ಸೋಂಕಿತನ ಸುತ್ತಾಟ-ಸಂಪರ್ಕ ತಂದ ತಲ್ಲಣ
Team Udayavani, May 3, 2020, 10:20 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೋವಿಡ್ 19 ಸೋಂಕಿತ ಪಿ-589 ವ್ಯಕ್ತಿಯ ಸುತ್ತಾಟ, ಭೇಟಿ ನೀಡಿದ ಸ್ಥಳಗಳು, ಅನೇಕ ಗಣ್ಯರೊಂದಿಗೆ ಸಂಪರ್ಕ ಗಮನಿಸಿದರೆ ವಾಣಿಜ್ಯನಗರಿಯಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಇನ್ನೇನು ಶಂಕಿತರ ಪ್ರಮಾಣ ಕುಗ್ಗುವತ್ತ ಮುಖ ಮಾಡಿದೆ ಎನ್ನುವಾಗಲೇ ಮತ್ತೂಂದು ಸಂಕಷ್ಟ ಎದುರಾಗುವಂತಾಗಿದೆ. ಸೋಂಕಿತ ಪಿ-589 ಹುಬ್ಬಳ್ಳಿಯ ಬಹುತೇಕ ಪ್ರದೇಶಕ್ಕೆ ಭೇಟಿ ನೀಡಿದ್ದು, ಅನೇಕ ಕಡೆಗಳಲ್ಲಿ ಆಹಾರಧಾನ್ಯ ವಿತರಣೆ ಮಾಡಿರುವುದು, ಹಲವರೊಂದಿಗೆ ಸೇರಿ ಸುತ್ತಾಟ ಕೈಗೊಂಡಿರುವುದು ನೋಡಿದರೆ ಶಂಕಿತ-ಸೋಂಕಿತ ವಿಚಾರದಲ್ಲಿ ದಿಗಿಲು ಮೂಡಿಸುವಂತೆ ಆಗಿದೆ.
ಸೋಂಕಿತ ತಂದ ತಲ್ಲಣ: ಧಾರವಾಡದಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾದಾಗ, ಆತಂಕದ ಜತೆಗೆ ಸದ್ಯಕ್ಕಂತು ನಮ್ಮಲ್ಲಿ ಸೋಂಕು ಪ್ರಕರಣ ವರದಿಯಾಗಿಲ್ಲ ಎಂಬ ನಿರಾಳ ಭಾವದಲ್ಲಿದ್ದ ಹುಬ್ಬಳ್ಳಿಗೆ ಏಕಾಏಕಿ ಸೋಂಕು ವಕ್ಕರಿಸಿ ಜನರನ್ನು ಕಂಗೆಡುವಂತೆ ಮಾಡಿತ್ತು. ಸೋಂಕಿತರ ಸಂಪರ್ಕ, ಸುತ್ತಾಟ ಹಲವು ರೀತಿಯ ಆತಂಕಕ್ಕೆ ಕಾರಣವಾಗಿತ್ತು. ಒಂದೇ ಒಂದು ಪ್ರಕರಣ ಇಲ್ಲದೆ ಹುಬ್ಬಳ್ಳಿಯಲ್ಲಿ ದಿಢೀರನೇ ಎಂಟು ಪ್ರಕರಣಗಳು ಕಾಣಿಸಿಕೊಂಡಿದ್ದು, ವಾಣಿಜ್ಯ ನಗರ ಅಕ್ಷರಶಃ ಕಂಪಿಸುವಂತೆ ಮಾಡಿತ್ತು. ಜಿಲ್ಲಾಡಳಿತದ ಸಕಾಲಿಕ ಕ್ರಮದಿಂದಾಗಿ ಶಂಕಿತರು, ಸೋಂಕಿತರ ಪತ್ತೆ, ಕ್ವಾರಂಟೈನ್ ಇತ್ಯಾದಿ ಕ್ರಮಗಳು ಪರಿಣಾಮಕಾರಿಯಾಗಿ ಅದರ ಫಲ ಗೋಚರಿಸುತ್ತಿದೆ ಎನ್ನುವಾಗಲೇ, ಇದೀಗ ಮತ್ತೂಂದು ಕಂಪನ ತಲ್ಲಣಕ್ಕೆ ಕಾರಣವಾಗಿದೆ. ಪಿ-589 ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆ ಹಾಗೂ ಸವಾಲು ಜಿಲ್ಲಾಡಳಿತವನ್ನು ಕಾಡುತ್ತಿದೆ. ಇನ್ನೊಂದೆಡೆ ಈ ವ್ಯಕ್ತಿಯ ಸುತ್ತಾಟದ ವಿವರ ಗಮನಿಸಿದರೆ ಯಾರಿಗಾದರೂ ಆತಂಕ ಮೂಡಿಸದೆ ಇರದು. ಕೇಶ್ವಾಪುರದ ಶಾಂತಿ ಕಾಲೋನಿಯಿಂದ ಹಿಡಿದು ಮಹಾವೀರ, ಮರಾಠಾಗಲ್ಲಿವರೆಗೂ, ಅದೇ ರೀತಿ ಹೊಸೂರು, ಗೋಕುಲ ರಸ್ತೆ, ವೆಂಕಟೇಶ ಕಾಲೋನಿ, ದೇಶಪಾಂಡೆ ನಗರ, ರೈಲ್ವೆ ವರ್ಕ್‌ಶಾಪ್, ಸಿಬಿಟಿಹೀಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಈ ಎಲ್ಲ ಪ್ರದೇಶಗಳಲ್ಲಿ ಒಂದಿಲ್ಲ ಒಂದು ಸಂಪರ್ಕದ ಜತೆಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡುವುದರಲ್ಲಿ ಪಾಲ್ಗೊಂಡಿದ್ದಾನೆ.
ಕೆಲ ಮೂಲಗಳ ಪ್ರಕಾರ ಸೋಂಕಿತ ವ್ಯಕ್ತಿ ನಗರದಲ್ಲಿನ ಕೆಲವೊಂದು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಜತೆಗೆ ಈ ವ್ಯಕ್ತಿ ನಗರದ ಹಲವು ಗಣ್ಯರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದು, ಕೆಲವೊಂದು ಕಾರ್ಯಕ್ರಮ, ಆಹಾರ ಕಿಟ್‌ಗಳ ವಿತರಣೆಯಲ್ಲೂ ಅವರೊಂದಿಗೆ ಪಾಲ್ಗೊಂಡಿದ್ದ ಎಂದು ಹೇಳಲಾಗುತ್ತಿದೆ.
ಜಿಲ್ಲಾಡಳಿತಕ್ಕೆ ತಲೆನೋವು: ಧಾರವಾಡದಲ್ಲಿನ ಸೋಂಕು ಪ್ರಕರಣವನ್ನು ಸುಲಭ ರೀತಿಯಲ್ಲಿನಿಭಾಯಿಸಿದ್ದ ಜಿಲ್ಲಾಡಳಿತಕ್ಕೆ ಹುಬ್ಬಳ್ಳಿಯಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸುವುದು, ಅವರ ಪರೀಕ್ಷೆ, ಕ್ವಾರಂಟೈನ್ ಹಾಗೂ ಕ್ವಾರಂಟೈನ್ ಇದ್ದವರನ್ನು ನಿಭಾಯಿಸುವುದು ಸಾಕು ಸಾಕಾಗಿತ್ತು ಎನ್ನಲಾಗುತ್ತಿದೆ. ಹುಬ್ಬಳ್ಳಿಯಲ್ಲಿನ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಗುರುತಿಸಿಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೊರೊನಾ ಕುರಿತ ಪರೀಕ್ಷಾ ವರದಿ ನಿರೀಕ್ಷೆ 400ರ ಗಡಿಗೆ ತಲುಪಿ 100 ಗಡಿಗೆ ಇಳಿದಿದ್ದು, ಹೊಸ ಸೋಂಕು ಪ್ರಕರಣ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ಒಂದು ರೀತಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎನ್ನುವಾಗಲೇ ಮತ್ತೂಂದು ಸೋಂಕು ಪ್ರಕರಣ ಪತ್ತೆ ತಲೆನೋವಾಗಿ ಪರಿಣಮಿಸಿದೆ.
ಸೋಂಕಿತ ಪಿ-589 ಸುತ್ತಾಟದ ವಿವರ ಗಮನಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೊಳಪಡಿಸುವ, ಕ್ವಾರಂಟೈನ್‌ಗೆ ಕಳುಹಿಸುವ ಅವಶ್ಯಕತೆ ಬೀಳಬಹುದಾಗಿದೆ. ಇದನ್ನು ನಿಭಾಯಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಅಣಿಯಾಗಿದೆ. ಸೋಂಕಿತನ ಜತೆಗೆ ಸಂಪರ್ಕ ಹೊಂದಿದವರು ಸ್ವಯಂಪ್ರೇರಿತರಾಗಿ ಪರೀಕ್ಷೆಗೆ ಮುಂದಾಗಬೇಕಾಗಿದೆ. ಸಂಪರ್ಕ ಶಂಕಿತವಾಗಿರುತ್ತದೆ. ಸಕಾಲಕ್ಕೆ ತಪಾಸಣೆಗೆ ಒಳಗಾದರೆ ಸೋಂಕು ಇರುವಿಕೆ-ಇಲ್ಲದಿರುವಿಕೆ ತಿಳಿಯಲಿದೆ. ಸೋಂಕು ಇಲ್ಲವೆಂದಾದಲ್ಲಿ ನೆಮ್ಮದಿಯಿಂದ ಇರಬಹುದು. ಇದೇ ಎಂದಾದಲ್ಲಿ ಸಕಾಲಿಕ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಜತೆಗೆ ಇನ್ನಷ್ಟು ಜನರಿಗೆ ಸೋಂಕುಹರಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾನವೀಯ ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.