ಚಿತ್ರ ಮಾಧ್ಯಮ ಸಂಸ್ಕೃತಿಯ ಪ್ರತಿಬಿಂಬ

ಕಲಾ ಪ್ರದರ್ಶನಕ್ಕೆ ಯೋಗ್ಯವಾದ ಮ್ಯೂಜಿಯಂ ಮಾಡಬೇಕಿದೆ:ರಾಜೂರು

Team Udayavani, Jun 23, 2022, 12:12 PM IST

6

ಧಾರವಾಡ: ಚಿತ್ರ ಮಾಧ್ಯಮ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಡಾ| ವೀರಣ್ಣ ರಾಜೂರ ಹೇಳಿದರು.

ನಗರದ ಕವಿಸಂನಲ್ಲಿ ಹಿರಿಯ ಕಲಾವಿದ ರಾಮಣ್ಣ ಸೂರಿ ಅವರ ಡಿಜಿಟಲ್‌ ಕಲಾಕೃತಿಗಳು ಹಾಗೂ ಬಿ.ಜಿ.ಗುಜ್ಜಾರಪ್ಪ ಅವರ ಅಕ್ರಾಲಿಕ್‌ ಕಲಾಕೃತಿಗಳ ಐದು ದಿನಗಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡದ ಚಿತ್ರಕಲೆ ಕ್ಷೇತ್ರಕ್ಕೆ ಡಿ.ಬಿ ಹಾಲಭಾವಿಯವರಿಂದ ಹಿಡಿದು ಇಂದಿನ ಕಲಾವಿದರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕವಿಸಂ ಬದ್ಧತೆ ಇಟ್ಟುಕೊಂಡುಎಲ್ಲ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಲಾ ಪ್ರದರ್ಶನಕ್ಕೆ ಯೋಗ್ಯವಾದ ಮ್ಯೂಜಿಯಂ ಮಾಡಬೇಕಿದೆ ಎಂದರು.

ತುಮಕೂರಿನ ಹಿರಿಯ ಕಲಾವಿದ ಪ್ರಭು ಹರಸೂರ ಮಾತನಾಡಿ, ಎಲ್ಲ ಕಲೆಗೆ ಮೂಲ ಕಲೆ ಚಿತ್ರಕಲೆ. ಹಿರಿಯ ಕಲಾವಿದರ ಚಿತ್ರಕಲೆಗಳ ಒಳಗಿನ ಸೂಕ್ಷ್ಮತೆಯನ್ನು ಗಮನಿಸುವಂತಾಗ ಬೇಕು. ಆವಾಗಲೇ ಕಲಾ ವಿದ್ಯಾರ್ಥಿಗಳು ತಮ್ಮ ಚಿತ್ರಕಲೆಯಲ್ಲಿ ಹೊಸತನ ತಂದುಕೊಳ್ಳಲು ಸಾಧ್ಯವಿದೆ ಎಂದರು.

ಕಲಾವಿದ ಬಿ.ಜಿ. ಗುಜ್ಜಾರಪ್ಪ ಮಾತನಾಡಿ, ಕಲಾವಿದ ಮಾತುಗಾರ ನಿರುವುದಿಲ್ಲ. ಭಾಷಣಕಾರನಿಗೆ ಹೇಗೆ ಪದಗಳು ಪುಂಕಾನುಪುಂಕವಾಗಿ ಅವರ ಬಾಯಲ್ಲಿ ಬರುತ್ತವೋ ಹಾಗೆ ಕಲಾವಿದನ ತಲೆಯಲ್ಲಿ ರೇಖೆಗಳು ತೆರೆತೆರೆಯಾಗಿ ಬರುತ್ತವೆ.ಕಲೆಯನ್ನು ಸರಿಯಾಗಿ ಬಳಸಿಕೊಂಡು ಒಳ್ಳೆಯ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.

ಕಲಾವಿದ ರಾಮಣ್ಣ ಸೂರಿ ಮಾತನಾಡಿ, ಡಿಜಿಟಲ್‌ ಚಿತ್ರಕಲೆಗೆ ಹೋಗುವವರು ಕ್ಯಾನವಾಸ್‌ದಲ್ಲಿ ಚಿತ್ರ ಬಿಡಿಸುವಲ್ಲಿ ಪರಿಣತಿ ಹೊಂದಿದವರಿರಬೇಕು. ಡಿಜಿಟಲ್‌ ಕಲೆಯಲ್ಲಿ ಬೇಕಾದಷ್ಟು ಅವಕಾಶಗಳಿವೆ. ತ್ವರಿತವಾಗಿ ಕಲೆ ಬಿಡಿಸಬಹುದು. ಅದೇ ಕ್ಯಾನವಾಸ್‌ನಲ್ಲಿ ಮಾಡುವಾಗ ತಿಂಗಳಾನುಗಟ್ಟಲೇ ಕೆಲಸ ಮಾಡಬೇಕಾಗುತ್ತದೆ ಎಂದರು.

ಬಿ. ಮಾರುತಿ ಪ್ರಾಸ್ತಾವಿಕ ಮಾತನಾಡಿದರು. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಹಾಲಭಾವಿ, ಡಾ|ಪಾರ್ವತಿ ಹಾಲಭಾವಿ, ಎಸ್‌. ಎಮ್‌ ಲೋಹಾರ, ಎಸ್‌.ಕೆ. ಪತ್ತಾರ, ಎಂ.ಆರ್‌.ಬಾಳಿಕಾಯಿ, ಎಚ್‌.ಎಫ್‌. ಚಿಕ್ಕಮಠ, ಡಾ|ಆನಂದ ಪಾಟೀಲ, ಬಿ.ಎಂ. ಪಾಟೀಲ, ಸುಪ್ರೀಯಾ ದೀಪಕ್‌ ಮುಂತಾದ ಹಿರಿಯ ಕಲಾವಿದರು ಪಾಲ್ಗೊಂಡಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಬಿ.ಹೆಚ್‌. ಕುರಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ಇಂದಿನಿಂದ ಚಿತ್ರಕಲಾ ಪ್ರದರ್ಶನ

ಧಾರವಾಡ: ಇಲ್ಲಿಯ ಜೆಎಸ್ಸೆಸ್‌ ಹಾಲಬಾವಿ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಜೂ.23 ರಿಂದ ಜೂ.26ರವರೆಗೆ ಪೂಜಾ ನೇರಲೇಕರ, ಮಗಳು ಚೈತ್ರಾ ನೇರಲೇಕರ ಅವರ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಮೋದ ನೇರಲೇಕರ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.23ರಂದು ಬೆಳಿಗ್ಗೆ 10:00 ಗಂಟೆಗೆ ಹಾಲಬಾವಿ ಸ್ಕೂಲ್‌ ಆಫ್‌ ಆರ್ಟ್‌ ಕಾಲೇಜು ವಿಶ್ರಾಂತ ಪ್ರಾಚಾರ್ಯ ಎಸ್‌ .ಡಿ. ಹಾಲಬಾವಿ ಪ್ರದರ್ಶನಕ್ಕೆ ಚಾಲನೆ ನೀಡುವರು.

ಅತಿಥಿಗಳಾಗಿ ಪ್ರಾಚಾರ್ಯರಾದ ಡಾ|ಪಿ.ಎಂ. ಜಿಜೋ, ಡಾ|ಬಿ.ಎಂ.ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಜಿ. ಬಿರಾದಾರ ಪಾಲ್ಗೊಳ್ಳಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಲಾಸಕ್ತರು ಪ್ರದರ್ಶನದಲ್ಲಿ ಭಾಗವಹಿಸಬೇಕು. ಜೂ.23ರಿಂದ ಜೂ.26ರವರೆಗೆ ನಿತ್ಯ ಬೆಳಿಗ್ಗೆ 11:00 ರಿಂದ ಸಂಜೆ 4:00 ಗಂಟೆವರೆಗೆ ಕಲಾಕೃತಿಗಳ ಪ್ರದರ್ಶನ ಇರಲಿದೆ ಎಂದರು. ಪೂಜಾ ನೇರಲೇಕರ ಮಾತನಾಡಿ, ನಾನು ನನ್ನ ಮಗಳು ಇಬ್ಬರೂ ಒಟ್ಟಿಗೆ ತೆಗೆದಿರುವ 40ಕ್ಕೂ ಹೆಚ್ಚು ಪರಿಸರ, ಪ್ರಾಣಿ-ಪಕ್ಷಿ ಇತರೆ ರೀತಿಯ ಕಲಾಕೃತಿಗಳ ಪ್ರದರ್ಶನವನ್ನು ನಾನು ಕಲಿತ ಸಂಸ್ಥೆಯಲ್ಲಿಯೇ ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದರು.

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.