ಉದ್ಯಮಿಗಳ ಸ್ವಾಗತಕ್ಕೆ ಹೂ-ಬಳ್ಳಿ ಸಜ್ಜು


Team Udayavani, Feb 14, 2020, 11:50 AM IST

huballi-tdy-1

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಉದ್ಯಮ ವೇಗೋತ್ಕರ್ಷ ನಿಟ್ಟಿನಲ್ಲಿ ರಾಜ್ಯ ಸರಕಾರ ಎರಡನೇ ಸ್ತರದ ನಗರದಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ಮಹತ್ವದ ಹೆಜ್ಜೆ ಇರಿಸಿದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ(ಹೂ-ಬಳ್ಳಿ) ದೇಶದ ವಿವಿಧ ಕಡೆಯ ಉದ್ಯಮಿಗಳು, ವಿದೇಶಿ ಕಂಪೆನಿಗಳ ದೇಶದ ಪ್ರತಿನಿಧಿಗಳ ಸ್ವಾಗತಕ್ಕೆ ಸಜ್ಜಾಗಿದೆ. ಉದ್ಯಮ ಹೂಡಿಕೆಯ ಸಿಹಿ ಸುದ್ದಿಗೆ ಉತ್ತರ ಕರ್ನಾಟಕ ಕಾತರವಾಗಿದೆ.

ಹೂಡಿಕೆದಾರರ ಮೇಳ ಬೆಂಗಳೂರಿಗೆ ಸೀಮಿತ ಎನ್ನುವಂತಾಗಿತ್ತು. ಇದೀಗ ದ್ವಿತೀಯ ಸ್ತರದ ನಗರಗಳ ಕಡೆ ಹೆಜ್ಜೆ ಹಾಕುತ್ತಿದ್ದು, ಸಹಜವಾಗಿಯೇ 2-3ನೇ ಸ್ತರದ ನಗರಗಳನ್ನು ಪುಳಕಿತವಾಗಿಸುತ್ತಿದೆ. ಹುಬ್ಬಳ್ಳಿಯಲ್ಲಿ ಫೆ. 14ರಂದು ನಡೆಯುವ ಹೂಡಿಕೆದಾರ ಮೇಳ ಉದ್ಯಮ ಬೆಳವಣಿಗೆಯ ನಿರೀಕ್ಷೆಗಳು ಗರಿಗೆದರುವಂತಾಗಿದೆ.

ಮೇಳವನ್ನು ಯಶಸ್ವಿಯಾಗಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಮುಂಬೈ, ಹೈದರಾಬಾದ್‌, ಗುವಾಹಟಿ ಇನ್ನಿತರ ಕಡೆಗಳಲ್ಲಿ ರೋಡ್‌ ಶೋ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಮೂಲಕ ಮೇಳಕ್ಕೆ ಉದ್ಯಮಿಗಳನ್ನು ಆಕರ್ಷಿಸುವ ಯತ್ನ ಕೈಗೊಂಡಿದ್ದಾರೆ.

ಉದ್ಯಮ ದಿಗ್ಗಜ ಗೋದ್ರೇಜ್‌, ಅದಾನಿ, ಟಾಟಾ, ಹಿಂದೂಜಾ, ಎಲ್‌ ಆ್ಯಂಡ್‌ ಟಿ, ಚೀನಾದ ಕಂಪೆನಿಯೊಂದರ ದೇಶದ ನಿಯೋಗ, ಜವಳಿ, ವಾಲ್ಸ್‌, ಸೌರಶಕ್ತಿ, ಆಹಾರ ಸಂಸ್ಕರಣೆ, ಎಫ್ಎಂಜಿಸಿ ಉದ್ಯಮ ವಲಯ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಸುಮಾರು 700ಕ್ಕೂ ಹೆಚ್ಚು ಉದ್ಯಮಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಕೃಷಿ ಉಳಿಯಬೇಕು-ಉದ್ಯಮವೂ ಬೆಳೆಯಬೇಕು: ಉತ್ತರ ಕರ್ನಾಟಕ ಅಭಿವೃದ್ಧಿ, ಮೂಲಸೌಕರ್ಯಗಳ ದೃಷ್ಟಿಯಿಂದ ಹಿಂದುಳಿದಿದೆ ಎಂಬುದು ಬಿಟ್ಟರೆ, ಉದ್ಯಮಕ್ಕೆ ಬೇಕಾದ ಸಂಪನ್ಮೂಲ, ಕಚ್ಚಾ ಸಾಮಗ್ರಿ, ಉತ್ತಮ ವಾತಾವರಣ ದೃಷ್ಟಿಯಿಂದ ಮಹತ್ವದ ಸ್ಥಾನ ಹೊಂದಿದೆ. ಉಕ ಉತ್ತಮ ಖನಿಜ ಸಂಪತ್ತು ಹೊಂದಿದೆ. ಅಕ್ಕಿ, ತೊಗರಿಬೇಳೆ, ಮೆಕ್ಕೆಜೋಳ, ತರಕಾರಿ, ದಾಳಿಂಬೆ, ದ್ರಾಕ್ಷಿ, ಪೇರಲ ಹೀಗೆ ವೈವಿಧ್ಯಮಯ ಕೃಷಿ-ತೋಟಗಾರಿಕೆ ಉತ್ಪನ್ನಗಳ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿದೆ. ಕೃಷಿಯೂ ಉಳಿಯಬೇಕು, ಉದ್ಯಮವೂ ಬೆಳೆಯಬೇಕು ಇಂತಹ ಸಮತೋಲಿತ ನಿಯಮದಡಿ ಸಾಗಬೇಕಾಗಿದೆ. ಉಕದಲ್ಲಿ ಕೃಷಿ-ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಉದ್ಯಮಕ್ಕೆ ವಿಶೇಷ ಒತ್ತು ನೀಡಬೇಕಾಗಿದೆ.

ಈ ಭಾಗದಲ್ಲಿನ ಆಹಾರ ಧಾನ್ಯಗಳು, ಹಣ್ಣುಗಳು ಇನ್ನಿತರ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾದರೆ ರೈತರಿಗೂ ಉತ್ತಮ ದರ ದೊರೆಯಲಿದೆ. ಕೃಷಿಯಿಂದ ವಿಮುಖರಾಗಿ ನಗರಕ್ಕೆ ವಲಸೆ ಹೋಗಿರುವ ಯುವ ಸಮೂಹವನ್ನು ಕೃಷಿ-ತೋಟಗಾರಿಕೆಗೆ ಆಕರ್ಷಿತಗೊಳಿಸಬಹುದಾಗಿದೆ. ಉತ್ತರ ಕರ್ನಾಟಕವೆಂದರೆ ಸಂಪರ್ಕ ಕೊರತೆ ತಾಣವೆಂದೇ ಮೂದಲಿಕೆಗೆ ಒಳಗಾಗಿತ್ತು. ಇದಕ್ಕಾಗಿಯೇ ಉದ್ಯಮ ವಲಯ ಹಿಂದೇಟು ಹಾಕುತ್ತಿತ್ತು. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬೀದರ, ಬಳ್ಳಾರಿ ಇನ್ನಿತರ ಕಡೆಗಳಿಗೆ ವಿಮಾನಯಾನ ಸಂಪರ್ಕ ಆರಂಭವಾಗಿದೆ. ರೈಲ್ವೆ ಸಂಪರ್ಕದಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಉದ್ಯಮಕ್ಕೆ ಇದುಪೂರಕವಾಗಿದೆ.

ಮತ್ತೂಂದು ಜಾತ್ರೆ ಆಗದಿರಲಿ: ಹೂಡಿಕೆದಾರರ ಮೇಳದ ಸಂಭ್ರಮದ ಬೆನ್ನಹಿಂದೆಯೇ ಒಡಂಬಡಿಕೆಗಳ ಅನುಷ್ಠಾನಕ್ಕೆ ಸವಾಲು ಎದುರಿಸಲು ಸಜ್ಜಾಗಬೇಕಾಗಿದೆ. ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿ, ಉದ್ಯಮ ಪರವಾನಗಿ, ಸೌಲಭ್ಯಗಳ ನೀಡಿಕೆ ಇನ್ನಿತರ ವಿಚಾರದಲ್ಲಿ ನಿಧಾನದ್ರೋಹ ತಡೆಯುವಿಕೆಗೆ ಕಟ್ಟುನಿಟ್ಟಿನ ಕ್ರಮ, ಉದ್ಯಮಾಕರ್ಷಣೆ ಯೋಜನೆಗಳಿಗೆ ಒತ್ತು ನೀಡಬೇಕಾಗಿದೆ. ಕೈಗೊಂಡ ಒಡಂಬಡಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಬೇಕೆ ವಿನಃ ಇದು ಮತ್ತೂಂದು ಜಾತ್ರೆಯಾಗಬಾರದು ಎಂಬುದು ಅನೇಕರ ಅನಿಸಿಕೆ.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಮೇಳ, ಇದಕ್ಕೆ ಪೂರ್ವಭಾವಿಯಾಗಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಮೇಳಗಳಲ್ಲಿ ಅನೇಕ ಉದ್ಯಮಿಗಳು ಭಾಗಿಯಾಗಿದ್ದರು. ಹೂಡಿಕೆ ಭರವಸೆ ನೀಡಿ ಒಡಂಬಡಿಕೆಗೆ ಸಹಿ ಹಾಕಿದ್ದರು. ಆದರೆ, ಫ‌ಲಿತಾಂಶ ಏನೆಂದು ನೋಡಿದಾಗ ಉತ್ತರದ ಮಟ್ಟಿಗೆ ನಿರಾಸೆಯೇ ಕಾಣುತ್ತಿದೆ.

ಬೆಂಗಳೂರಿನಲ್ಲಿ ನಡೆದ ಜಿಮ್‌ನಲ್ಲಿ ಅನೇಕ ಕಂಪೆನಿಗಳು ಉತ್ತರಮುಖೀಯಾಗುವ ಭರವಸೆ ನೀಡಿದ್ದವು. ಜುವಾರಿ ರಸಗೊಬ್ಬರ ಮತ್ತು ಕೆಮಿಕಲ್ಸ್‌ ಕಂಪೆನಿ ಬೆಳಗಾವಿಯಲ್ಲಿ ವಾರ್ಷಿಕ 11.55 ಮಟ್ರಿಕ್‌ ಟನ್‌ ಸಾಮರ್ಥ್ಯದ ಯೂರಿಯಾ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಭರವಸೆ ನೀಡಿತ್ತು. ಇದಕ್ಕಾಗಿ ಅಂದಾಜು 4,565 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಅದೇ ರೀತಿ ಹಾವೇರಿಯಲ್ಲಿ ಟಾಟಾ ಮೆಟಾಲಿಕ್‌ ಸ್ಟೀಲ್‌ ಪ್ಲಾಂಟ್‌ ಸ್ಥಾಪನೆ ಮಾಡುವುದಾಗಿ ತಿಳಿಸಿತ್ತು. ಹೀಗೆ ಹಲವಾರು ಉದ್ಯಮಗಳು ಭರವಸೆ ನೀಡಿದ್ದವಾದರೂ ನಿರೀಕ್ಷಿತ ರೀತಿಯ ಯಶಸ್ಸು ಕಂಡಿಲ್ಲ. ಉದ್ಯಮ ಸ್ಥಾಪನೆ ಒಡಂಬಡಿಕೆ ಅನುಷ್ಠಾನಕ್ಕೆ ಮನವೊಲಿಕೆ, ಉದ್ಯಮ ಸ್ನೇಹಿ ವಾತಾವರಣ, ಅಗತ್ಯ ಮೂಲಸೌಕರ್ಯಗಳ ಲಭ್ಯತೆಯ ಮನವರಿಕೆಗೆ ಒತ್ತು ನೀಡಬೇಕಾಗಿದೆ.

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.