![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 22, 2020, 12:18 PM IST
ಹುಬ್ಬಳ್ಳಿ: ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಕಾರಣಕ್ಕೆ ಲಾಕ್‌ಡೌನ್ ಮಾಡಿದ ನಂತರ ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನಸಂಸ್ಥೆಗೆ (ಡಿಮ್ಹಾನ್ಸ್) ದಾಖಲಾಗುವವರಲ್ಲಿ ಶೇ.60 ವ್ಯಸನಮುಕ್ತಿಗಾಗಿ ದಾಖಲಾಗುತ್ತಿದ್ದಾರೆ.
ಲಾಕ್‌ಡೌನ್‌ನಿಂದ ಎಲ್ಲೆಡೆ ಮದ್ಯ ಮಾರಾಟ ನಿಷೇಧಿಸಿರುವುದರಿಂದ ಮದ್ಯಪಾನ ವ್ಯಸನಕ್ಕೀಡಾದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮದ್ಯಪಾನ ಸಿಗದಿದ್ದರಿಂದ ತೀವ್ರ ಒತ್ತಡಕ್ಕೀಡಾದವರು ಹಾಗೂ ಖನ್ನರಾದವರನ್ನು ಡಿಮ್ಹಾನ್ಸ್‌ಗೆ ದಾಖಲಿಸಲಾಗುತ್ತಿದೆ. ಇಲ್ಲಿನ ವ್ಯಸನಮುಕ್ತಿ ಘಟಕದ ತಜ್ಞ ವೈದ್ಯರ ತಂಡ ಕೌನ್ಸೆಲಿಂಗ್ ಹಾಗೂ ಔಷಧಗಳ ಮೂಲಕ ಚಿಕಿತ್ಸೆ ನೀಡುತ್ತಿದೆ. ಚಟಗಳಿಂದ ದೂರ ಸರಿದವರು ಬದುಕನ್ನೇ ಬದಲಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಯಲ್ಲಿ ವ್ಯಸನ ಮುಕ್ತಿಗಾಗಿ ಚಿಕಿತ್ಸೆ ಪಡೆಯುವವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.
ಮದ್ಯ ಸಿಗದೇ ಕೆಲವರು ಹ್ಯಾಂಡ್ ಸ್ಯಾನಿಟೈಜರ್ ಸೇವಿಸಿ ಜೀವ ಕಳೆದುಕೊಂಡಿರುವ, ಆರೋಗ್ಯ ಹಾಳು ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇದರಲ್ಲಿನ ಇಥೆನಾಲ್, ಹೈಡ್ರಾಜನ್ ಪೆರಾಕ್ಸೈಡ್, ಐಸೊಪ್ರೊಪೈಲ್ ಅಲ್ಕೊಹಾಲ್‌ನಂಥ ರಾಸಾಯನಿಕಗಳು ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.
ಕೇವಲ ಮದ್ಯಪಾನವಷ್ಟೇ ಅಲ್ಲ, ಗುಟ್ಕಾ, ತಂಬಾಕು, ಚರಸ್, ಗಾಂಜಾ, ಅಫೀಮು ಚಟಕ್ಕೆ ಅಂಟಿಕೊಂಡವರು ಈ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಕಾಳ ಸಂತೆಯಲ್ಲಿ ಖರೀದಿಸಿ ಬಳಸುತ್ತಿದ್ದರೆ, ಇನ್ನು ಕೆಲವರು ವ್ಯಸನ ಮಾಡಲಾಗದೇ ಚಡಪಡಿಸುತ್ತಿದ್ದಾರೆ. ಇಂಥವರು ಕೂಡ ಡಿಮ್ಹಾನ್ಸ್‌ನ ತಜ್ಞ ವೈದ್ಯರಿಂದ ಸಮರ್ಪಕ ಚಿಕಿತ್ಸೆ ಪಡೆಯಬಹುದಾಗಿದೆ. ಇದು ವ್ಯಸನ ಮುಕ್ತಿಗೆ ಸೂಕ್ತ ಸಂದರ್ಭವಾಗಿದೆ. ಜೀವನದ ದಿಕ್ಕನ್ನೇಬದಲಿಸುವ ಸನ್ನಿವೇಶ ಒದಗಿ ಬಂದಿದೆ. ಮನಸ್ಸು ಮಾಡಿದರೆ ದುಶ್ಚಟಗಳಿಂದ ವಿಮುಖರಾಗಲು ಸಾಧ್ಯ. ವ್ಯಸನಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡ ಹಲವರು ಈಗಾಗಲೇ ವ್ಯಸನ ಮುಕ್ತರಾಗಲು ಪಣ ತೊಟ್ಟಿದ್ದಾರೆ. ಚಟಮುಕ್ತರಾಗಲು ಡಿಮ್ಹಾನ್ಸ್ ಸಹಕಾರ ನೀಡುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗಲು ಸಾಧ್ಯವಾಗದಿದ್ದರೆ ಮೊದಲ ಹಂತದಲ್ಲಿ ಹೆಲ್ಪ್ ಲೈನ್ ನೆರವಿನಿಂದ ತಜ್ಞರ ಮಾರ್ಗದರ್ಶನ ಪಡೆಯಬಹುದು. ಚಿಕಿತ್ಸೆ ಪಡೆಯಲು ಸಾಧ್ಯವಿದೆ.
ಹೆಲ್ಪ್ ಲೈನ್ : ಡಿಮ್ಹಾನ್ಸ್‌ನಲ್ಲಿ ಹೆಲ್ಪ್ ಲೈನ್ ಗಾಗಿ 3 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡ 8 ಗಂಟೆ ಸೇವೆ ಸಲ್ಲಿಸಲಿದೆ. ತಂಡದಲ್ಲಿ ಮಾನಸಿಕ ತಜ್ಞರು, ಕ್ಲಿನಿಕಲ್ ಸೈಕಾಲಜಿಸ್ಟ್ಸ್, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು ಹಾಗೂ ಮನೋವೈದ್ಯಕೀಯ ವಿದ್ಯಾರ್ಥಿಗಳಿರುತ್ತಾರೆ. ಸಹಾಯವಾಣಿ: ಕೊವಿಡ್-19 ಮಾನಸಿಕ ಅರೋಗ್ಯ ಸಹಾಯವಾಣಿ ಸಂಖ್ಯೆಗಳು: 9113258734 ಅಥವಾ 0836-2748400
ಬೆಂಗಳೂರು ನಿಮ್ಹಾನ್ಸ್ ಮಾದರಿಯಲ್ಲಿ ನಮ್ಮ ಡಿಮ್ಹಾನ್ಸ್‌ನಲ್ಲಿ ಕೂಡ ವ್ಯಸನ ಮುಕ್ತಿ ಘಟಕವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಇದು ಸರ್ವಸನ್ನದ್ಧ ಘಟಕವಾಗಿ ಹೊರಹೊಮ್ಮಲಿದೆ. ಡಿಎಡಿಕ್ಷನ್ ಫೆಲೋಶಿಪ್ ಮಾಡುವ ಅಲೋಚನೆ ಕೂಡ ನಮಗಿದೆ. ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ವ್ಯಸನಮುಕ್ತರ ಸಂಖ್ಯೆ ಹೆಚ್ಚಿಸುವಲ್ಲಿ ಡಿಮ್ಹಾನ್ಸ್ ಕಾರ್ಯೋನ್ಮುಖವಾಗಿದೆ. ಡಾ|ಮಹೇಶ ದೇಸಾಯಿ, ಡಿಮ್ಹಾನ್ಸ್ ನಿರ್ದೇಶಕರು
ಲಾಕ್‌ಡೌನ್‌ನಂತರ ಮದ್ಯ ಮಾರಾಟ ಸ್ಥಗಿತಗೊಂಡ ನಂತರ ಆರಂಭದಲ್ಲಿ ಹಲವರಿಗೆ ವಿತ್‌ಡ್ರಾವಲ್ ಸಿಮrಮ್ಸ್ ಕಂಡು ಬಂದಿವೆ. ಡಿಮ್ಹಾನ್ಸ್‌ನಲ್ಲಿ ಶೇ.60 ರೋಗಿಗಳು ಆಲ್ಕೊಹಾಲ್ ಸಂಬಂಧಿತ ಚಿಕಿತ್ಸೆಗಾಗಿಯೇ ದಾಖಲಾಗುತ್ತಿದ್ದಾರೆ. ಮದ್ಯ ಹುಡುಕುತ್ತ ಅಲೆಯುವ ಬದಲು ಆಸ್ಪತ್ರೆ ಹುಡುಕಿಕೊಂಡು ಬರುವುದು ಸೂಕ್ತ. ವ್ಯಸನ ಮುಕ್ತಿಗೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಡಾ| ಮಹೇಶ ಮಹಾದೇವಯ್ಯ, ಡಿಮ್ಹಾನ್ಸ್‌ನ ವ್ಯಸನ ಮುಕ್ತಿ ಘಟಕದ ಮುಖ್ಯಸ್ಥ
-ವಿಶ್ವನಾಥ ಕೋಟಿ
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.