ಹುಬ್ಬಳ್ಳಿ: ದಿಬ್ಬ ಏರುವಾಗ ನಿಯಂತ್ರಣ ತಪ್ಪಿದ ಸಾರಿಗೆ ಬಸ್; ತಪ್ಪಿದ ಅನಾಹುತ
Team Udayavani, Dec 2, 2022, 5:22 PM IST
ಹುಬ್ಬಳ್ಳಿ: ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದ ಚಾಲಕನ ನಿಯಂತ್ರಣ ತಪ್ಪಿದ ನಗರ ಸಾರಿಗೆ ಬಸ್ ಕಂದಕಕ್ಕೆ ಉರುಳಿದ್ದು, ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಇಲ್ಲಿನ ಗೋಕುಲ ರಸ್ತೆ ಮೊರಾರ್ಜಿ ನಗರದಲ್ಲಿ ಸಿಬಿಟಿಯಿಂದ ಆರ್.ಎಂ. ಲೋಹಿಯಾ ನಗರಕ್ಕೆ ತೆರಳುತ್ತಿದ್ದ ನಗರ ಸಾರಿಗೆ ಬಸ್ ಬೆಳಗ್ಗೆ 11.30 ರ ಸುಮಾರಿಗೆ ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಹಿಂಬದಿಯಾಗಿ ಚಲಿಸಿ ರಸ್ತೆ ಪಕ್ಷದ ಕಂದಕಕ್ಕೆ ಜಾರಿದೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ನಿರ್ವಾಹಕ ಕೆಳಗೆ ಜಿಗಿದು ಬಸ್ ನ ಹಿಂದುಗಡೆ ಬರುತ್ತಿದ್ದ ವಾಹನ ಸವಾರರನ್ನು ಚದುರಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಬಸ್ ನಲ್ಲಿ ಸುಮಾರು ಎಂಟು ಪ್ರಯಾಣಿಕರು ಇದ್ದರು. ಅವರೆಲ್ಲ ಪ್ರಾಯಾಪಾಯದಿಂದ ಪಾರಾಗಿದ್ದಾರೆ.
ಬಸ್ ವಿದ್ಯುತ್ ಕಂಬ ನುಗ್ಗಿಕೊಂಡು ಸುಮಾರು ಏಳು ಅಡಿಯ ಕಂದಕಕ್ಕೆ ಜಾರಿದೆ. ಈ ಘಟನೆಗೆ ಬ್ರೇಕ್ ವೈಫಲ್ಯ ಕಾರಣ ಎನ್ನಲಾಗುತ್ತಿದೆ. ಬಸ್ ಮೇಲೆತ್ತಲು ಸಾರಿಗೆ ಸಿಬಂದಿ ಹರಸಾಹಸ ಪಟ್ಟರು. ಹೆಸ್ಕಾಂ ಸಿಬಂದಿ ಬಸ್ ನ ಹೊಡೆತಕ್ಕೆ ಮುರಿದುಬಿದ್ದ ಕಂಬ ತೆರವು ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.