ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ
Team Udayavani, Sep 15, 2019, 10:33 AM IST
ಹುಬ್ಬಳ್ಳಿ: ಅಭಿವೃದ್ಧಿ ಸಂವಾದದಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು, ಸಾರ್ವಜನಿಕರು.
ಹುಬ್ಬಳ್ಳಿ: ಅವಳಿನಗರದಲ್ಲಿ ಕೈಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚಿಸಿ, ಸಮಾವೇಶ ಆಯೋಜನೆಗೆ ಯತ್ನಿಸುವೆ. ಅದೇ ರೀತಿ ಹುಬ್ಬಳ್ಳಿಗೆ ಉದ್ಯಮಿಗಳಾದ ಅದಾನಿ, ಅಂಬಾನಿ ಅವರನ್ನು ಕರೆತರಲು ಯತ್ನಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಟೈ ಹುಬ್ಬಳ್ಳಿ ಆಯೋಜಿಸಿದ್ದ ‘ಹು-ಧಾ ಅಭಿವೃದ್ಧಿ ನೋಟ’ ಸಂವಾದದಲ್ಲಿ ಉದ್ಯಮಿಗಳ ಪ್ರಶ್ನೆ ಹಾಗೂ ಸಲಹೆಗಳನ್ನು ಆಲಿಸಿ ಅವರು ಮಾತನಾಡಿದರು.
ಜಾಗತಿಕ ಹೂಡಿಕೆದಾರರ ಸಮಾವೇಶ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ಹುಬ್ಬಳ್ಳಿ-ಧಾರವಾಡಕ್ಕೂ ಬರಲಿ ಎಂಬ ತಮ್ಮ ಅನಿಸಿಕೆ ಸೂಕ್ತವಾಗಿದೆ. ಇದಕ್ಕೆ ಪೂರಕವಾಗಿ ಸಚಿವ ಜಗದೀಶ ಶೆಟ್ಟರ ಜತೆ ಚರ್ಚಿಸುವೆ. 2-3 ತಿಂಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕೈಗಾರಿಕೆ ಹೂಡಿಕೆಯಲ್ಲಿ ಕೆಲ ಬದಲಾವಣೆ ನಿಟ್ಟಿನಲ್ಲಿ ಸಚಿವ ಶೆಟ್ಟರ, ನಾನು ಹಾಗೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ 15-20 ದಿನಗಳಲ್ಲಿ ಸಭೆ ಮಾಡೋಣ ಎಂದರು.
ಹುಬ್ಬಳ್ಳಿ-ಧಾರವಾಡಕ್ಕೆ ಸಂಪರ್ಕ ಹಾಗೂ ಮೂಲಸೌಲಭ್ಯಗಳ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ-ಚೆನ್ನೈ ನಡುವೆ ನೇರ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಗಿದೆ. ಹುಬ್ಬಳ್ಳಿ-ಮುಂಬಯಿ ನಡುವೆ ಪ್ರಸ್ತುತ ಐದು ದಿನ ವಿಮಾನಯಾನವನ್ನು ಏಳು ದಿನಕ್ಕೆ ವಿಸ್ತರಿಸಲಾಗುವುದು. ಇದಲ್ಲದೆ, ಹುಬ್ಬಳ್ಳಿ-ಬೆಂಗಳೂರು ನಡುವೆ ಬೆಳಗ್ಗೆ ಹಾಗೂ ರಾತ್ರಿ ಮತ್ತೂಂದು ವಿಮಾನಗಳು ಸಂಚಾರ ಆರಂಭಿಸಲಿವೆ ಎಂದು ಹೇಳಿದರು.
ಆಹಾರ ಸಂಸ್ಕರಣೆ ಉದ್ಯಮ, ಸಬ್ಸಿಡಿ ಇನ್ನಿತರ ಸಮಸ್ಯೆಗಳ ಕುರಿತಾಗಿ ಇಲ್ಲಿನ ಉದ್ಯಮಿಗಳ ನಿಯೋಗ ದೆಹಲಿಗೆ ಬಂದರೆ ಸಂಬಂಧಿಸಿದ ಸಚಿವರ ಬಳಿಗೆ ಕರೆದೊಯ್ದು ಸೌಲಭ್ಯಕ್ಕೆ ಯತ್ನಿಸಲಾಗುವುದು. ಅದೇ ರೀತಿ ಉದ್ಯಮ ಅಭಿವೃದ್ಧಿ ಇನ್ನಿತರ ವಿಷಯಗಳ ಕುರಿತಾಗಿ ಟೈ ನಿಯೋಗ ದೆಹಲಿಗೆ ಬಂದರೆ ಕೇಂದ್ರ ಸರಕಾರದಿಂದ ದೊರೆಯುವ ಸೌಲಭ್ಯ, ಯೋಜನೆಗಳ ಜಾರಿಗೆ ಯತ್ನಿಸುವೆ ಎಂದರು.
ಮುದ್ರಾ ಯೋಜನೆ ಸಮಸ್ಯೆಗಳ ಕುರಿತಾಗಿ ನಿರ್ದಿಷ್ಟ ಪ್ರಕರಣಗಳೊಂದಿಗೆ ಆಗಮಿಸಿದರೆ ಸಂಬಂಧಿಸಿದ ಬ್ಯಾಂಕ್‌ಗಳೊಂದಿಗೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.
ಟೈ ಹುಬ್ಬಳ್ಳಿ ಅಧ್ಯಕ್ಷ ಶಶಿಧರ ಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ಅವಳಿನಗರ ಅಭಿವೃದ್ಧಿ ನಿಟ್ಟಿನಲ್ಲಿ ಇರಬಹುದಾದ ಅವಕಾಶಗಳ ಕುರಿತು ಹಲವು ಪ್ರಸ್ತಾವನೆಗಳ ಮಾಹಿತಿ ನೀಡಿದರು. ಅವಳಿನಗರಕ್ಕೆ ಬೃಹತ್ ಉದ್ಯಮ ತರುವುದು, ಹೂಡಿಕೆದಾರ ಸಮಾವೇಶ ಮೊದಲು ಉದ್ಯಮ ಬೇಡಿಕೆಗೆ ತಕ್ಕ ಸೌಲಭ್ಯ ತಯಾರಿ, ಸ್ಮಾರ್ಟ್ ಸಿಟಿ, ಮೂಲಸೌಲಭ್ಯ, ಬಿಆರ್‌ಟಿಎಸ್ ವಿಳಂಬ, ನಗರ ಯೋಜನೆ ನೀತಿಗಳು ಇನ್ನಿತರ ವಿಷಯಗಳ ಕುರಿತಾಗಿ ವಿವಿಧ ಉದ್ಯಮಿಗಳು ಅನಿಸಿಕೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ತು ಸದಸ್ಯ ಪ್ರೊ| ಎಸ್.ವಿ. ಸಂಕನೂರು, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಟೈ ಹುಬ್ಬಳ್ಳಿ ಸದಸ್ಯರು, ಉದ್ಯಮಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.