ಭಾರತೀಯ ಸಂಸ್ಕೃತಿ ಮಹೋತ್ಸವ ಸಂಪನ್ನ
Team Udayavani, Jan 19, 2018, 12:50 PM IST
ಹುಬ್ಬಳ್ಳಿ: ಪ್ರೇಕ್ಷಕರ ಕೊರತೆ ನಡುವೆಯೂ ಭಾರತೀಯ ಸಂಸ್ಕೃತಿಯ ಹಿರಿಮೆ, ಜನಪದ ಸಾಂಸ್ಕೃತಿಕ ಸೊಗಡು ವಿಜೃಂಭಿಸಿತು. ದೇಶದ ವಿವಿಧ ರಾಜ್ಯದ ಬುಡಕಟ್ಟು ಹಾಗೂ ಜಾನಪದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಭಾರತೀಯ ಸಂಸ್ಕೃತಿ ಮಹೋತ್ಸವ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಎರಡು ದಿನ ಕಾಲ ಆಯೋಜಿಸಿದ್ದ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಕೋಲಾಟ, ವೀರಗಾಸೆ ನೃತ್ಯ ಗಮನ ಸೆಳೆಯಿತು.
ಮಿಜೋರಾಂನ ಚಿರೋ ನೃತ್ಯ-ಅಲ್ಲಿನ ಬುಡಕಟ್ಟು ಸಂಪ್ರದಾದಲ್ಲಿ ಮದುವೆ ವೇಳೆ ಕೈಗೊಳ್ಳುವ ನೃತ್ಯ ಪ್ರದರ್ಶಿಸಲಾಯಿತು. ಪಂಜಾಬ್‌ನ ಬಾಂಗ್ರಾ ನೃತ್ಯ ಆಕರ್ಷಣೀಯವಾಗಿತ್ತು. ತೆಲಂಗಾಣದ ಕಲಾವಿದರು ಮಥುರಾದಿಂದ ತೆಲಂಗಾಣದ ಅದಿಲಾಬಾದ್ ಜಿಲ್ಲೆಯವರೆಗೆ
ರಾಮ ಕೃಷ್ಣ ಲೀಲಾ ಸಾರುವ ಮಾಥುರಿ ನೃತ್ಯ ಹಾಗೂ ಉತ್ತರಾಖಂಡದಲ್ಲಿ ಬುಡಕಟ್ಟು ಜನಾಂಗ ಧಾರ್ಮಿಕ ಕಾರ್ಯ, ಮಗುವಿನ ಜನನ ಹಾಗೂ ಮದುವೆ ಸಂದರ್ಭದಲ್ಲಿ ಕೈಗೊಳ್ಳುವ ಜೋಡಾ ಚಪೇಲಿ ನೃತ್ಯ ಗಮನ ಸೆಳೆಯಿತು.
ಅಸ್ಸಾಂನ ಬಾಗೂಂಬಾ, ಗುಜರಾತ್‌ನ ಸಿದ್ದಿ ದಮಾಲ, ಹಿಮಾಚಲ ಪ್ರದೇಶದ ಗದ್ದಾ ಡ್ಯಾನ್ಸ್, ತಮಿಳುನಾಡಿನ ಕರಗಂ ಕವಣಿ ಅಲ್ಲದೆ ಮಹಾರಾಷ್ಟ್ರ ಇನ್ನಿತರ ರಾಜ್ಯಗಳ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸಿದರು. ದೇಶದ ವಿವಿಧ ರಾಜ್ಯಗಳಿಂದ ಕಲಾ ತಂಡಗಳು ಆಗಮಿಸಿದ್ದವು. ವಿಶೇಷವಾಗಿ ಆಯಾ ರಾಜ್ಯಗಳ ಬುಡಕಟ್ಟು ಹಾಗೂ ಜಾನಪದ ಸಂಸ್ಕೃತಿ, ಸಾಂಸ್ಕೃತಿಕ ಸೊಬಗು ಬಿಂಬಿಸುವ ನೃತ್ಯದ ಪರಿಚಯ ಮಾಡಿದ್ದರು.
ಹೆಚ್ಚಿನ ಹಣ ನೀಡಿ ಸಿನಿಮಾ ನೋಡಲು ಹೋಗುವ ಜನರು ಉಚಿತವಾಗಿ ಜೀವಂತಿಕೆಯುಳ್ಳ ಕಲೆ ಬಿಂಬಿಸುವ ಕಾರ್ಯಕ್ರಮಕ್ಕೆ ನಿರಾಸಕ್ತಿ ತೋರಿದರೋ ಅಥವಾ ಆಯೋಜಕರು ಸಮರ್ಪಕ ಪ್ರಚಾರ ಕೈಗೊಳ್ಳಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಪ್ರೇಕ್ಷಕರ ಸಾಥ್ ಇಲ್ಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.