ಸಾಲಮನ್ನಾ ಮಾಡದಿದ್ದರೆ ಹೋರಾಟ


Team Udayavani, Jun 27, 2018, 12:27 PM IST

m4-salamanna.jpg

ಮೈಸೂರು: ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರ ನುಣುಚಿಕೊಳ್ಳಲು ಬಿಡುವುದಿಲ್ಲ. ಬಜೆಟ್‌ ಮಂಡನೆವರೆಗೆ ಕಾದು ನೋಡಿ ಹೋರಾಟ ರೂಪಿಸುತ್ತೇವೆ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಆರಂಭವಾಗಿದ್ದರೂ ಬ್ಯಾಂಕುಗಳು ರೈತರಿಗೆ ಹೊಸದಾಗಿ ಸಾಲ ನೀಡುತ್ತಿಲ್ಲ. ಸಾಲದ ಬಾಕಿ ತೀರಿಸುವಂತೆ ನೋಟಿಸ್‌ ಕೊಡುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನಪರ ಆಡಳಿತ ನೀಡಿ: ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳು ಒಂದಾಗಿ ಜನತೆಗೆ ಒಳ್ಳೆಯ ಆಡಳಿತ ನೀಡಬೇಕು. ಅದನ್ನು ಬಿಟ್ಟು ಈಗಲೇ ಎರಡೂ ಪಕ್ಷಗಳು ಕಾದಾಡಿ ಎಳೆದಾಡುತ್ತಿರುವುದು ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಎರಡೂ ಪಕ್ಷಗಳ ನಾಯಕರಲ್ಲಿ ಮಿಶ್ರ ಅಭಿಪ್ರಾಯವಿದ್ದರೂ ಸರ್ಕಾರದ ಅಭಿಪ್ರಾಯ ಒಟ್ಟಾಗಿರಬೇಕು ಎಂದು ಹೇಳಿದರು.

ಸ್ವಾಗತಾರ್ಹ: ಸರ್ಕಾರ ಇಸ್ರೇಲ್‌ ಬೇಸಾಯ ಪದ್ಧತಿ ಅಳವಡಿಕೆಯನ್ನು ಕೈಬಿಟ್ಟು, ಆಂಧ್ರಪ್ರದೇಶ ಮಾದರಿ ಕೃಷಿ ಪದ್ಧತಿ ಒಪ್ಪಿಕೊಳ್ಳಲು ಮುಂದೆ ಬಂದಿರುವುದು ಸ್ವಾಗತಾರ್ಹ. ಇಸ್ರೇಲ್‌ ಬೇಸಾಯ ಪದ್ಧತಿ ನಮಗೆ ಮಾದರಿಯಲ್ಲ. ಅದೊಂದು ಅಗ್ರಿ ಬಿಸಿನೆಸ್‌ ಲಾಬಿ. ಭಾರತಕ್ಕೆ ಯಾವ ಮಾದರಿಯೂ ಬೇಕಿಲ್ಲ.

ಇಸ್ರೇಲ್‌ ಬೇಸಾಯ ಪದ್ಧತಿಯಲ್ಲಿ ಹೇಳುವ ಹನಿ ನೀರಾವರಿ, ಪೈಪ್‌ಲೇನ್‌ ಅಳವಡಿಕೆಯನ್ನು ನಮ್ಮ ರೈತರು ಈಗಾಗಲೇ ಅನುಸರಿಸುತ್ತಿದ್ದಾರೆ. ಪ್ಯಾಲೇಸ್ತೇನ್‌ನಲ್ಲಿ ಶೇ.70ರಷ್ಟು ರೈತರು ಇಸ್ರೇಲ್‌ ಬೇಸಾಯ ಪದ್ಧತಿ ಅಳವಡಿಸಿಕೊಂಡು ಈಗ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಅಗ್ರಿ ಬಿಸಿನೆಸ್‌ ಲಾಬಿಗೆ ತಡೆ: ಆಂಧ್ರಪ್ರದೇಶ ಸರ್ಕಾರ ಸುಭಾಷ್‌ ಪಾಳೇಕಾರ್‌ ಅವರ ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರತ್ಯೇಕ ಸಚಿವಾಲಯವನ್ನೇ ಮಾಡಿ, ನಿವೃತ್ತ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಕರ್ನಾಟಕ ಸರ್ಕಾರ ಕೂಡ ಇಲ್ಲಿನ ಅಧಿಕಾರಿಗಳನ್ನು ಆಂಧ್ರಕ್ಕೆ ಕಳುಹಿಸಿ ಆ ಪದ್ಧತಿಯನ್ನು ಅಧ್ಯಯನ ಮಾಡಿಸಿ ವರದಿ ಪಡೆದು ಅನುಷ್ಠಾನ ಮಾಡಲಿ.

ಇದರಿಂದ ವಿಷಯುಕ್ತ ಆಹಾರ ಉಣ್ಣುವುದಕ್ಕೆ ತಡೆ, ಅಗ್ರಿ ಬಿಸಿನೆಸ್‌ ಲಾಬಿಗೆ ತಡೆ ಹಾಕಿದಂತಾಗುತ್ತದೆ. ಕೃಷಿ ವಿವಿಗಳನ್ನು ಹೊರಗಿಟ್ಟು ಈ ಕೆಲಸ ಮಾಡಬೇಕು ಎಂದು ಹೇಳಿದರು. ಆಂಧ್ರಪ್ರದೇಶ ಸರ್ಕಾರ ಅಳವಡಿಸಿಕೊಂಡಿರುವ ಶೂನ್ಯಬಂಡವಾಳ ಕೃಷಿ ಪದ್ಧತಿಯ ಅಧ್ಯಯನಕ್ಕಾಗಿ ರೈತ ಸಂಘಟನೆಯಿಂದಲೂ 15 ರಿಂದ 20 ಜನರ ತಂಡ ಸದ್ಯದಲ್ಲೇ ಆಂಧ್ರಪ್ರದೇಶಕ್ಕೆ ತೆರಳುವುದಾಗಿ ತಿಳಿಸಿದರು.

ಖರೀದಿ ಕೇಂದ್ರ ತೆರೆಯಿರಿ: ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಅಥವಾ ಸ್ಥಳೀಯ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಖಂಡನೆ: ಕರ್ನಾಟಕ ಸರ್ಕಾರದ ವಾದವನ್ನೇ ಆಲಿಸದೆ, ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ನಿಲುವು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಲ್ಲ. ಕೇಂದ್ರ ಸರ್ಕಾರ ನಾಲ್ಕೂ ರಾಜ್ಯಗಳ ವಾದ ಕೇಳಬೇಕಿತ್ತು ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಮರಂಕಯ್ಯ, ಮುಖಂಡರಾದ ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್‌ ಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.