ಮಾವು ಬೆಳೆಗಾರರಿಗೆ “ಹುಳಿ’ ತಿನ್ನಿಸಿದ ವಿಮಾ ಕಂಪನಿಗಳು!
Team Udayavani, Dec 21, 2017, 6:30 AM IST
ಧಾರವಾಡ: ಭತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಇರಿಸಿದ್ದ ಬೆಳೆ ವಿಮೆ ಹಣ ರೈತರಿಗೆ ಇನ್ನೂ ತಲುಪಿಲ್ಲ ಎಂದು ಹೋರಾಟ ಮಾಡುತ್ತಿರುವ ಅನ್ನದಾತರಿಗೆ ವಿಮಾ ಕಂಪನಿಗಳು ಮತ್ತೂಂದು ಶಾಕ್ ಕೊಟ್ಟಿವೆ. ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾದ ಮಾವಿನ ಮೇಲೆ ರೈತರು ಇರಿಸಿದ್ದ 9.48 ಕೋಟಿ ರೂ.ಗಳ ವಿಮೆಗೆ ಕಳೆದ ವರ್ಷ ಮಾವು ಬೆಳೆ ಹಾನಿಯಾಗಿದ್ದರೂ ರೈತರಿಗೆ ವಿಮಾ ಕಂಪನಿ 2.62 ಕೋಟಿ ರೂ.ಗಳನ್ನು ಮಾತ್ರ ಪಾವತಿಸಿದೆ.
ಹೌದು, ವಿಮಾ ಕಂಪನಿಗಳು ಮಾಡುವ ಯಡವಟ್ಟು ಮತ್ತು ಕಠಿಣ ನಿಯಮಗಳಿಂದಾಗಿ ರೈತರು ತೋಟಗಾರಿಕೆ ಬೆಳೆಗಳ ಮೇಲೆ ಇರಿಸಿದ್ದ ವಿಮೆಗೆ ತಕ್ಕ ಪರಿಹಾರವನ್ನು ಪಡೆಯಲಾಗುತ್ತಿಲ್ಲ. ರಾಜ್ಯದಲ್ಲಿ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ ರೈತರು ಭತ್ತಿ, ಹತ್ತಿ, ಜೋಳದ ಮೇಲೆ 900 ಕೋಟಿ ರೂ.ಗೂ ಅಧಿಕ ವಿಮೆ ಇರಿಸಿದ್ದರೂ, ನೀಡಿದ್ದು ಮಾತ್ರ ಬರೀ 355 ಕೋಟಿ ರೂ. ಮಾತ್ರ. ಇದೀಗ ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ರೈತರು ಅಲೊ³àನ್ಸೋ ಮಾವಿನ ಮೇಲೆ 2016-17ನೇ ಸಾಲಿಗಾಗಿ ಒಟ್ಟು 9.48 ಕೋಟಿ ರೂ. ವಿಮೆ ಇರಿಸಿದ್ದರು. ಹವಾಮಾನ ಆಧಾರಿತವಾಗಿರುವ ಈ ವಿಮೆಗೆ ಸರಿಯಾಗಿ ಪರಿಹಾರ ಧನ ನೀಡುವ ಬದಲು, ಮಾವು ಬೆಳೆ ಚೆನ್ನಾಗಿ ಬಂದಿದೆ ಎಂದು ಆನೇವಾರಿ ಮಾಡಿ ರೈತರಿಗೆ ಬರೀ 2.62 ಕೋಟಿ ರೂ. ಮಾತ್ರ ಪಾವತಿಸಿದೆ.
ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಲೊ³àನ್ಸೋ ಮಾವಿನ ಹಣ್ಣನ್ನು ಉತ್ಪಾದಿಸುವ ಜಿಲ್ಲೆ. ಇಲ್ಲಿ 11,568 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 87 ರಿಂದ 98 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 5465 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 67680 ಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿತ್ತು. ಕಳೆದ ವರ್ಷ ಇಲ್ಲಿ ಮಾವಿನ ಬೆಳೆ ನಷ್ಟ ಅನುಭವಿಸಿದ್ದರೂ ವಿಮಾ ಕಂಪನಿ ಮಾವು ಬೆಳೆಗಾರರಿಗೆ ಪೂರ್ಣ ಪ್ರಮಾಣದ ಬೆಳೆ ವಿಮೆ ನೀಡುತ್ತಿಲ್ಲ.
ಏನಿದೆ ನಿಯಮ?:
ಪ್ರತಿ ಹೆಕ್ಟೇರ್ ಮಾವಿನ ಬೆಳೆಗೆ ಹವಾಮಾನ ಆಧಾರಿತವಾಗಿ 3125 ರೂ.ಗಳನ್ನು ವಿಮಾ ಕಂಪನಿಗೆ ಕಟ್ಟುತ್ತಾರೆ. ಮಾವಿನ ಬೆಳೆ ಶೇ.100ರಷ್ಟು ಹಾನಿಯಾದರೆ ಪ್ರತಿ ಹೆಕ್ಟೇರ್‌ಗೆ 62,500 ರೂ. ನೀಡಬೇಕು. ಕಳೆದ ಮೂರು ವರ್ಷ ಸತತವಾಗಿ ಶೇ.70ಕ್ಕಿಂತಲೂ ಮಾವಿನ ಬೆಳೆ ವಿವಿಧ ಕಾರಣಕ್ಕಾಗಿ ಹಾನಿಯಾಗಿದ್ದರೂ 2016ನೇ ಸಾಲಿಗೆ ಶೇ.27ರಷ್ಟು ಮಾತ್ರ ಹಾನಿಯಾಗಿದೆ ಎಂದು ಹೆಕ್ಟೇರ್‌ಗೆ 16,876 ರೂ. ಮಾತ್ರ ನೀಡಲು ಮುಂದಾಗಿದೆ. ಇಷ್ಟಕ್ಕೂ ಈ ವಿಮೆ ಹಣ ಇನ್ನೂ ರೈತರ ಖಾತೆಗೆ ಸೇರಿಲ್ಲ.
ಬೀಸುವ ಗಾಳಿಯ ಪ್ರಮಾಣ, ಇತರ ನೈಸರ್ಗಿಕ ವಿಕೋಪಗಳಿಂದ ಆಗುವ ಹಾನಿಯ ಪ್ರಮಾಣವನ್ನು ಗ್ರಾಪಂವಾರು ಆನೇವಾರಿ ಮಾಡಿಸುವ ವಿಮಾ ಕಂಪನಿ ತನ್ನ ಬಳಿ ಮಾಹಿತಿ ಪಡೆದುಕೊಂಡು ವಿಮೆಯನ್ನು ಮರಳಿ ರೈತರಿಗೆ ನೀಡಬೇಕು. ಆನೇವಾರಿ ಮಾಡುವ ಅಧಿಕಾರಿಗಳ ತಪ್ಪೋ, ಸರ್ಕಾರ ತನ್ನ ಪಾಲಿನ ಷೇರು ಹಣವನ್ನು ನೀಡುವಲ್ಲಿ ಮಾಡಿದ ಪ್ರಮಾದವೋ ಗೊತ್ತಿಲ್ಲ. ಆದರೆ ಮಾವಿನ ಬೆಳೆ ನಾಶವಾಗಿದ್ದಕ್ಕೆ ಮಾತ್ರ ಉತ್ತಮ ಪರಿಹಾರ ವಿಮಾ ಕಂಪನಿಯಿಂದ ಬಂದಿಲ್ಲ ಎನ್ನುವ ಕೂಗು ಮಾವು ಬೆಳೆಗಾರರಿಂದ ಕೇಳಿ ಬರುತ್ತಿದೆ.
ಕೊಟ್ಟಿದ್ದು 373 ಕೋಟಿ ಮಾತ್ರ!
2016-17ರಲ್ಲಿ ರಾಜ್ಯದಲ್ಲಿ ರೈತರು ಭತ್ತ, ಜೋಳ, ಹತ್ತಿ, ಮೆಣಸಿಕಾಯಿ ಸೇರಿದಂತೆ ವಿವಿಧ ಬೆಳೆಗಳ ಮೇಲೆ ಇರಿಸಿದ್ದ ಒಟ್ಟು ವಿಮೆ ಹಣ 900 ಕೋಟಿ ರೂ.ಗೂ ಅಧಿಕವಿತ್ತು. ಈ ಪೈಕಿ ಮರಳಿ ರೈತರಿಗೆ ಬೆಳೆ ಹಾನಿಯಾದ ನಂತರ ನೀಡಿದ ವಿಮೆ ಕೇವಲ 373 ಕೋಟಿ ಮಾತ್ರ. ತೋಟಗಾರಿಕೆ ಬೆಳೆಯಾದ ಮಾವು ಬೆಳೆಗೆ ವಿಮೆ ಇರಿಸಿದ್ದ ರೈತರ ಸ್ಥಿತಿಯೂ ಹೀಗೇ ಆಗಿದೆ. ಧಾರವಾಡ ಜಿಲ್ಲೆಯಲ್ಲಿ 2016-17ನೇ ಸಾಲಿಗೆ ಒಟ್ಟು 1500 ಎಕರೆ ಮಾವಿನ ಬೆಳೆಗೆ 993 ರೈತರು 9.48 ಕೋಟಿ ರೂ. ವಿಮೆ ಇರಿಸಿದ್ದರು. ವಿಮೆಯಲ್ಲಿ ರೈತರು ಶೇ.47.41ರಷ್ಟು ಹಣ ತುಂಬಿದರೆ ರಾಜ್ಯ ಶೇ.23.7ರಷ್ಟು ಮತ್ತು ಕೇಂದ್ರ ಸರ್ಕಾರ ಶೇ.23.7ರಷ್ಟು ವಿಮೆಯ ಹಣವನ್ನು ಕಂಪನಿಗೆ ಭರಿಸುತ್ತದೆ.
ನಾನು ಸತತ 8 ವರ್ಷದಿಂದ ಹವಾಮಾನ ಆಧಾರಿತ ವಿಮೆಯನ್ನು ಮಾವು ಬೆಳೆಯ ಮೇಲೆ ಇರಿಸುತ್ತ ಬಂದಿದ್ದೇನೆ. ಆದರೆ ಒಂದೇ ಒಂದು ಬಾರಿಯೂ ನನಗೆ ವಿಮೆ ಬಂದಿಲ್ಲ. ಆದರೆ ಈ ಎಂಟು ವರ್ಷದಲ್ಲಿ ನಾನು ಚೆನ್ನಾಗಿ ಮಾವಿನ ಫಸಲು ಪಡೆದಿದ್ದು ಬರೀ ಎರಡು ಬಾರಿ ಮಾತ್ರ. ರೈತರು ಬರೀ ಹಣ ತುಂಬುತ್ತೇವೆ ಅಷ್ಟೇ. ಆದರೆ ಒಂದೇ ಒಂದು ಬಾರಿಯೂ ವಿಮೆ ಬಂದಿಲ್ಲ.
– ಶಾಂತಯ್ಯ ಹಿರೇಮಠ, ಕೆಲಗೇರಿ. ಮಾವು ಬೆಳೆಗಾರರ ಸಂಘದ ಸದಸ್ಯ
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.