ಡಿಸೆಂಬರ್‌ ಅಂತ್ಯಕ್ಕೆ ಹುಬ್ಬಳ್ಳಿಗೆ ಜಲಪ್ರಭೆ

•26 ಕೋಟಿ ರೂ. ವೆಚ್ಚದ ಕಾಮಗಾರಿ•ಜಲಶುದ್ಧೀಕರಣ ಘಟಕ ಕೆಲಸಕ್ಕೆ ವೇಗ

Team Udayavani, Jun 18, 2019, 1:23 PM IST

hubali-tdy-3..

ಹುಬ್ಬಳ್ಳಿ: ಮಲಪ್ರಭಾ ಜಲಾಶಯದ ನೀರಿನ ಮಟ್ಟವನ್ನು ಜಗದೀಶ ಶೆಟ್ಟರ ವೀಕ್ಷಿಸಿದರು.

ಹುಬ್ಬಳ್ಳಿ: ಮಲಪ್ರಭಾದಿಂದ ಹುಬ್ಬಳ್ಳಿ ನಗರಕ್ಕೆ ಹೆಚ್ಚುವರಿ ನೀರು ಪೂರೈಸುವ 26 ಕೋಟಿ ರೂ. ಯೋಜನೆ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ನಂತರ ನಗರಕ್ಕೆ 3-4 ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

ಮಹಾನಗರ ಪಾಲಿಕೆಯ 26 ಕೋಟಿ ರೂ. ಅನುದಾನದಲ್ಲಿ ಹೆಚ್ಚುವರಿ ನೀರು ಪೂರೈಕೆ ಯೋಜನೆ ಕಾಮಗಾರಿ ವೀಕ್ಷಿಸಿದ ನಂತರ ನವೀಲುತೀರ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ಮಿನಬಾವಿಯಲ್ಲಿ ನೀರು ಶುದ್ಧೀಕರಣ ಘಟಕ, ಮಲಪ್ರಭಾ ಜಾಕ್‌ವೆಲ್ನಲ್ಲಿ ಹೆಚ್ಚುವರಿ ನೀರೆತ್ತುವ ಯಂತ್ರ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಗಡುವು ನೀಡಲಾಗಿತ್ತು. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಬಹುತೇಕ ನವೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಅಕ್ಟೋಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸುಮಾರು ಎರಡು ವರ್ಷಗಳ ಕಾಲ ರಾಜ್ಯ ಸರಕಾರ ಯೋಜನೆಗೆ ಅನುಮತಿ ನೀಡದ ಕಾರಣ ಈ ಯೋಜನೆ ನನೆಗುದಿಗೆ ಬೀಳಲು ಕಾರಣವಾಯಿತು. ಕಳೆದ ಆರೇಳು ತಿಂಗಳ ಹಿಂದೆ ಯೋಜನೆಗೆ ಅನುಮತಿ ನೀಡಿದ್ದು, ಯೋಜನೆ ಪೂರ್ಣಗೊಳ್ಳುವವರೆಗೆ ಜನತೆ ಸಮಸ್ಯೆ ಅನುಭವಿಸುವುದು ಅನಿವಾರ್ಯವಾಗಿದೆ. ಆದಷ್ಟು ಕಡಿಮೆ ಅವಧಿಯಲ್ಲಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಲಪ್ರಭಾ ನದಿಯಿಂದ 160 ಎಂಎಲ್ಡಿ ಜೊತೆಗೆ ಹೆಚ್ಚುವರಿಯಾಗಿ 40 ಎಂಎಲ್ಡಿ ನೀರು ದೊರೆತರೆ 3-4 ದಿನಗಳಿಗೊಮ್ಮೆ ಪೂರೈಸಲಾಗುವುದು ಎಂದು ವಿವರಿಸಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಇಲ್ಲಿನ ಶಿರೂರ ಬಳಿಯ 40 ವರ್ಷದ ಹಿಂದಿನ ಅಕ್ವಡೆಟ್ ದುರಸ್ತಿ ಕಾರ್ಯ 12 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಆಗಸ್ಟ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಎಆರ್‌ಎಂ-2 ಯೋಜನೆಗೆ ಸರಕಾರ ಒಪ್ಪಿಗೆ ನೀಡಿದರೆ ವಿತರಣ ಕಾಲುವೆ, ಸೀಳುಗಾಲುವೆ ದುರಸ್ತಿಯಾಗುವುದರಿಂದ ಕೊನೆ ಭಾಗದ ರೈತರಿಗೆ ನೀರು ದೊರೆಯಲಿದೆ. ವಿಸ್ತೃತ ಕ್ರಿಯಾ ಯೋಜನೆ ತಯಾರಿಸಿದ್ದು, ಸರಕಾರಕ್ಕೆ ಸಲ್ಲಿಸಬೇಕಿದೆ. ಕಳೆದ 7 ವರ್ಷದಿಂದ ನನೆಗುದಿಗೆ ಬಿದ್ದಿರುವ ಅಣ್ಣಿಗೇರಿ ಕುಡಿಯುವ ನೀರಿನ ಕೆರೆ ಕಾಮಗಾರಿಗೆ ಚಾಲನೆ ನೀಡುವ ಕೆಲಸ ಆಗಲಿದೆ ಎಂದು ತಿಳಿಸಿದರು.

ಜಲಮಂಡಳಿ ಮುಖ್ಯ ಅಭಿಯಂತ ಡಿ.ಎಲ್. ರಾಜು ಮಾತನಾಡಿ, ಹು-ಧಾ ಸೇರಿದಂತೆ ಕೆಲ ಗ್ರಾಮಗಳಿಗೆ ನಿತ್ಯ 160 ಎಂಎಲ್ಡಿ ನೀರು ಮಲಪ್ರಭಾದಿಂದ ಪೂರೈಸಲಾಗುತ್ತಿದೆ. ನೀರಸಾಗರದಿಂದ ದೊರೆಯುತ್ತಿದ್ದ 40 ಎಂಎಲ್ಡಿ ನೀರು 2016 ಸೆಪ್ಟೆಂಬರ್‌ ತಿಂಗಳಿನಿಂದ ಸ್ಥಗಿತಗೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ನೀರಸಾಗರ ಭರ್ತಿಗೆ ಅಗತ್ಯ ಕಾರ್ಯಗಳು ಕುರಿತು ಸರ್ವೇ ನಡೆಸಿ ವಿಸ್ತೃತ ವರದಿ ತಯಾರಿಸಲಾಗಿದೆ. ಅವಳಿ ನಗರದಲ್ಲಿ 1.60 ಲಕ್ಷ ಸಂಪರ್ಕಗಳಿದ್ದು, ಇದರಲ್ಲಿ 15 ಸಾವಿರ ಸಂಪರ್ಕಗಳಿಗೆ 24/7 ನೀರು ಪೂರೈಕೆಯಾಗುತ್ತಿದ್ದು, 40 ಎಂಎಲ್ಡಿ ನೀರು ದೊರೆಯುವುದರಿಂದ ಉಳಿದ 55 ಸಾವಿರ ಸಂಪರ್ಕಗಳಿಗೆ ನಿರಂತರ ನೀರು ಪೂರೈಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮಹಾಪೌರ ವೀರಣ್ಣ ಸವಡಿ, ಪಾಲಿಕೆ ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಬಿಜೆಪಿ ಮುಖಂಡ ನಾಗೇಶ ಕಲಬುರ್ಗಿ ಇನ್ನಿತರರಿದ್ದರು.

ಟಾಪ್ ನ್ಯೂಸ್

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

Eidu-1

Karkala: ಈದು ಗ್ರಾಮವನ್ನು ಮರೆತು ಬಿಟ್ಟಿದೆಯೇ ಸರಕಾರ?

BJP-JDS-congress-Party

Election Campaign: ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prahalad-Joshi

Waqf: ಕಾಂಗ್ರೆಸ್‌ ನಾಯಕರಿಂದ 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ: ಪ್ರಹ್ಲಾದ್‌ ಜೋಶಿ

Hubballi: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ… : ಸಂಸದ ಕಾರಜೋಳ

Hubballi: ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸಂಶಯವಿದೆ… : ಸಂಸದ ಕಾರಜೋಳ

Waqf Land Row: ರೈತರ ಜಮೀನು ವಶಕ್ಕೆ ಆದೇಶಿಸಿದ ಅಧಿಕಾರಿಗಳನ್ನು ವಜಾ ಮಾಡಿ: ರವಿಕುಮಾರ್

Waqf Land Row: ರೈತರ ಜಮೀನು ವಶಕ್ಕೆ ಆದೇಶಿಸಿದ ಅಧಿಕಾರಿಗಳನ್ನು ವಜಾ ಮಾಡಿ: ರವಿಕುಮಾರ್

Karnataka Politics: ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ… ಲಕ್ಷ್ಮಣ ಸವದಿ

Karnataka Politics: ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ… ಲಕ್ಷ್ಮಣ ಸವದಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.