ನಾಳೆಯಿಂದ ವಿವಿಧ ನಗರಗಳಿಗೆ ಇಂಡಿಗೋ ವಿಮಾನಯಾನ ಸೇವೆ
Team Udayavani, Jul 31, 2021, 3:23 PM IST
ಹುಬ್ಬಳ್ಳಿ: ಇಂಡಿಗೋ ಕಂಪನಿ ಆ. 1ರಿಂದ ಪ್ರತಿದಿನ ಹುಬ್ಬಳ್ಳಿಯಿಂದ ಕೊಚ್ಚಿನ, ಗೋವಾ, ಬೆಂಗಳೂರು, ಮುಂಬಯಿ, ಕನ್ನೂರ ಮತ್ತು ಚೆನ್ನೈಗೆ ತನ್ನ ಎಟಿಆರ್ ವಿಮಾನಗಳ ಯಾನ ಆರಂಭಿಸಲಿದೆ. ಪ್ರತಿದಿನ ಚೆನ್ನೈ-ಹುಬ್ಬಳ್ಳಿ (6ಇ 7986) ವಿಮಾನವು ಬೆಳಗ್ಗೆ 6:05 ಗಂಟೆಗೆ ಚೆನ್ನೈನಿಂದ ಹೊರಟು 8:10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಹುಬ್ಬಳ್ಳಿ-ಕೊಚ್ಚಿನ (6ಇ 7964) ವಿಮಾನವು ಬೆಳಗ್ಗೆ 8:35 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10:20 ಗಂಟೆಗೆ ಕೊಚ್ಚಿನ ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ (6ಇ 7227) ವಿಮಾನವು ಬೆಳಗ್ಗೆ 7:15 ಗಂಟೆಗೆ ಬೆಂಗಳೂರಿನಿಂದ ಹೊರಟು 8:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7995) ವಿಮಾನವು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:50 ಗಂಟೆಗೆ ಗೋವಾ ತಲುಪಲಿದೆ. ಗೋವಾ-ಹುಬ್ಬಳ್ಳಿ (6ಇ 7996) ವಿಮಾನವು ಬೆಳಗ್ಗೆ 10:20 ಗಂಟೆಗೆ ಗೋವಾದಿಂದ ಹೊರಟು 11:10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಹುಬ್ಬಳ್ಳಿ-ಬೆಂಗಳೂರು (6ಇ 7233) ವಿಮಾನ ಬೆಳಗ್ಗೆ 11:40 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಕೊಚ್ಚಿನ-ಹುಬ್ಬಳ್ಳಿ (6ಇ 7965) ವಿಮಾನವು ಬೆಳಗ್ಗೆ 10:50 ಗಂಟೆಗೆ ಕೊಚ್ಚಿನದಿಂದ ಹೊರಟು ಮಧ್ಯಾಹ್ನ 12:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಮುಂಬಯಿ (6ಇ 7291) ವಿಮಾನವು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 2:45 ಗಂಟೆಗೆ ಮುಂಬಯಿ ತಲುಪಲಿದೆ.
ಮುಂಬಯಿ-ಹುಬ್ಬಳ್ಳಿ (6ಇ 7292) ವಿಮಾನವು ಮಧ್ಯಾಹ್ನ 3:15 ಗಂಟೆಗೆ ಮುಂಬಯಿಯಿಂದ ಹೊರಟು ಸಂಜೆ 4:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕನ್ನೂರ (6ಇ 7981) ವಿಮಾನವು ಸಂಜೆ 5:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:40 ಗಂಟೆಗೆ ಕನ್ನೂರ ತಲುಪಲಿದೆ. ಬೆಂಗಳೂರು-ಹುಬ್ಬಳ್ಳಿ (6ಇ 7162) ವಿಮಾನವು ಮಧ್ಯಾಹ್ನ 3:30 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 5 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಹುಬ್ಬಳ್ಳಿ-ಚೆನ್ನೈ (6ಇ 7987) ವಿಮಾನವು ಸಂಜೆ 5:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 7:10 ಗಂಟೆಗೆ ಕನ್ನೂರ ತಲುಪಲಿದೆ. ಕನ್ನೂರ-ಹುಬ್ಬಳ್ಳಿ (6ಇ 7979) ವಿಮಾನವು ಸಂಜೆ 7 ಗಂಟೆಗೆ ಕನ್ನೂರನಿಂದ ಹೊರಟು ರಾತ್ರಿ 8:20 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (6ಇ 7161) ವಿಮಾನವು ರಾತ್ರಿ 8:35 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9:55 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.