6 ತಿಂಗಳಲ್ಲಿ ಮಹಾನಗರ ಚಿತ್ರಣ ಬದಲು
Team Udayavani, Dec 2, 2019, 12:46 PM IST
ಹುಬ್ಬಳ್ಳಿ: ಮುಂದಿನ ಆರು ತಿಂಗಳಲ್ಲಿ ಹು–ಧಾ ಮಹಾನಗರದ ಚಿತ್ರಣ ಬದಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಯಡಿ ಸುಮಾರು 700 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದು, ಅವಳಿ ನಗರ ಧೂಳು ಮುಕ್ತ ನಗರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ಕಿತ್ತೂರು ಚನ್ನಮ್ಮ ವೃತ್ತದ ಬಳಿ ನೀಲಿಜನ್ ಹಾಗೂ ಕಾಟನ್ ಮಾರ್ಕೆಟ್ ರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹುಬ್ಬಳಿ– ಧಾರವಾಡ ನಗರದಲ್ಲಿ ಪ್ರಮುಖ ರಸ್ತೆಗಳನ್ನು ಕಾಂಕ್ರೀಟೀಕರಣ ಮಾಡಲು ಕೇಂದ್ರಸರಕಾರ 460 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ರಾಜ್ಯದಲ್ಲಿದ್ದ ಕಾಂಗ್ರೆಸ್ ಹಾಗೂ ಸಮ್ಮಿಶ್ರಸರಕಾರ ಇದಕ್ಕೆ ಅಡ್ಡಗಾಲು ಹಾಕಿದ್ದವು. ಇದರಿಂದಸಾಕಷ್ಟು ಕಾಮಗಾರಿಗಳು ಬಾಕಿ ಉಳಿದುಕೊಂಡವು. ಹು–ಧಾ ಅಭಿವೃದ್ಧಿ ವಿಚಾರದಲ್ಲಿ ಎರಡು ಸರಕಾರಗಳುಮಲತಾಯಿ ಧೋರಣೆ ಅನುಸರಿಸಿದವು.ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸಾಕಷ್ಟು ಪ್ರಯತ್ನ ಮಾಡಿ ಒಂದಿಷ್ಟು ರಸ್ತೆಗಳ ಟೆಂಡರ್ ಕರೆದು ನಿರ್ಮಾಣಕೈಗೊಳ್ಳಲಾಗಿದೆ ಎಂದರು ಹೇಳಿದರು.
14ನೇ ಹಣಕಾಸು ಯೋಜನೆ, ನಗರೋತ್ಥಾನ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧಯೋಜನೆಯಲ್ಲಿ ಅವಳಿ ನಗರದಲ್ಲಿ ಸುಮಾರು700 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿವೆ. ಇದರಿಂದ ಮಹಾನಗರದ ಚಿತ್ರಣ ಬದಲಾಗಿದೆ. ನಮ್ಮ ನಿರೀಕ್ಷೆ ಹಾಗೂ ಕೇಂದ್ರ ಸರಕಾರ ಸಹಕಾರ ಗಮನಿಸಿದರೆ ಇಷ್ಟೊತ್ತಿಗಾಗಲೇ ಸಾಕಷ್ಟು ಕಾಮಗಾರಿಗಳು ಮುಗಿಯಬೇಕಿತ್ತು.
ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಇರುವುದರಿಂದ ಮುಂದಿನ 6 ತಿಂಗಳಲ್ಲಿ ರಸೆಗಳನ್ನು ಧೂಳು ಮುಕ್ತವಾಗಿಸಿ, ನಗರವನ್ನುಸುಂದರಗೊಳಿಸಲಾಗುವುದು. ಯೋಜನೆಯಲ್ಲಿ 9ಮೀಟರ್ ಎಂದು ಹೇಳಲಾಗಿದೆ ಎಂದು ಹೇಳಿದರು.
ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಬಹಳ ದಿನಗಳಿಂದ ನೀಲಿಜನ್ ರಸ್ತೆಯ ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ, ಟೀಕೆ ಟಿಪ್ಪಣಿಗಳು ಬಂದಿವೆ. ಹಿಂದಿನ ರಾಜ್ಯ ಸರಕಾರಸಹಕಾರ ನೀಡಿದ್ದರೆ ಇಷ್ಟೊತ್ತಿಗಾಗಲೇ ಈ ರಸ್ತೆಕಾಂಕ್ರೀಟ್ ಆಗಿರುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆನೀಡಲಾಗಿದೆ. 25 ಕೋಟಿ ರೂ. ಯೋಜನೆಯಾದರೂ 21.11 ಕೋಟಿ ರೂ. ಗುತ್ತಿಗೆ ಮೊತ್ತವಾಗಿದೆ. ಹೀಗಾಗಿ ನೀಲಿಜಿನ್ ರಸ್ತೆಯೊಂದಿಗೆ ಕಾಟನ್ ಮಾರ್ಕೆಟ್‌ನಇತರೆ ರಸ್ತೆಗಳನ್ನು ಕಾಂಕ್ರೀಟ್ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ, ಪ್ರೊ| ಎಸ್.ವಿ. ಸಂಕನೂರ, ಮಾಜಿ ಶಾಸಕರಾದಅಶೋಕ ಕಾಟವೆ, ವೀರಭದ್ರಪ್ಪ ಹಾಲರವಿ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಮಾಜಿ ಮಹಾಪೌರರಾದ ಡಿ.ಕೆ. ಚೌವ್ಹಾಣ, ಸುಧಿಧೀರ್ ಸರಾಫ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.