ಗೋಲಿಬಾರ್‌ಗೆ ಮೂವರು ಹುತಾತ್ಮ; ಇಂದಿಗೆ ನೂರು ವರ್ಷ
Team Udayavani, Jul 1, 2021, 3:57 PM IST
ಧಾರವಾಡ: ಬ್ರಿಟಿಷರ್ ವಿರುದ್ಧ ಅಸಹಕಾರ ಆಂದೋಲನ ನಡೆದ ಸಂದರ್ಭದಲ್ಲಿ ನಗರದಲ್ಲಿ ನಡೆದ ಗೋಲಿಬಾರ್ ನಲ್ಲಿ ಮೂವರು ಖೀಲಾಫತ್ ಕಾರ್ಯಕರ್ತರು ಮೃತಪಟ್ಟು, ಜು.1ಕ್ಕೆ ನೂರು ವರ್ಷ ಪೂರೈಸಲಿದೆ.
1921 ಜು.1ರಂದು ಧಾರವಾಡದಲ್ಲಿ ಜಕಣಿ ಬಾವಿ ಹತ್ತಿರವಿದ್ದ ಸಾರಾಯಿ ಅಂಗಡಿಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ, ಬ್ರಿಟಿಷರ ಗೋಲಿಬಾರಿಗೆ ಮಲ್ಲಿಕಸಾಬ ಬಿನ್ ಮರ್ದಾನ ಸಾಬ, ಗೌಸುಸಾಬ ಬಿನ್ ಖಾದರ ಸಾಬ, ಅಬ್ದುಲ್ ಗಫಾರ ಚೌಕಥಾಯಿ ಎಂಬ ಮೂವರು ಖೀಲಾಫತ್ ಕಾರ್ಯಕರ್ತರು ವೀರ ಮರಣವನ್ನಪ್ಪಿ, 100 ವರ್ಷಗಳಾಗಿವೆ. ಇವರ ಸ್ಮರಣೆ ನಿಮಿತ್ತ ಕೇಂದ್ರ ಸರ್ಕಾರ 25ನೆಯ ಸ್ವಾತಂತ್ರ್ಯೊತ್ಸವದ ನೆನಪಿಗಾಗಿ ಹುತಾತ್ಮರ ಸ್ಮಾರಕ ನಿರ್ಮಿಸಿದೆ. ಈ ಸ್ಮಾರಕದ ಎದುರು ಗುರುವಾರ ಹುತಾತ್ಮರ ದಿನಾಚರಣೆ ನಡೆಯಲಿದೆ.
ಹೋರಾಟದ ಸಂಕ್ಷಿಪ್ತ ಇತಿಹಾಸ: ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲಿ ಧಾರವಾಡದ ಜನತೆ ಮುಂಚೂಣಿಯಲ್ಲಿದ್ದರು. ಗಾಂ ಧೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಕಾರ ಆಂದೋಲನ ಧಾರವಾಡದಲ್ಲಿಯೂ ಸಂಗ್ರಾಮದ ಕಿಚ್ಚು ಹೊತ್ತಿಸಿತ್ತು. ಸಭೆ-ಮೆರವಣಿಗೆಗಳಲ್ಲದೆ ಸಿಂದಿ ಸಾರಾಯಿ ಅಂಗಡಿಗಳ ಮುಂದೆ ಪ್ರತಿಭಟನೆ ಸಾಗಿತ್ತು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಆಗ ಇಬ್ಬರು ಖೀಲಾಫತ್ ಸ್ವಯಂ ಸೇವಕರಿಗೆ ಆರು ತಿಂಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಅದರ ಪ್ರತಿಭಟನಾರ್ಥ 1921 ಜು.1ರಂದು ಪ್ರತಿಭಟನಾ ಸಭೆಯೂ ನಡೆಯಿತು. ಆಗ ಸಾರಾಯಿ ಅಂಗಡಿ ಸುಡಲು ಯತ್ನಿಸಿದರು. ದೊಂಬಿ ಮಾಡಿದರು ಎಂದೆಲ್ಲ ಕಾರಣ ಹೇಳಿದ ಬ್ರಿಟಿಷರು, ಗೋಲಿಬಾರ್ ಮಾಡಿ ಮೂವರು ಖೀಲಾಫತ್ ಕಾರ್ಯಕರ್ತರನ್ನು ಕೊಂದರು.
ಈ ಘಟನೆಯಲ್ಲಿ 39 ಜನರಿಗೆ ಗಾಯವಾಯಿತು. ಶಿವಲಿಂಗಯ್ಯ ಅಯ್ಯಪ್ಪಯ್ಯ ಲಿಂಬೆಣ್ಣದೇವರಮಠ ಅವರಿಗೆ ಹೊಟ್ಟೆಗೆ ಗುಂಡು ತಗುಲಿ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಈಗಲೂ ಸ್ಮರಿಸುತ್ತಾರೆ ಅವರ ಮಗ ಸಂಗಮೇಶ್ವರಯ್ಯ ಲಿಂಬೆಣ್ಣದೇವರಮಠ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.