ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಸಾಧ್ಯವೇ
Team Udayavani, Jun 30, 2019, 9:29 AM IST
ಧಾರವಾಡ : ಹಿರಿಯ ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಮಾತನಾಡಿದರು.
ಧಾರವಾಡ: ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಇಂಗ್ಲಿಷ್ ಕಲಿಕೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ ಎಂಬುದನ್ನು ಸರ್ಕಾರ ಪರಾಮರ್ಶಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ|ಬರಗೂರು ರಾಮಚಂದ್ರಪ್ಪ ಹೇಳಿದರು.
ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಭಾಷಾ ಬೋಧಕರ ಪರಿವಾರ ವತಿಯಿಂದ ಇಲ್ಲಿನ ಜೆಎಸ್‌ಎಸ್ ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ಶಿಕ್ಷಣ ಕ್ಷೇತ್ರ ಇಂದು ಗೊಂದಲದ ಗೂಡಾಗಿದೆ. ಶೈಕ್ಷಣಿಕ ಸ್ವಾಯತ್ತತೆ ಹಾಗೂ ಸಮಾನತೆ ಹಾಳಾಗುತ್ತಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ತರ್ಕಕ್ಕೆ ಬಿದ್ದು ಸರ್ಕಾರ ಇಂದು 47,928 ಸರ್ಕಾರಿ ಶಾಲೆಗಳಲ್ಲಿ ಒಂದು ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದ್ದೀರಿ. ಹಾಗಾದರೆ ಇನ್ನುಳಿದ 46,928 ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ ಎಂಬುದನ್ನು ಸರ್ಕಾರ ಪರಾಮರ್ಶಿಸಿಕೊಳ್ಳಬೇಕು. ಅಂಗನವಾಡಿಯಿಂದಲೇ ಶಿಕ್ಷಣದಲ್ಲಿ ಅಸಮಾನತೆ ತಂದು ಹಸುಗೂಸುಗಳಲ್ಲಿ ಅಸಮಾನತೆ ಬೀಜ ಬಿತ್ತಲಾಗುತ್ತಿದೆ. ಇದು ಅಮಾನವೀಯತೆ ಎಂದರು.
ಜಾಗತಿಕರಣ ವೇಳೆ ಈ ದೇಶದ ಪ್ರಾದೇಶಿಕ ಭಾಷೆಗಳಿಗೆ ಹೊಡೆತ ಬಿದ್ದಿದೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. 1973ರಿಂದ ಕನ್ನಡ ಭಾಷೆ ಅಧಃಪತನದ ಹಾದಿಯಲ್ಲಿದೆ ಎಂದು ತಾವು ಕೇಳುತ್ತ ಬಂದಿದ್ದೇನೆ. ಅಂದಿನಿಂದಲೂ ಜನ ಕನ್ನಡವನ್ನು ಉಸಿರಾಡುತ್ತ ಬಂದಿದ್ದಾರೆ. ಹಾಗಂತ ನಾವೆಲ್ಲರೂ ಮೈಮರೆಯುವಂತಿಲ್ಲ. ಈಗಾಗಲೇ ಜಗತ್ತಿನಲ್ಲಿ 30 ಸಾವಿರ ಭಾಷೆಗಳು ನಾಶವಾಗಿವೆ ಎಂದರು.
ಪ್ರಸ್ತುತ ಜಗತ್ತಿನಲ್ಲಿ 6703 ಭಾಷೆಗಳು ಇವೆ. 6703 ಭಾಷೆಗಳಲ್ಲಿ 10 ಭಾಷೆಗಳನ್ನು ಜಗತ್ತಿನಲ್ಲಿ ಮಾತನಾಡುತ್ತಾರೆ. ಅದರಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿದೆ. ಜಗತ್ತಿನಲ್ಲಿ ನಾಶ ಹೊಂದುತ್ತಿರುವ 20 ಭಾಷೆಗಳಲ್ಲಿ ಕನ್ನಡವೂ ಸೇರಿದೆ. ಕನ್ನಡ ಬದುಕಿನ ಭಾಷೆಯಾದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ. ದೇಶದಲ್ಲಿ ಶೇ 22.5 ಉನ್ನತ ಶಿಕ್ಷಣ ಇದೆ. ಉನ್ನತ ಶಿಕ್ಷಣದಲ್ಲಿ ಬಹುರೂಪ ಬರಬೇಕು. ಅದರಂತೆ ಪ್ರಾಥಮಿಕ ಶಿಕ್ಷಣದಲ್ಲಿ ಏಕರೂಪತೆ ಬರಬೇಕು. ಶೈಕ್ಷಣಿಕ ಸ್ವಾಯತ್ತತೆ ಹಾಗೂ ಸಮಾನತೆಗಾಗಿ ಒಂದು ಚಳವಳಿ ಕಟ್ಟಬೇಕು. ಅದನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಡಾ|ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ|ಡಿ.ಎಂ. ಹಿರೇಮಠ, ಎಸ್. ಜಯಕುಮಾರ, ಸಾಹಿತಿ ಡಾ|ಸುಬ್ರಾವ್ ಎಂಟೆತ್ತಿನವರ, ಡಿಡಿಪಿಐಗಳಾದ ವಿದ್ಯಾ ನಾಡಿಗೇರ, ಗಜಾನನ ಮನ್ನಿಕೇರಿ, ಡಯಟ್ ಪ್ರಾಚಾರ್ಯ ಅಬುದುಲ್ ವಾಜೀದ್ ಖಾಜಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.