ಹುಬ್ಬಳ್ಳಿ: ಚಿನ್ನದ ಆಸೆಗಾಗಿ ದೊಡ್ಡಮ್ಮನನ್ನೇ ಕೊಲೆಗೈದ ವ್ಯಕ್ತಿ
Team Udayavani, Oct 24, 2022, 6:43 PM IST
ಹುಬ್ಬಳ್ಳಿ: ಮದ್ಯವಸ್ಯನಿಯೊಬ್ಬ ಚಿನ್ನದ ಆಸೆಗಾಗಿ ತನ್ನ ದೊಡ್ಡಮ್ಮನನ್ನೇ ಕೊಲೆ ಮಾಡಿ ಪರಾರಿಯಾದ ಘಟನೆ ರವಿವಾರ ತಡರಾತ್ರಿ ಹಳೇಹುಬ್ಬಳ್ಳಿ ನೇಕಾರ ನಗರದ ರಣದಮ್ಮ ಕಾಲೋನಿಯಲ್ಲಿ ಸಂಭವಿಸಿದೆ.
ಕಮಲಮ್ಮ ಹುಬ್ಬಳ್ಳಿಮಠ (72) ಕೊಲೆಯಾಗಿದ್ದು, ಕಲಘಟಗಿ ತಾಲೂಕ ಗಂಭ್ಯಾಪುರದ ಮಹಾಂತೇಶ ಚಿಕ್ಕಮಠ ಎಂಬಾತನೇ ಕೊಲೆ ಮಾಡಿದ್ದಾನೆಂದು ಶಂಕಿಸಿ ಮೃತಳ ಮಗ ಕಸಬಾಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ಕೊಲೆಯಾದ ವೃದ್ಧೆಯ ತಂಗಿಯ ಮಗನಾದ ಮಹಾಂತೇಶನು ಮದ್ಯವ್ಯಸನಿ ಹಾಗೂ ಮಾನಸಿಕನಾಗಿದ್ದ. ಆಗಾಗ ದೊಡ್ಡಮ್ಮನ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಕಳೆದ ಮೂರು ದಿನಗಳ ಹಿಂದೆಯೇ ದೊಡ್ಡಮ್ಮನ ಮನೆಗೆ ಬಂದಿದ್ದ. ರವಿವಾರ ರಾತ್ರಿ ಕಮಲಮ್ಮ ಮಲಗಿದ್ದಾಗ ರೊಟ್ಟಿ ಮಾಡುವ ಕೊನಮಗಿಯಿಂದ ತಲೆಗೆ ಹೊಡೆದು ಕೊಲೆ ಮಾಡಿ, ನಂತರ ಕಿವಿ ಕತ್ತರಿಸಿ ಕಿವಿಯೋಲೆ ಹಾಗೂ ಕೊರಳಲ್ಲಿದ್ದ ಚಿನ್ನದ ಬೋರಮಾಳ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ಬೆಳಗ್ಗೆ ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಪಕ್ಕದ ಮನೆಯವರು ಬಾಗಿಲು ತೆರೆದಾಗ ಕಮಲಮ್ಮ ಮಲಗಿದಲ್ಲಿಯೇ ಕೊಲೆಯಾಗಿರುವುದು ಗೊತ್ತಾಗಿದೆ. ಕಮಲಮ್ಮನ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಸಬಾಪೇಟೆ ಪೊಲೀಸರು ಭೇಟಿಕೊಟ್ಟು ಪರಿಶೀಲಿಸಿದ್ದಾರೆ.
ಚಿನ್ನದ ಆಸೆಗಾಗಿಯೇ ಮಾಲತೇಶನು ಕೊಲೆ ಮಾಡಿದ್ದಾನೆಂದು ಮೃತ ಕಮಲಮ್ಮನ ಮಗ ಪ್ರಭಯ್ಯನ ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕಸಬಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಮಹಾತೇಶನ ಹುಡುಕಾಟ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.