ಕೌಶಲಭರಿತ ಶಿಕ್ಷಣದ ಛಾಯೆ
Team Udayavani, Feb 4, 2019, 11:13 AM IST
ಹುಬ್ಬಳ್ಳಿ: ನಿಬ್ಬೆರಗಾಗುವಂತೆ ಪ್ರಶ್ನೆ ಕೇಳುತ್ತಾರೆ, ಸ್ವಚ್ಛತೆ-ಶುಚಿತ್ವ, ಆರೋಗ್ಯದ ಬಗ್ಗೆ ಪಾಲಕರಿಗೆ ಪಾಠ ಮಾಡುತ್ತಾರೆ, ನಿರರ್ಗಳವಾಗಿ ಇಂಗ್ಲಿಷ್ ಶಬ್ದಗಳನ್ನು ಬಳಸುತ್ತಾರೆ, ಹೈಸ್ಕೂಲ್-ಕಾಲೇಜು ವಿದ್ಯಾರ್ಥಿಗಳನ್ನು ಮೀರಿಸುವ ನಿಟ್ಟಿನಲ್ಲಿ ಕೌಶಲ ತೋರುತ್ತಿದ್ದಾರೆ.
ಇವರಾರು ಸೋಕಾಲ್ಡ್ ಪ್ರತಿಷ್ಠಾ ಕಾನ್ವೆಂಟ್ ಶಾಲೆ ಮಕ್ಕಳಲ್ಲ. ಕೊಳಗೇರಿ ಪ್ರದೇಶ ಹಾಗೂ ಬಡ ಕುಟುಂಬದವರಾಗಿದ್ದಾರೆ. ದೇಶಪಾಂಡೆ ಪ್ರತಿಷ್ಠಾನದ ‘ಛಾಯಾ’ ಯೋಜನೆಯಡಿ ಪೂರ್ವ ಪ್ರಾಥಮಿಕ ಹಂತದಲ್ಲೇ ಕೌಶಲಯುತ ಶಿಕ್ಷಣ, ಪಠ್ಯೇತರ ಚಟುವಟಿಕೆಯ ಮನನ ಕಾರ್ಯ ಆರಂಭಗೊಂಡಿದೆ. ಹುಬ್ಬಳ್ಳಿಯ ಜೋಳದ ಓಣಿಯ ಶ್ರೀ ಸಹಸ್ರಾರ್ಜುನ ಪೂರ್ವ ಪ್ರಾಥಮಿಕ ಶಾಲೆ ಮೊದಲ ಪ್ರಯೋಗಕ್ಕೆ ವೇದಿಕೆಯಾಗಿದೆ.
ಕಳೆದ ಮೂರುವರೆ ತಿಂಗಳಲ್ಲಿಯೇ ಮಕ್ಕಳ ಮನದೊಳಗೆ ‘ಛಾಯಾ’ ಪರಿಣಾಮಕಾರಿ ಪ್ರಭಾವ ಬೀರಿದೆ ಎಂಬುದಕ್ಕೆ ಅಲ್ಲಿನ ಮಕ್ಕಳೊಂದಿಗೆ ಕೆಲ ಕಾಲ ಕಳೆದವರಿಗೆ ಖಂಡಿತವಾಗಿಯೂ ಅರಿವಿಗೆ ಬರುತ್ತದೆ. ವಿಶ್ವವಿದ್ಯಾಲಯ, ಕಾಲೇಜು ಮಟ್ಟದಲ್ಲಿ ಹೆಚ್ಚಿನ ಚರ್ಚಿತ ವಿಷಯವಾಗಿರುವ ಶಿಕ್ಷಣದಲ್ಲಿ ಕೌಶಲತೆಯನ್ನು ಯಾಕೆ ಅಂಗನವಾಡಿ ಮಟ್ಟದಿಂದ ತರಬಾರದು ಎಂಬ ಚಿಂತನೆಯೊಂದಿಗೆ ಛಾಯಾ ಸಾಹಸಮಯ ಯತ್ನಕ್ಕೆ ಮುಂದಾಗಿದೆ.
55 ಮಕ್ಕಳ ಮೇಲೆ ಪ್ರಯೋಗ: ಹುಬ್ಬಳ್ಳಿಯ ಶ್ರೀ ಸಹಸ್ರಾರ್ಜುನ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯ ಸುಮಾರು 55 ಮಕ್ಕಳ ಮೇಲೆ ಈ ಪ್ರಯೋಗ ನಡೆಯುತ್ತಿದೆ. ಛಾಯಾ ಯೋಜನೆಯಡಿ ಸಹಸ್ರಾರ್ಜುನ ಪೂರ್ವ ಪ್ರಾಥಮಿಕ ಶಾಲೆ ಕೋಣೆಯನ್ನು ಮಕ್ಕಳ ಕಲಿಕೆಗೆ ಪೂರಕ ರೀತಿಯಲ್ಲಿ ಬಣ್ಣ ಬಳಿಯುವ ಮೂಲಕ ಸುಂದರಗೊಳಿಸಲಾಗಿದೆ. ಮೇಲ್ಛಾವಣಿ ಬದಲಾವಣೆ ಮಾಡಲಾಗಿದೆ.
ಪಠ್ಯ ರಚನೆ-ಶಿಕ್ಷಕರಿಗೆ ತರಬೇತಿ
ಪೂರ್ವ ಪ್ರಾಥಮಿಕ ಮಕ್ಕಳಿಗೆ ವಿವಿಧ ವಿಷಯ ಕಲಿಕೆ, ಪಠ್ಯೇತರ ಚಟುವಟಿಕೆ ಕುರಿತಾಗಿ ಅಮೆರಿಕದ ಬಾಸ್ಟನ್ ವಿವಿಯ ಬಾಲ್ ಶಿಕ್ಷಣ ವಿಭಾಗದ ತಜ್ಞ ಡಾ| ನರ್ಮಿನ್ ಡಾಶ್ ಹೌಶ್ ಅವರು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಪಠ್ಯ ರಚನೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಕರನ್ನು ತರಬೇತಿಗೊಳಿಸಲಾಗುತ್ತಿದೆ. ಈ ರೀತಿಯ ತರಬೇತಿ ಪಡೆದ ಇಬ್ಬರು ಶಿಕ್ಷಕಿಯರನ್ನು ಸಹಸ್ರಾರ್ಜುನ ಪೂರ್ವ ಪ್ರಾಥಮಿಕ ಶಾಲೆಗೆ ನೇಮಿಸಲಾಗಿದೆ. ಮೂರುವರೆ ತಿಂಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಬ್ದಗಳ ಬಳಕೆ, ಪ್ರಶ್ನೆ ಕೇಳುವುದು, ಸ್ವಚ್ಛತೆ ಬಗ್ಗೆ ಮಾಹಿತಿ, ಪೌಷ್ಟಿಕತೆ ಮಹತ್ವ, ಭಾವನಾತ್ಮಕ ವಿಷಯಗಳು, ಒಳ್ಳೆಯದು-ಕೆಟ್ಟದು, ಉತ್ತಮ ವರ್ತನೆ, ಕಲಿಕೆಯಲ್ಲಿ ಶ್ರದ್ಧೆ, ಆಟಗಳು, ಕಥೆ ಹೇಳುವ ಮೂಲಕ ಕಲಿಕೆ ಹೀಗೆ ವಿವಿಧ ವಿಷಯ ಕಲಿಸಲಾಗುತ್ತಿದೆ.
ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ
ಕೇವಲ ಮೂರುವರೆ ತಿಂಗಳಲ್ಲಿ ಮಕ್ಕಳ ವರ್ತನೆ, ಕಲಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪುಟ್ಟ ಮಕ್ಕಳು ಸ್ವಚ್ಛತೆ, ಶುಚಿತ್ವದ ಬಗ್ಗೆ ಪಾಲಕರಿಗೆ ಹೇಳತೊಡಗಿದ್ದು, ಕೈ ತೊಳೆಯದೆ ಏನಾದರು ತಿನ್ನಿಸಲು ಹೋದರೆ ಮಕ್ಕಳು ಮೊದಲು ಕೈತೊಳೆಯುವಂತೆ ತಾಯಿಗೆ ಹೇಳುತ್ತಿದ್ದಾರೆ. ಶಿಕ್ಷಣದ ಆರಂಭ ಹಂತದಲ್ಲೇ ಇಂತಹ ಉತ್ತಮ ಅಂಶಗಳು ಮಕ್ಕಳ ಮನದೊಳಗೆ ಬಿತ್ತನೆಯಾದರೆ, ಮುಂದೆ ಅವರು ಉತ್ತಮ ವಿದ್ಯಾರ್ಥಿ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲಿದ್ದಾರೆ. 23 ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಸ್ಮಿತಾ ದೇಶಪಾಂಡೆಯವರು ನಮ್ಮ ಶಾಲೆಯನ್ನು ಪ್ರಯೋಗಕ್ಕೆ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸ ಮೂಡಿಸಿದೆ ಎಂಬುದು ಸಹಸ್ರಾರ್ಜುನ ಶಾಲೆ ಮುಖ್ಯಸ್ಥೆ ರಾಜೇಶ್ವರಿ ಜಡಿ ಅವರ ಅನಿಸಿಕೆ.
ಅಮೆರಿಕ ಮಾದರಿ
ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಾಲೆ ಹಂತದಿಂದಲೇ ಶಿಸ್ತು, ಆರೋಗ್ಯ ಪರಿಕಲ್ಪನೆ, ಸ್ವಚ್ಛತೆ, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಬೇಕು ಎಂಬ ಉದ್ದೇಶದೊಂದಿಗೆ ‘ಛಾಯಾ’ ಯೋಜನೆ ಮೈದಳೆದಿದೆ. ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅವರ ಸೊಸೆ ಹುಬ್ಬಳ್ಳಿಯವರೇ ಆದ ಸ್ಮಿತಾ ದೇಶಪಾಂಡೆ ಈ ಯೋಜನೆ ರೂವಾರಿಯಾಗಿದ್ದು, ಅವರ ಪರಿಕಲ್ಪನೆಯಡಿ ಯೋಜನೆ ನಿರ್ವಹಣೆಯಾಗುತ್ತಿದೆ. ಸ್ಮಿತಾ ದೇಶಪಾಂಡೆ ಅವರು ಅಮೆರಿಕದಲ್ಲಿದ್ದು, ಅಲ್ಲಿನ ಮಕ್ಕಳ ಕಲಿಕೆ ಮಾದರಿ, ಶಿಸ್ತನ್ನು ಭಾರತೀಯ ಸಂಸ್ಕೃತಿ, ಸಂಸ್ಕಾರಕ್ಕೆ ಪೂರಕವಾಗಿ ಇಲ್ಲಿನ ಮಕ್ಕಳ ಮನದೊಳಗೆ ಬಿತ್ತನೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸಹಸ್ರಾರ್ಜುನ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ನಮ್ಮನ್ನು ಪ್ರಶ್ನಿಸುವುದು ಕಂಡು ಖುಷಿಯಾಯಿತು. ಮಕ್ಕಳಲ್ಲಿ ಮೊದಲು ಪ್ರಶ್ನೆಗಳು ಮೂಡಬೇಕು. ಅದಕ್ಕೆ ಸಮರ್ಪಕ ಉತ್ತರ ಪಾಲಕರ ಹಾಗೂ ಶಿಕ್ಷಕರ ಜವಾಬ್ದಾರಿ. ಮಕ್ಕಳ ವರ್ತನೆಯಲ್ಲಿ ಸಾಕಷ್ಟು ಸುಧಾರಣೆ ವಿಶ್ವಾಸವಿದೆ.
•ಜಯಶ್ರೀ ದೇಶಪಾಂಡೆ,
ಸಹ ಸಂಸ್ಥಾಪಕಿ, ದೇಶಪಾಂಡೆ ಪ್ರತಿಷ್ಠಾನ
ಅಮೆರಿಕದಲ್ಲಿನ ಪೂರ್ವ ಪ್ರಾಥಮಿಕ ಶಿಕ್ಷಣ ಮಾದರಿಯನ್ನು ಭಾರತೀಯ ಸಂಸ್ಕೃತಿ, ಸಂಸ್ಕಾರಕ್ಕೆ ಪೂರಕವಾಗಿ ಅಳವಡಿಕೆ ಮಾಡಿ ಮಕ್ಕಳ ಮನದಲ್ಲಿ ಉತ್ತಮ ಕೌಶಲ, ಚಿಂತನೆ ಬೀಜಗಳನ್ನು ಬಿತ್ತನೆ ಮಾಡುವ ಯತ್ನ ಇದಾಗಿದೆ. ಸ್ಮಿತಾ ದೇಶಪಾಂಡೆಯವರ ಮಹತ್ವಾಕಾಂಕ್ಷಿ ಯತ್ನ ಇದಾಗಿದ್ದು, ಇಲ್ಲಿನ ಫಲಿತಾಂಶ ನೋಡಿ ಇತರೆ ಶಾಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ.
•ಜೆನ್ನಿಫರ್ ವಿನ್ಸೆಂಟ್,
ಮುಖ್ಯಸ್ಥ, ಛಾಯಾ ಯೋಜನೆ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.