ಬುದ್ಧಿಜೀವಿಗಳು ಇನ್ನೊಂದು ಧರ್ಮ ನಿಂದಿಸುವುದು ಬೇಡ
Team Udayavani, Jun 17, 2018, 5:23 PM IST
ಗದಗ: ಇಲ್ಲಿನ ಮಾರುತಿ ತರುಣ ಯುವಕ ಸಂಘ ಮತ್ತು ಗೀಸಾಡೆ ಸಮಾಜದಿಂದ ನಗರದ ಜನತಾ ಬಜಾರಿನಲ್ಲಿ ಶನಿವಾರ ಮಹಾರಾಣ ಪ್ರತಾಪಸಿಂಹ ಮಹಾರಾಜರ ಜಯಂತಿ ಆಚರಿಸಲಾಯಿತು. ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು
ಖಾನಪ್ಪನವರ ಮಾತನಾಡಿ, ರಾಜ್ಯದಲ್ಲಿ ನಡೆದ ಬುದ್ಧಿ ಜೀವಿಗಳ ಹತ್ಯೆಯನ್ನು ಶ್ರೀರಾಮ ಸೇನೆ ಅತ್ಯಂತ ಘೋರವಾಗಿ ಖಂಡಿಸುತ್ತದೆ. ಬುದ್ಧಿಜೀವಿಗಳು ತಮ್ಮ ವಿಚಿತ್ರ ವಿಚಾರಧಾರೆಗಳಿಂದ ಇನ್ನೊಂದು ಧರ್ಮವನ್ನು ನಿಂಧಿಸುವುದರಿಂದ ಇಂತಹ ಪ್ರಕರಣಗಳು ನಡೆಯುತ್ತಿರುವುದು ಖೇದಕರ. ಅಲ್ಲದೇ, ಬುದ್ಧಿಜೀವಿಗಳು ಅನ್ಯಕೋಮು ಹಾಗೂ ಮಠಾಧೀಶರ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡದಂತೆ ಸರಕಾರ ನಿಷೇಧಿಸಬೇಕು ಎಂದು ಸಲಹೆ ನೀಡಿದರು.
ಮಹಾರಾಣ ಪ್ರತಾಪ ಮಹಾರಾಜರು ಯಾವುದೇ ಸಮಾಜಕ್ಕೆ ಸೇರಿದವರಲ್ಲ. ದೇಶ ಭಕ್ತರು, ಮಹಾಂತರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ, ಎಲ್ಲ ಸಮುದಾಯಗಳಿಂದ ಗೌರವನಮನ ಸಲ್ಲಿಕೆಯಾಗಬೇಕು ಎಂದು ಮಾರುತಿ ತರುಣ ಯುವಕ ಸಂಘವನ್ನು ಶ್ಲಾಘಿಸಿದರು. ಗೀಸಾಡೆ ಸಮಾಜದ ಅಧ್ಯಕ್ಷ ಮಾರುತಿ ಸೋಳಂಕಿ, ಮಾರುತಿ ತರುಣ ಸಂಘದ ಅಧ್ಯಕ್ಷ ಅಜಯ ಸೋಳಂಕಿ, ಸುರೇಶ ಚೌಹಾಣ, ಗಣೇಶ ಸೋಳಂಕಿ, ಆರ್ಎಸ್ಎಸ್ ಪ್ರಮುಖರಾದ ರಾಘು ಹಬೀಬ್, ಮಾರುತಿ ದಹಿಂಡೆ, ನಾಗರಾಜ ಸೋಳಂಕಿ, ಶಿವಾಜಿ ಪವಾರ ಕ್ರಾಂತಿಸೇನಾ ಅಧ್ಯಕ್ಷ ಬಾಬು ಬಾಕಳೆ, ಭಗತ್ಸಿಂಗ್ ಅಭಿಮಾನಿಗಳ ಬಳಗದ ಅಧ್ಯಕ್ಷ ಶಿವಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.