ವಿಮಾ ಯೋಜನೆ ಒಡಂಬಡಿಕೆ
Team Udayavani, Nov 1, 2017, 12:51 PM IST
ಧಾರವಾಡ: ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಇಪ್ಕೋ-ಟೋಕಿಯೋ ಜನರಲ್ ಇನ್ಸುರನ್ಸ್ ಕಂಪನಿ ಹಾಗೂ ಕರ್ನಾಟಕ ರಾಜ್ಯ ವಿಮಾ ಸಹಕಾರ ಸಂಘದ ಸಂಘದ ಆಶ್ರಯದಲ್ಲಿ ವಿಮಾ ಯೋಜನೆಯ ಒಡಂಬಡಿಕೆ ಸಮಾರಂಭ ಇಲ್ಲಿಯ ಕೆಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ವೈ. ಪಾಟೀಲ ಮಾತನಾಡಿ, ಇಪ್ಕೋ-ಟೋಕಿಯೋ ಜನರಲ್ ಇನ್ಸುರನ್ಸ್‌ಕಂಪನಿ ಒಡಂಬಡಿಕೆ ಮಾಡಿಕೊಂಡು, ಯಾವುದೇ ತರಹದ ಹಾನಿಯ ಮೊತ್ತ ಭರಿಸುವ ಕಾರ್ಯಕ್ರಮವನ್ನುಅನುಷ್ಠಾನಗೊಳಿಸುತ್ತಿದೆ. ಪ್ರತಿಯೊಬ್ಬರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು.
ಕಂಪನಿ ಕೂಡಾ ಬ್ಯಾಂಕ್ ನ ಸದಸ್ಯರು, ಗ್ರಾಹಕರಿಗೆ ಶೀಘ್ರ ಕ್ಲೇಮ್‌ಗಳ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ವಿಮಾ ಸಹಕಾರ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ರೈತರು ಮತ್ತು ಗ್ರಾಹಕರು ಹಲವು ರೀತಿಯಲ್ಲಿ ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ.
ಈ ಸಂದರ್ಭದಲ್ಲಿ ಅವರಿಗೆ ನೆರವಾಗಲು ವಿಮೆ ಯೋಜನೆಯನ್ನು ಕೆಸಿಸಿ ಬ್ಯಾಂಕ್ ಅಳವಡಿಸಿಕೊಳ್ಳುತ್ತಿದೆ. ಈಗಾಗಲೇ ರಾಜ್ಯದ 12 ಡಿಸಿಸಿ ಬ್ಯಾಂಕುಗಳು, ಕಾಸ್ಕಾರ್ಡ್, ಅಪೆಕ್ಸ್ ಬ್ಯಾಂಕು, ಅನೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಒಡಂಬಡಿಕೆ ಮಾಡಿಕೊಂಡಿವೆ.
ಈಗ ಇಪ್ಕೋ-ಟೋಕಿಯೋ ಜನರಲ್ ಇನ್ಸುರನ್ಸ್ ಕಂಪನಿಯೊಂದಿಗೆ ಬ್ಯಾಂಕು ಒಡಂಬಡಿಕೆ ಮಾಡಿಕೊಂಡಿದೆ. ಯೋಜನೆಯಲ್ಲಿ ರ್ನಾಟಕ ರಾಜ್ಯ ವಿಮಾ ಸಹಕಾರ ಸಂಘ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಇಪ್ಕೋ-ಟೋಕಿಯೋ ಜನರಲ್ ಇನ್ಸುರನ್ಸ್ ಕಂಪನಿಯ ಸಹಕಾರಿ ವಲಯದ ಸಲಹೆಗಾರ ಬಿ.ಕೆ. ಸುಭಾಸಚಂದ್ರ ಮಾತನಾಡಿ, ಸಹಕಾರ ವಲಯದ ಸಂಸ್ಥೆಗಳ ಆದಾಯ ವೃದ್ಧಿಸುವ ಸಲುವಾಗಿ ಆರ್‌ಬಿಐ ಮತ್ತು ನಬಾರ್ಡ್ ವಿಮಾ ಯೋಜನೆಯ ಅಳವಡಿಕೆಗೆ ಅನುಮತಿ ನೀಡಿವೆ.
ಯಾವುದೇ ಹೂಡಿಕೆ ಇಲ್ಲದೇ ಆದಾಯ ಬರುವುದರಿಂದ ಸಹಕಾರ ಬ್ಯಾಂಕುಗಳ ಆರ್ಥಿಕ ವಹಿವಾಟಿನ ವ್ಯಾಪ್ತಿ ಹಿಗ್ಗಲಿದೆ. ಜೊತೆಗೆ ಸದಸ್ಯರ ಮತ್ತು ಗ್ರಾಹಕರ ಹಿತರಕ್ಷಣೆ ಸಹ ಆಗಲಿದೆ. ಸಹಕಾರ ಕ್ಷೇತ್ರದ ಇಪ್ಕೋ ಸಂಸ್ಥೆಯು ಟೋಕೀಯೋ ಸಂಸ್ಥೆಯೊಂದಿಗೆ ಕೂಡಿ ಆರಂಭಿಸಿರುವ ವಿಮಾ ಯೋಜನೆಯಡಿ ಅತ್ಯಂತ ಕಡಿಮೆ ಪ್ರಮಾಣದ ಕಂತಿನಲ್ಲಿ ಅಧಿಕ ವಿಮೆ ಸೌಲಭ್ಯ ಸಿಗಲಿದೆ ಎಂದರು.
ಕೆಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಪಿ. ಶೆಲ್ಲಿಕೇರಿ ಮತ್ತು ಇಪ್ಕೋ-ಟೋಕಿಯೋ ಜನರಲ್ ಇನ್ಸುರನ್ಸ್ ಕಂಪನಿಯ ಅಧಿಕಾರಿ ಜಿ.ಪಿ. ವರ್ಣೇಕರ ನೂತನ ಯೋಜನೆಯ ಒಡಂಬಡಿಕೆಗೆ ಸಹಿ ಹಾಕಿದರು. ಬ್ಯಾಂಕ್‌ನ ನಿರ್ದೇಶಕರು, ಸಹಕಾರ ಸಂಘಗಳ ಉಪ ನಿಬಂಧಕರಾದ ಸಾವಿತ್ರಿ ಕಡಿ, ವಸೂಲಾಧಿಕಾರಿ ಬಿ.ಬಿ. ನಾಯಕ ಇತರರಿದ್ದರು. ಈಶ್ವರ ಮಾದರ ಪ್ರಾರ್ಥಿಸಿದರು.
ಶಿವಾನಂದ ಹೂಗಾರ ಸ್ವಾಗತಿಸಿದರು. ಎಂ.ಜಿ. ಪಾಟೀಲ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ವಿ.ಬಿ. ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.