ನಿಸರ್ಗ ಉಳಿವಿಗಾಗಿ ಪಕ್ಷಿ ಸಂಕುಲದ ಪಾತ್ರ ಮುಖ್ಯ
Team Udayavani, Feb 15, 2017, 1:29 PM IST
ಧಾರವಾಡ: ನಿಸರ್ಗ ಉಳಿವಿಗಾಗಿ ಪಕ್ಷಿ ಸಂಕುಲದ ಪಾತ್ರ ಬಹುಮುಖ್ಯವಾಗಿದೆ ಎಂದು ಪಕ್ಷಿತಜ್ಞ ಎಸ್.ಎಂ.ಪಾಟೀಲ ಹೇಳಿದರು. ನೇಚರ ರಿಸರ್ಚ್ ಸೆಂಟರ್ ಹಾಗೂ ಸುಸ್ಥಿರ ಅಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವದ ಜಾಗೃತಿಗಾಗಿ ಕವಿವಿಯ ಸಸ್ಯೋದ್ಯಾನದಲ್ಲಿ ಹಮ್ಮಿಕೊಂಡಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷಿಗಳು ಮತ್ತು ಮನುಷ್ಯನ ನಡುವೆ ಸಾವಿರಾರು ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥದಿಂದ ಕಾಡು, ಮರ ಗಿಡಗಳು ನಾಶವಾಗುತ್ತಿದ್ದು,ಇದರ ಪರಿಣಾಮ ಪಕ್ಷಿ ಸಂಕುಲ ಮೇಲೆಯೂ ಆಗಿದೆ. ಆದರೆ ಪಕ್ಷಿಗಳಿಲ್ಲದೆ ಮನುಷ್ಯ ಸಹಿತ ಬದುಕುವುದು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಆಗುವ ಕಾಲ ಬಹಳ ಸಮೀಪದಲ್ಲಿದೆ ಎಂದರು.
ಅತಿಥಿಯಾಗಿದ್ದ ಪಕ್ಷಿತಜ್ಞ ಆರ್.ಜಿ. ತಿಮ್ಮಾಪುರ ಮಾತನಾಡಿ, ನಶಿಸಿ ಹೋಗುತ್ತಿರುವ ಗುಬ್ಬಿಗಳನ್ನು ಮತ್ತೆ ಮರಳಿ ನಮ್ಮೊಡನೆ ಬದುಕುವ ಅವಕಾಶ ಮಾಡಿಕೊಡುವ ಅಗತ್ಯತೆಯಿದೆ. ಅವುಗಳಿಗೆ ಬೇಕಾದ ಪೂರಕ ವಾತಾವರಣವನ್ನು ಇಂದಿನ ಯುವಕರು ಮತ್ತು ಮಕ್ಕಳು ಮಾಡಿಕೊಡಬೇಕಿದೆ ಎಂದರು.
ಡಾ| ಸಂಜೀವ ಕುಲಕರ್ಣಿ ಮಾತನಾಡಿ, ಮಕ್ಕಳು ಪಕ್ಷಿ, ಪ್ರಕೃತಿ, ಗಿಡ-ಮರ, ನೀರು, ವಾಯು, ಕಾಡು ಇವೆಲ್ಲವುದರ ಮಹತ್ವ, ಪ್ರಾಮುಖ್ಯತೆ, ಅವಶ್ಯಕತೆ ಏಕೆಂಬುದನ್ನು ತಿಳಿಯಬೇಕಾದರೆ ಬರುವ ಪರಿಸರ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಿ ಪರಿಸರದ ಹಲವಾರು ಮಹತ್ತರ ಸಂಗತಿಗಳನ್ನು ತಿಳಿಯಬೇಕು ಎಂದರು.
ನೇಚರ್ ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಪಂಚಯ್ಯ ಹಿರೇಮಠ, ಉಪಾಧ್ಯಕ್ಷ ಚಂದ್ರಶೇಖರ ಬೈರಪ್ಪನವರ, ಕಾರ್ಯದರ್ಶಿ ಪ್ರಕಾಶ ಗೌಡರ, ಕಾರ್ಯಕ್ರಮದ ಸಂಚಾಲಕ ಧೀರಜ ವೀರನಗೌಡರ, ಅನಿಲ ಅಳ್ಳೊಳ್ಳಿ, ಅಸ್ಲಂಜಹಾನ ಅಬ್ಬಿಹಾಳ ಇದ್ದರು. ಇದಕ್ಕೂ ಮುನ್ನ ಬೆಳಗಿನ ಜಾವದಲ್ಲಿ 150ಕ್ಕೂ ಹೆಚ್ಚು ಮಕ್ಕಳನ್ನು ಪಕ್ಷಿ ತಜ್ಞರಾದ ಪಂಡಿತ ಮುಂಜಿ, ವೈದೇವಿ ಗುಂಜಾಳ, ಪವನ್ ಮಿಸ್ಕಿನ್, ಹೇಮಂತ ಮತ್ತು
ಎಸ್.ಬಿ.ಅಣ್ಣಿಗೇರಿ ಅವರು ಐದಾರು ತಂಡಗಳಾಗಿ ವಿಂಗಡಿಸಿ ವಿವಿಧ ಮಾರ್ಗಗಳಲ್ಲಿ ಕರೆದುಕೊಂಡು ಹೋಗಿ ಪಕ್ಷಿ ವೀಕ್ಷಣೆ ಮಾಡಿಸಿದರು. ವಿವಿಧ ಪಕ್ಷಿಗಳಾದ ಗೋಲ್ಡನ್ ಓರಿಯಾಲ, ಡ್ರಾಂಗೊ, ಕ್ಲೊರೆಪ್ಸಿಸ್, ಪರ್ಪಲ್ ಸನ್ ಬರ್ಡ್, ಗ್ರೀನ್ ಬಾರ್ಬಟ್, ಮೇಲ್ ಕೋಯಲ್, ವೈಟ್ ಹೆಡೆಡ್ ವ್ಯಾಬ್ಲಿರ್, ಇಂಡಿಯನ್ ಗೆ ಹಾರ್ನ್ ಬಿಲ್, ಆಶಿ ರೆಡ್ ವ್ಯಾಬ್ಲಿರ್, ಬು ರಾಕ್ ಪಿಜನ್‌ನಂತಹ ಪಕ್ಷಿಗಳನ್ನು ಗುರುತಿಸಿ ಅವುಗಳ ಮಹತ್ವಗಳನ್ನು ಮಕ್ಕಳಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.