![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 27, 2019, 10:33 AM IST
ಹುಬ್ಬಳ್ಳಿ: ನಗರದಿಂದ ಬೆಂಗಳೂರು ಹಾಗೂ ಚೆನ್ನೈಗೆ ವಿಮಾನಯಾನಿಗಳ ಸಂಖ್ಯೆ ಕ್ಷೀಣಿಸಿದ ಕಾರಣ ಇಂಡಿಗೋ ಕಂಪೆನಿ ತನ್ನ ಏರ್‌ಬಸ್ ವಿಮಾನ ಬದಲಾಗಿ ಎಟಿಆರ್ ವಿಮಾನ ಹಾರಾಟಕ್ಕೆ ಮುಂದಾಗಿದೆ.
ಇಂಡಿಗೋ ಕಂಪೆನಿ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಚೆನ್ನೈಗೆ 180 ಆಸನಗಳ ಸಾಮರ್ಥ್ಯದ ಎ 320 ಏರ್‌ಬಸ್ ವಿಮಾನ ಹಾರಾಟ ನಡೆಸುತ್ತಿತ್ತು. ಆದರೆ ಈ ಎರಡು ನಗರಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದರಿಂದ ನಷ್ಟ ಆಗುತ್ತಿದೆ. ಇದನ್ನು ಸರಿದೂಗಿಸುವ ಸಲುವಾಗಿ ಅ.27ರಿಂದ ಈ ಎರಡು ನಗರಗಳಿಗೆ 74 ಆಸನಗಳ ಸಾಮರ್ಥ್ಯದ ಎಟಿಆರ್ ವಿಮಾನಗಳನ್ನು ಸಮಯ ಬದಲಾವಣೆಯೊಂದಿಗೆ ಹಾರಾಟ ನಡೆಸಲು ಮುಂದಾಗಿದೆ. ಆದರೆ ಅಹ್ಮದಾಬಾದ್‌ಗೆ ಎ320 ಏರ್‌ಬಸ್ ವಿಮಾನಯಾನ ಮುಂದುವರಿಸಿದೆ.
ಜೊತೆಗೆ ಗೋವಾ ಹೊರತುಪಡಿಸಿ ಕೊಚ್ಚಿನ್, ಕಣ್ಣೂರ ವಿಮಾನಗಳ ಹಾರಾಟದ ಸಮಯ ಬದಲಾವಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಇಂಡಿಗೋ ಎಟಿಆರ್ ವಿಮಾನ ಪ್ರತಿದಿನ ಕೊಚ್ಚಿನ್-ಹುಬ್ಬಳ್ಳಿ (6ಇ 7965) ನಡುವೆ ಕೊಚ್ಚಿನ್‌ದಿಂದ ಬೆಳಗ್ಗೆ 7:00ಗಂಟೆಗೆ ಹೊರಟು 8:50ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (6ಇ 7161) ವಿಮಾನ ಬೆಳಗ್ಗೆ 9:20ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10:40ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ (6ಇ 7162) ವಿಮಾನ ಬೆಳಗ್ಗೆ 11:30ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12:55 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಚೆನ್ನೈ (6ಇ 7964) ವಿಮಾನ ಮಧ್ಯಾಹ್ನ 1:15ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:10ಗಂಟೆಗೆ ಚೆನ್ನೈ ತಲುಪಲಿದೆ.
ಚೆನ್ನೈ-ಹುಬ್ಬಳ್ಳಿ (6ಇ 7995) ವಿಮಾನ ಮಧ್ಯಾಹ್ನ 3:30 ಗಂಟೆಗೆ ಚೆನ್ನೆçನಿಂದ ಹೊರಟು ಸಂಜೆ 5:25ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7995) ವಿಮಾನವು ಸಂಜೆ 5:45 ಗಂಟೆಗೆ ಹುಬ್ಬಳ್ಳಿಯಿಂ ಹೊರಟು 6:30 ಗಂಟೆಗೆ ಗೋವಾ ತಲುಪಲಿದೆ. ಗೋವಾ-ಹುಬ್ಬಳ್ಳಿ (6ಇ 7996) ವಿಮಾನ ಸಂಜೆ 6:55 ಗಂಟೆಗೆ ಗೋವಾದಿಂದ ಹೊರಟು 7:50 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕೊಚ್ಚಿನ್ (6ಇ 7996) ವಿಮಾನ ರಾತ್ರಿ 8:10 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:55 ಗಂಟೆಗೆ ಕೊಚ್ಚಿನ್ ತಲುಪಲಿದೆ. ಕಣ್ಣೂರ-ಹುಬ್ಬಳ್ಳಿ (6ಇ 7979) ವಿಮಾನವು ಸಂಜೆ 6:10ಗಂಟೆಗೆ ಕಣ್ಣೂರನಿಂದ ಹೊರಟು 7:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕಣ್ಣೂರ (6ಇ 7981) ವಿಮಾನವು ಸಂಜೆ 7:50 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9:05 ಗಂಟೆಗೆ ಕಣ್ಣೂರ ತಲುಪಲಿದೆ.
ಅದೇರೀತಿ ರವಿವಾರ ಹೊರತು ಪಡಿಸಿ ಅಹ್ಮದಾಬಾದ್-ಹುಬ್ಬಳ್ಳಿ (6ಇ 5993) ಎ320 ಏರ್‌ಬಸ್ ವಿಮಾನ ಮಧ್ಯಾಹ್ನ 12:55 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು 2:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಅಹ್ಮದಾಬಾದ್ (6ಇ 5994) ವಿಮಾನ ಮಧ್ಯಾಹ್ನ 3:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಸಂಜೆ 4:35 ಗಂಟೆಗೆ
ಅಹ್ಮದಾಬಾದ್ ತಲುಪಲಿದೆ. ಪ್ರತಿ ರವಿವಾರ ಅಹ್ಮದಾಬಾದ್-ಹುಬ್ಬಳ್ಳಿ (6ಇ 5993) ಎ320 ಏರ್‌ಬಸ್ ವಿಮಾನ ಸಂಜೆ 5:05 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು 6:45 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಹುಬ್ಬಳ್ಳಿ-ಅಹ್ಮದಾಬಾದ್ (6ಇ 5994) ವಿಮಾನ ಸಂಜೆ 7:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8:50ಗಂಟೆಗೆ ಅಹ್ಮದಾಬಾದ್ ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಎ320 ಏರ್ ಬಸ್ (6ಇ 661) ವಿಮಾನ ಬೆಳಗ್ಗೆ 8:15ಗಂಟೆಗೆ ಬೆಂಗಳೂರಿನಿಂದ ಹೊರಟು 9:15ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತಿತ್ತು. ಇನ್ಮುಂದೆ ಅ.27ರಿಂದ ಎಟಿಆರ್ ವಿಮಾನ ಬೆಂಗಳೂರಿನಿಂದ ಬೆಳಗ್ಗೆ 11:30ಗಂಟೆಗೆ ಹೊರಟು ಮಧ್ಯಾಹ್ನ 12:55ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಜೊತೆಗೆ ಹುಬ್ಬಳ್ಳಿಯಿಂದ ಅಹ್ಮದಾಬಾದ್ ಗೆ ವಿಮಾನಯಾನಿಗಳು ಬೆಳಗ್ಗೆ 9:45ಗಂಟೆಗೆ ಹೋಗಬಹುದಿತ್ತು. ಇನ್ಮೆಲೆ ಮಧ್ಯಾಹ್ನ 3:00ಗಂಟೆಗೆ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ ತೆರಳಬೇಕು.
-ಶಿವಶಂಕರ ಕಂಠಿ
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.