearers: ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷ ಜತೆಗೆ ಮೂರು ಕಾರ್ಯಾಧ್ಯಕ್ಷ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.