ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಪಾಸಣೆ
Team Udayavani, May 25, 2020, 8:41 AM IST
ಕುಂದಗೋಳ: ತಾಲೂಕಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 24 ಮಕ್ಕಳಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಡಿಪಿಒ ಅನ್ನಪೂರ್ಣಾ ಸಂಗಳದ ಅವರು ಈ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿದರು.
ನಂತರ ಮಾತನಾಡಿ, ಅಂಗನವಾಡಿ ಕೇಂದ್ರದ ಮೂಲಕ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಮನೆಗೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. 24 ಮಕ್ಕಳು ಬೆಳವಣಿಗೆಗೆ ತಕ್ಕಂತೆ ತೂಕದ ಕೊರತೆಯಿಂದಾಗಿ ಬಳಲುತ್ತಿರುವುದು ಕಂಡು ಬಂದಿರುವುದರಿಂದ 4 ಜನರ ಸಮಿತಿ ರಚಿಸಿ ಆ ಮಕ್ಕಳ ಮನೆಗೆ ತೆರಳಿ ಬೆಳ್ಳಿಗ್ಗೆ ಮೊಟ್ಟೆ, ಹಾಲು, ಮಧ್ಯಾಹ್ನ ಅಕ್ಕಿ ಹಾಗೂ ಹೆಸರು ಬೇಳೆಯಿಂದ ಸಿದ್ಧಪಡಿಸಿದ ಕಿಚಡಿ, 3 ಗಂಟೆಗೆ ರಾಗಿ ರೊಟ್ಟಿ ಹಾಗೂ ಸೊಪ್ಪಿನ ಪಲ್ಲೆ ಮತ್ತು ರಾಗಿ ಮಾಲ್ಟ್, ಸಂಜೆ 6ಕ್ಕೆ ಹಾಲು, ಹಣ್ಣು ಹಾಗೂ ಮೊಳಕೆ ಒಡೆದ ಕಾಳುಗಳನ್ನು ಖುದ್ದಾಗಿ ಸಮಿತಿಯವರು ಮಕ್ಕಳಿಗೆ ಉಣ್ಣಬಡಿಸುತ್ತಿದ್ದಾರೆ.
ಈ ಸಮಿತಿಯಲ್ಲಿ ಬಾಲ ವಿಕಾಸ ಸಮಿತಿ, ಕಿಶೋರಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಗುವಿನ ತಾಯಿ ಸೇರಿ 4 ಜನ ಇರುತ್ತಾರೆ. 24 ಮಕ್ಕಳಲ್ಲಿ 13 ಹೆಣ್ಣು ಮಕ್ಕಳು, 11 ಗಂಡು ಮಕ್ಕಳು ಇವೆ ಎಂದು ಹೇಳಿದರು. ಶಿಲ್ಪಾ ಪಟೇಲ್, ಎಂಟು ಜನ ಮೇಲ್ವಿಚಾರಕಿಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.