ಫಸಲ್‌ ಬಿಮಾ ಯೋಜನೆ ಅನುಷ್ಠಾನ

ಬೆಳೆಗಳ ನೋಂದಣಿ ಮಾಡಿಕೊಂಡು ವಿಮಾ ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ನಿತೇಶ್‌ ಸಲಹೆ

Team Udayavani, Nov 4, 2020, 8:06 PM IST

ಫಸಲ್‌ ಬಿಮಾ ಯೋಜನೆ ಅನುಷ್ಠಾನ

ಧಾರವಾಡ: 2020-21 ನೇ ಸಾಲಿನ  ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರûಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ. ಈ ಯೋಜನೆಯಡಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ/ಸ್ಥಳೀಯಸಂಸ್ಥೆಗಳನ್ನು ಘಟಕಗಳನ್ನಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವನ್ನಾಗಿ ಪರಿಗಣಿಸಿ ಅಧಿಸೂಚಿಸಲಾಗಿದೆ. ಅಧಿಸೂಚಿತ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ಇಂಡೆಮ್ನಿಟಿ ಮಟ್ಟ, ವಿಮಾ ಮೊತ್ತ ಮತ್ತು ರೈತರ ಪಾಲಿನ ಕಂತಿನ ವಿವರಣೆಗಳನ್ನು ಒದಗಿಸಲಾಗಿದೆ.

ನೋಂದಣಿಗೆ ಕೊನೆಯ ದಿನಾಂಕಗಳು: ಗ್ರಾಮ ಪಂಚಾಯಿತಿ ಮಟ್ಟದ ಹಿಂಗಾರು ಹಂಗಾಮಿನ ಮಳೆ ಆಶ್ರಿತ ಕಡಲೆ ಮತ್ತು ಜೋಳಕ್ಕೆ ನ.30, ಹೋಬಳಿ ಮಟ್ಟದ ಮಳೆ ಆಶ್ರಿತ ಹುರುಳಿ, ಕುಸುಮೆ,  ಸೂರ್ಯಕಾಂತಿ ಬೆಳೆಗಳಿಗೆ ನ.17, ಹೋಬಳಿ ಮಟ್ಟದ ಮಳೆ ಆಶ್ರಿತ ಕಡಲೆ, ಹೆಸರು, ಮುಸುಕಿನ ಜೋಳ, ಗೋಧಿ ಹಾಗೂ ನೀರಾವರಿಯ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೆಳೆಗಳಿಗೆ ನ.30, ಹೋಬಳಿ ಮಟ್ಟದ ನೀರಾವರಿ ಗೋಧಿಗೆ ಡಿ.16, ಹೋಬಳಿ ಮಟ್ಟದ ನೀರಾವರಿ ಕಡಲೆಗೆ ಡಿ.31 ಹಾಗೂ ಹೋಬಳಿ ಮಟ್ಟದ ಬೇಸಿಗೆ ಹಂಗಾಮಿನ ನೀರಾವರಿ ಶೇಂಗಾ ಬೆಳೆಗೆ 2021ರ ಮಾರ್ಚ್‌ 1ರವರೆಗೆ ನೋಂದಣಿಗೆ ಅವಕಾಶವಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಬೆಳೆ ಸಾಲ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಈ ಮಾರ್ಗ ಸೂಚಿಗಳನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು. ನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ ಆ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖೀತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಜಿಲ್ಲೆಯ ರೈತರು ತಮ್ಮ ಬೆಳೆಗಳ ನೋಂದಣಿ ಮಾಡಿಕೊಂಡು ವಿಮಾ ಸೌಲಭ್ಯ ಪಡೆಯಲು ಡಿಸಿ ನಿತೇಶ್‌ ಪಾಟೀಲ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕವಾರು ನಿಯೋಜಿಸಲ್ಪಟ್ಟ ಭಾರತಿ ಆಕ್ಸಾ ಜನರಲ್‌ ಇನ್ಸುರೆನ್ಸ್‌ ಕಂಪನಿ ಪ್ರತಿನಿಧಿಗಳಾದ ಧಾರವಾಡ-ವಿಶ್ವನಾಥ ಹಿರೇಮಠ (9901647472), ಹುಬ್ಬಳ್ಳಿ-ಸಚಿನ್‌ ಕಮಕರ್‌ (8217053424), ಕಲಘಟಗಿ-ನಿಂಗಪ್ಪ ತಾವರಗೇರಿ (9743111618), ಕುಂದಗೋಳ- ರೇವಚಿತ ಬಾಗೇವಾಡಿ (9880421969), ನವಲಗುಂದ-ಮುತ್ತನಗೌಡ ಹಿರೇಗೌಡರ 6360335368 ಸಂಪರ್ಕಿಸಬಹುದು.

ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳ ಪಟ್ಟಿ :

ಧಾರವಾಡ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು-ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಕನಕೂರ, ಕರಡಿಗುಡ್ಡ, ಪುಡಕಲಕಟ್ಟಿ, ಮರೇವಾಡ, ಮಾರಡಗಿ, ಶಿವಳ್ಳಿ, ಹಾರೋಬೆಳವಡಿ, ಹೆಬ್ಬಳ್ಳಿ, ತೇಗೂರ, ಕುರುಬಗಟ್ಟಿ, ಕೊಟಬಾಗಿ, ಕೋಟೂರು, ಗರಗ, ತಡಕೋಡ, ನರೇಂದ್ರ, ಬೇಲೂರ, ಮಾದನಭಾವಿ, ಯಾದವಾಡ, ಲೋಕೂರ, ಹಂಗರಕಿ, ಧಾರವಾಡ. ಮತ್ತು ಮಳೆ ಆಶ್ರಿತ ಜೋಳ-ನಿಗದಿ, ಮನಗುಂಡಿ, ಮನಸೂರ, ಯರಿಕೊಪ್ಪ. ಹುಬ್ಬಳ್ಳಿ ತಾಲೂಕು: ಮಳೆ ಆಶ್ರಿತ ಜೋಳ ಬೆಳೆ-ಅಗಡಿ, ಅದರಗುಂಚಿ, ಕಟ್ನೂರ, ಕರಡಿಕೊಪ್ಪ, ಚನ್ನಾಪೂರ, ಛಬ್ಬಿ, ನೂಲ್ವಿ, ಬಿ.ಅರಳೀಕಟ್ಟಿ, ಬೆಳಗಲಿ, ರಾಯನಾಳ, ವರೂರ, ಶೆರೆವಾಡ, ಅಂಚಟಗೇರಿ, ದೇವರಗುಡಿಹಾಳ, ಇಂಗಳಹಳ್ಳಿ, ಉಮಚಗಿ, ಕಿರೇಸೂರ, ಕುಸುಗಲ್ಲ, ಕೋಳಿವಾಡ, ಬಂಡಿವಾಡ, ಬ್ಯಾಹಟ್ಟಿ, ಮಂಟೂರ, ಶಿರಗುಪ್ಪಿ, ಸುಳ್ಳ, ಹಳ್ಯಾಳ, ಹೆಬಸೂರ, ಹುಬ್ಬಳ್ಳಿ.

ಕಲಘಟಗಿ ತಾಲೂಕು: ಮಳೆ ಆಶ್ರಿತ ಜೋಳೆ ಬೆಳೆ-ಕಲಘಟಗಿ, ದಾಸ್ತಿಕೊಪ್ಪ, ದೇವಿಕೊಪ್ಪ, ತಾವರಗೇರಿ, ಬೆಲವಂತರ, ಮಡಕಿಹೊನ್ನಳ್ಳಿ, ಗಂಜಿಗಟ್ಟಿ, ಗುಡ್ಡದ ಹುಲಿಕಟ್ಟಿ, ಜಿನ್ನೂರ, ತಬಕದ ಹೊನ್ನಳ್ಳಿ, ಬಮ್ಮಿಗಟ್ಟಿ, ಬೋಗೆನಾಗರಕೊಪ್ಪ, ಮುಕ್ಕಲ, ಸೂರಶೆಟ್ಟಿಕೊಪ್ಪ, ಉಗ್ಗಿನಕೆರೆ, ಕುರುವಿನಕೊಪ್ಪ, ಗಂಭ್ಯಾಪುರ, ಗಳಗಿ, ಜಿ. ಬಸವನಕೊಪ್ಪ, ದುಮ್ಮವಾಡ, ದೇವಲಿಂಗಿಕೊಪ್ಪ, ಮಿಶ್ರಿಕೋಟಿ, ಮುತ್ತಗಿ, ಹಿರೇಹೊನ್ನಳ್ಳಿ, ಬೇಗೂರ ಕುಂದಗೋಳ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು, ಕುಂದಗೋಳ, ಇಂಗಳಗಿ, ಕಮಡೊಳ್ಳಿ, ಕುಬಿಹಾಳ, ಗುರುವಿನಹಳ್ಳಿ, ದೇವನೂರ, ಬು.ತರ್ಲಗಟ್ಟಿ, ಬೆಟದೂರ, ಮತ್ತಿಗಟ್ಟಿ, ಮಳಲಿ, ಯಲಿವಾಳ, ರಾಮನಕೊಪ್ಪ, ಶಿರೂರ, ಹಿರೇಹರಕುಣಿ, ಗುಡೇನಕಟ್ಟಿ, ಕಳಸ, ಗುಡಗೇರಿ, ಗೌಡಗೇರಿ, ಚಾಕಲಬ್ಬಿ, ಪಶುಪತಿಹಾಳ, ಯರಗುಪ್ಪಿ, ಯರೇಬೂದಿಹಾಳ, ರೊಟ್ಟಿಗವಾಡ, ಸಂಶಿ, ಹರ್ಲಾಪೂರ, ಹಿರೆಗುಂಜಾಳ, ಹಿರೇನರ್ತಿ. ನವಲಗುಂದ ತಾಲೂಕು: ಮಳೆ ಆಶ್ರಿತ ಜೋಳ ಮತ್ತು ಕಡಲೆ ಬೆಳೆಗಳು-ಅಣ್ಣಿಗೇರಿ, ಇಬ್ರಾಹಿಂಪುರ, ಗುಡಿಸಾಗರ, ತಡಹಾಳ, ತುಪ್ಪದಕುರಹಟ್ಟಿ, ನಲವಡಿ, ನಾಯಕನೂರ, ನಾವಳ್ಳಿ, ಭದ್ರಾಪುರ, ಶಲವಡಿ, ಶಿಶ್ವಿ‌ನಹಳ್ಳಿ, ಸಾಸ್ವಿಹಳ್ಳಿ, ಹಳ್ಳಿಕೇರಿ, ಬೆಳಹಾರ (ಚಿಲಕವಾಡ), ನವಲಗುಂದ, ಅಳಗವಾಡಿ, ಕಾಲವಾಡ, ಗುಮ್ಮಗೋಳ, ಜಾವೂರ, ತೀರ್ಲಾಪೂರ, ಬೆಳವಟಗಿ, ಮೊರಬ, ಯಮನೂರ, ಶಿರಕೋಳ, ಶಿರೂರ, ಹಾಳಕುಸುಗಲ್ಲ, ಹೆಬ್ಟಾಳ.

ಹೋಬಳಿ ಮಟ್ಟದ ಬೆಳೆಗಳ ಪಟ್ಟಿ : ಅಣ್ಣಿಗೇರಿ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ. ಅಳ್ನಾವರ ಹೋಬಳಿ-ಮಳೆ ಆಶ್ರಿತ ಹುರುಳಿ, ಕಲಘಟಗಿ ಹೋಬಳಿ-ಮಳೆ ಆಶ್ರಿತ ಕಡಲೆ, ಹುರುಳಿ, ಹೆಸರು, ನೀರಾವರಿ ಮುಸುಕಿನಜೋಳ. ತಬಕದ ಹೊನ್ನಳ್ಳಿ ಹೋಬಳಿ-ನೀರಾವರಿ ಜೋಳ, ಮುಸುಕಿನ ಜೋಳ, ಮಳೆ ಆಶ್ರಿತ ಹುರುಳಿ, ಹೆಸರು. ಧುಮ್ಮವಾಡ ಹೋಬಳಿ-ಮಳೆ ಆಶ್ರಿತ ಕಡಲೆ, ಹುರುಳಿ, ಹೆಸರು, ನೀರಾವರಿ ಜೋಳ, ಮುಸುಕಿನ ಜೋಳ. ಕುಂದಗೋಳಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ, ಮುಸುಕಿನಜೋಳ, ಸಂಶಿ ಹೋಬಳಿ ಮಳೆ-ಆಶ್ರಿತ ಕುಸುಮೆ, ಗೋಧಿ, ಮುಸುಕಿನ ಜೋಳ, ಸೂರ್ಯಕಾಂತಿ, ಹುರುಳಿ. ಅಮ್ಮಿನಭಾವಿ ಹೋಬಳಿ- ಮಳೆ ಆಶ್ರಿತ ಕುಸುಮೆ, ಗೋಧಿ, ನೀರಾವರಿ ಕಡಲೆ, ಗೋಧಿ , ಮುಸುಕಿನ ಜೋಳ. ಗರಗ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ, ನೀರಾವರಿ ಗೋಧಿ, ಮುಸುಕಿನ ಜೋಳ. ಧಾರವಾಡ ಹೋಬಳಿ-ಮಳೆ ಆಶ್ರಿತ ಗೋಧಿ, ಹೆಸರು, ನೀರಾವರಿ ಮುಸುಕಿನ ಜೋಳ. ನವಲಗುಂದ ತಾಲೂಕು ಮೊರಬ ಹೋಬಳಿ-ಮಳೆ ಆಶ್ರಿತ ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಜೋಳ, ಮುಸುಕಿನಜೋಳ, ಸೂರ್ಯಕಾಂತಿ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ , ಮುಸುಕಿನಜೋಳ, ಹುರುಳಿ, ನೀರಾವರಿ ಮುಸುಕಿನಜೋಳ. ಶಿರಗುಪ್ಪಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ , ಸೂರ್ಯಕಾಂತಿ, ನೀರಾವರಿ ಕಡಲೆ, ಗೋಧಿ , ಜೋಳ, ಮುಸುಕಿನ ಜೋಳ. ಹುಬ್ಬಳ್ಳಿ ಹೋಬಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಹುರುಳಿ ನೀರಾವರಿ ಜೋಳ, ಮುಸುಕಿನ ಜೋಳ. ಹುಬ್ಬಳ್ಳಿ ನಗರ-ಛಬ್ಬಿ ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಮುಸುಕಿನ ಜೋಳ, ಹುರುಳಿ, ನೀರಾವರಿ ಮುಸುಕಿನ ಜೋಳ.ಹುಬ್ಬಳ್ಳಿ-ಮಳೆ ಆಶ್ರಿತ ಕಡಲೆ, ಕುಸುಮೆ, ಗೋಧಿ, ಹುರುಳಿ, ನೀರಾವರಿ ಜೋಳ. ಛಬ್ಬಿ ಹೋಬಳಿ-ನೀರಾವರಿ ಶೇಂಗಾ. ಧುಮ್ಮವಾಡ ಹೋಬಳಿ-ನೀರಾವರಿ ಶೇಂಗಾ, ಸಂಶಿ ಹೋಬಳಿ-ನೀರಾವರಿ ಶೇಂಗಾ.

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.