ಪ್ರಕೃತಿ ಮಾತೆ ಉಳಿಸುವುದು ಅನಿವಾರ್ಯ
Team Udayavani, Apr 23, 2019, 11:45 AM IST
ಹುಬ್ಬಳ್ಳಿ: ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿ ಭೂಮಿ, ಪ್ರಕೃತಿ ಮಾತೆ ಉಳಿಸುವುದು ಇಂದಿನ ಅನಿವಾರ್ಯತೆ ಎಂದು ಪರಿಸರ ಪ್ರೇಮಿ ಆರ್.ಜಿ. ತಿಮ್ಮಾಪುರ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇಶಪಾಂಡೆ ಪ್ರತಿಷ್ಠಾನ ಸಹಯೋಗದಲ್ಲಿ ಇಲ್ಲಿನ ವಿದ್ಯಾನಗರ ಅಕ್ಷಯ ಕಾಲೊನಿಯ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವಗಳಿಗೆ ಅಗತ್ಯವಾಗಿರುವುದೆಲ್ಲವೂ ಭೂಮಿಯಲ್ಲಿದೆ. ಸಕಲ ಜೀವರಾಶಿಗಳಿಗೂ ಇರುವುದೊಂದೇ ಭೂಮಿ. ಜೀವೋತ್ಪತ್ತಿ ಮತ್ತು ಜೀವವಿಕಾಸಕ್ಕೆ ನೆರವಾದದ್ದು ಸಸ್ಯ ಸಂಕುಲ. ಮನುಷ್ಯನ ದುರಾಸೆಯಿಂದ ಸಸ್ಯ ಸಂಕುಲ, ನೈಸರ್ಗಿಕ ಸಂಪನ್ಮೂಲ ಕ್ಷೀಣಿಸುತ್ತಿದೆ. ಅದು ಜೈವಿಕ ಅಸಮತೋಲನ ಮತ್ತು ಭೂ ಉಷ್ಣತೆ ಹೆಚ್ಚಲು ಕಾರಣವಾಗಿದೆ ಎಂದರು.
ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ಹಸಿರಿನಿಂದ ಕಂಗೊಳಿಸುತ್ತಿದ್ದ ಭೂಮಿ ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ಮಾಲಿನ್ಯ, ಅತಿ ಜನಸಂಖ್ಯೆಯಿಂದ ಗೊಂದಲದ ಗೂಡಾಗುತ್ತಿದೆ. ಮನುಷ್ಯ ಅನ್ನ ಬೆಳೆಯುವ ಮಣ್ಣು, ಉಸಿರಾಡುವ ಗಾಳಿ, ಕುಡಿಯುವ ನೀರು ಸೇರಿದಂತೆ ಭೂಮಾತೆಯ ಒಡಲಿಗೆ ವಿಷವುಣಿಸಿ ಚಂದ್ರನ ಮೇಲೆ, ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿದ್ದಾನೆ ಎಂದರು.
ವಿದ್ಯಾರ್ಥಿಗಳಾದ ಯಶವಂತ ಕೋಡಬಾಳ, ಮೇಘಾ ಮಾಳಮ್ಮನವರ ಅತಿಥಿಯಾಗಿ ಮಾತನಾಡಿದರು. ಭೂಮಿ ಹಾಗೂ ಜೀವಿಗಳ ಉಗಮ, ಭೂಮಿ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ವಿಸ್ಮಯ, ಕುತೂಹಲಕಾರಿ ಸಂಗತಿಗಳ ಕುರಿತು ವೀಡಿಯೋ ಮತ್ತು ಪ್ರಜಂಟೇಶನ್ ಮೂಲಕ ಮಕ್ಕಳಿಗೆ ಶಿಕ್ಷಕ ಭರಮಪ್ಪ ಮೂಲಗಿ ತಿಳಿಸಿದರು.
ನಂತರ ನಡೆದ ಸಂವಾದದಲ್ಲಿ ಆರ್.ಜಿ. ತಿಮ್ಮಾಪುರ ವಿದ್ಯಾರ್ಥಿಗಳು ಕೇಳಿದ ಆಲದ ಮರಕ್ಕೆ ಬೀಳಲು ಬೇರುಗಳು ಏಕಿರುತ್ತವೆ? ಇತ್ತೀಚೆಗೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಏಕೆ? ಸೇರಿದಂತೆ ಇನ್ನಿತರೆ ಪ್ರಶ್ನೆಗಳಿಗೆ ಉತ್ತರಿಸಿದರು.
ಶಂಕರ ಕುರುಬರ, ಫಕ್ಕೀರೇಶ್ವರ ಮಡಿವಾಳರ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ಭಾಗ್ಯಶ್ರೀ ಗಂಡಿ, ಪುಂಡಲೀಕ ದೇವರಮನಿ, ದೀಪ್ತಿ ಗಾಯಕವಾಡ, ರಮೇಶ ಹನಸಿ, ಬಸವರಾಜ ಮುದಗಲ್ಲ, ನಾರಾಯಣ ಚವ್ಹಾಣ, ಜ್ಯೋತಿ ಕಾಪರೆ, ಹನ್ನಿಫಾ ಗೋಟೇಗಾರ, ನಿಂಗನಗೌಡ ಸತ್ತಿಗೌಡ್ರ, ಮಂಜುನಾಥ ಜಾನಣ್ಣವರ, ಸವಿತಾ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.