ಸಾಲುಮರದ ತಿಮ್ಮಕ್ಕ ಉದ್ಯಾನವನ ಉದ್ಘಾಟನೆ
ಯುವ ಪೀಳಿಗೆಗೆ ಜ್ಞಾನ-ವಿಜ್ಞಾನ ಪರಿಚಯಿಸುವ ಕಾರ್ಯಕ್ಕೆ ಸಹಕಾರಿಯಾಗಲಿ: ಸಚಿವ ಮುನೇನಕೊಪ್ಪ
Team Udayavani, Apr 12, 2022, 1:11 PM IST
ಅಳ್ನಾವರ: ಅರಣ್ಯ ಇಲಾಖೆಯವರು ಇಲ್ಲಿನ ಸುಂದರದ ಪರಿಸರದಲ್ಲಿ ನಿರ್ಮಿಸಿದ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಚಿಟ್ಟೆ ಪಾರ್ಕ್ ಯುವ ಪೀಳಿಗೆಯ ಜ್ಞಾನ ವೃದ್ಧಿಸಲಿ ಹಾಗೂ ಔಷಧೀಯ ಸಸ್ಯ ವಿಭಾಗ ವಿದ್ಯಾರ್ಥಿಗಳಿಗೆ ವಿಜ್ಞಾನದ ಪರಿಚಯ ಮಾಡುವ ಕಾರ್ಯಕ್ಕೆ ನಾಂದಿ ಹಾಡಲಿ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಇಲ್ಲಿನ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಲೋಕಾರ್ಪಣೆ ಮಾಡಿ ಅವರು ಮಾತಮಾಡಿದರು.
ಜಿಲ್ಲೆಯಲ್ಲಿ ಇದೊಂದು ಮಾದರಿ ಗಾರ್ಡನ್ ಆಗಲಿ. ಶಾಲಾ ಮಕ್ಕಳು ಪ್ರವಾಸಕ್ಕೆ ಬರಲಿ. ಬ್ರಿಟಿಷರ ಕಾಲದಲ್ಲಿ ಕಟ್ಟಿಗೆ ಇಡಲು ಬಳಕೆಯಾದ ಈ ಪಾಳುಬಿದ್ದ ಸ್ಥಳದ ದೊಡ್ಡ ಗಿಡಗಳ ಮಧ್ಯ ವಿಶಾಲವಾದ ಜಾಗೆಯಲ್ಲಿ ನಿರ್ಮಿಸಿದ ಈ ತಾಣ ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಎಲ್ಲ ಸಹಕಾರ ನೀಡುವೆ ಎಂದರು.
ಮಲೆನಾಡಿನ ಪ್ರಕೃತಿ ಸೊಬಗಿನ ಹಸಿರು ತುಂಬಿದ ಜಾಗೆಯಲ್ಲಿನ ಈ ಗಾರ್ಡನ್ ಜನರ ಮನಸ್ಸಿಗೆ ಮುದ ನೀಡಲಿ. ಇಲ್ಲಿನ ಪರಿಶುದ್ಧ ಗಾಳಿ ಸೇವಿಸಿ ಆರೋಗ್ಯಯುತ ಬದುಕು ಕಟ್ಟಿಕೊಳ್ಳಿ. ಇಲ್ಲಿನ ಪ್ರಶಾಂತ ವಾತಾವರಣ ನೊಂದ ಮನಸ್ಸಿಗೆ ಮುದ ನೀಡಬಲ್ಲದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಮಾತ್ರ ಮನುಕುಲದ ಉಳಿವು ಸಾಧ್ಯ. ಸಾಲು ಮರದ ತಿಮ್ಮಕ್ಕಳ ಹೆಸರಲ್ಲಿ ಉದ್ಯಾನವನ ಸ್ಥಾಪಿಸಿದರೆ ಸಾಲದು. ಅವಳ ಪರಿಸರ ಪ್ರೇಮ ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರಾಣವಾಯು ಬದುಕಿಗೆ ಅತೀ ಮುಖ್ಯ ಎಂಬ ಅರಿವು ಎಲ್ಲರಲ್ಲಿ ಮೂಡಬೇಕು. ಗಿಡಗಳನ್ನು ರಕ್ಷಿಸುವ ಮೂಲಕ ಶುದ್ಧ ಗಾಳಿ, ನಿಸರ್ಗ ಕಾಪಾಡಲು ಎಲ್ಲರೂ ಪಣ ತೊಡಬೇಕು ಎಂದರು.
ಈ ಭಾಗದ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ. ಕಲಘಟಗಿ ಕ್ಷೇತ್ರದಲ್ಲಿ 100 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು, ಶೀಘ್ರದಲ್ಲಿ ಕೆಲಸಗಳು ಆರಂಭವಾಗಲಿವೆ. ಕಾಲಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಈ ಭಾಗಕ್ಕೆ ಅವಶ್ಯ ಅನುದಾನ ನೀಡಿದೆ ಎಂದು ಹೇಳಿದರು.
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಮಾತನಾಡಿ, ಹೇರಳವಾದ ನೈಸರ್ಗಿಕ ಸಂಪತ್ತು ಹೊಂದಿದ ಈ ಪರಿಸರದಲ್ಲಿ ಮೇಳೈಸಿದ ಗಾರ್ಡನ್ ಮಕ್ಕಳನ್ನು ಸೆಳೆಯುವಲ್ಲಿ ಸಫಲತೆ ಕಾಣಲಿ. ಇಲ್ಲಿನ ಬಣ್ಣದ ಚಿಟ್ಟೆಗಳನ್ನು ನೋಡುವುದೇ ಮನಸ್ಸಿಗೆ ಮಹದಾನಂದ ನೀಡುತ್ತದೆ. ವಿನಾಶದ ಅಂಚಿನಲ್ಲಿರುವ ಚಿಟ್ಟೆಗಳನ್ನು ರಕ್ಷಣೆ ಮಾಡಲು ಈ ಜಾಗೆ ಮುಂದೆ ಬರಲಿ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಅಜ್ಜಯ್ಯ ಜೆ.ಆರ್., ಎಸಿಎಫ್ ವಿನಿತಾ ಚವ್ಹಾಣ, ವಲಯ ಅರಣ್ಯಾಧಿಕಾರಿ ಮಹೇಶ ಹಿರೇಮಠ, ಪ್ರಕಾಶ ಕಮ್ಮಾರ, ತಹಶೀಲ್ದಾರ್ ಅಮರೇಶ ಪಮ್ಮಾರ, ತಾಪಂ ಇಒ ಸಂತೋಷ ಕುಮಾರ ತಳಕಲ್, ಪ್ರಕಾಶ ಹಾಲಮತ್, ಎಂ.ಸಿ. ಹಿರೇಮಠ, ಪಪಂ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್, ಡಾ| ಬಸವರಾಜ ಮೂಡಬಾಗಿಲ, ಮಂಗಳಾ ರವಳಪ್ಪನವರ, ನೇತ್ರಾವತಿ ಕಡಕೋಳ, ಸುನಂದಾ ಕಲ್ಲು, ಅಮೂಲ ಗುಂಜಿಕರ, ಶ್ರೀಪತಿ ಭಟ್, ರಾಜು ಯಲಕಪಾಟಿ, ಯಲ್ಲಪ್ಪ ಹೂಲಿ, ಯಲ್ಲಾರಿ ಹುಬ್ಳೀಕರ, ಅನ್ನಪೂರ್ಣಾ ಕೌಜಲಗಿ, ಪ್ರವೀಣ ಪವಾರ, ಗುರುರಾಜ ಸಬನೀಸ್ ಇದ್ದರು.
ಡೌಗಿ ನಾಲಾದಲ್ಲಿ ಬೋಟಿಂಗ್ ವ್ಯವಸ್ಥೆ, ತೂಗು ಸೇತುವೆ ಸೇರಿದಂತೆ ಜನರ ಬೇಡಿಕೆಯ ಎಲ್ಲ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು. ತಜ್ಞರ ವರದಿ ಪಡೆದು ಸೂಕ್ತ ಪ್ರಸಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. –ಶಂಕರಪಾಟೀಲ ಮುನೇನಕೊಪ್ಪ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.