ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮ
Team Udayavani, Apr 1, 2022, 10:14 AM IST
ಅಣ್ಣಿಗೇರಿ: ರೇಣುಕಾಚಾರ್ಯರ ಜಯಂತಿಯನ್ನು ಸರಕಾರದಿಂದ ಮಾ.16ರಂದು ಆಚರಣೆ ಮಾಡಲು ಘೋಷಣೆ ಮಾಡಿರುವುದು ಅಭಿನಂದನೀಯ. ಅದೇ ರೀತಿ ಜಂಗಮ ಸಮಾಜದವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವ ಕಾರ್ಯಕ್ಕೂ ಸರ್ಕಾರ ಮುಂದಾಗಬೇಕಾಗಿದೆ ಎಂದು ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಪುರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಮ್ಮ ತಾಯಿ-ತಂದೆ ಹೆಸರಿನಲ್ಲಿ ಅಣ್ಣಿಗೇರಿ ಜಂಗಮ ಸಮಾಜಕ್ಕೆ ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವಕ್ಕಾಗಿ 2 ಲಕ್ಷ ನಗದನ್ನು ದೇಣಿಗೆಯಾಗಿ ನೀಡಿದರು. ಮುಂದಿನ ದಿನಗಳಲ್ಲಿ ರೇಣುಕಾಚಾರ್ಯರ ಸಭಾಭವನಕ್ಕೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಅಡನೋರಿನ ಶಿವಾಚಾರ್ಯರು, ಹೊಸಳ್ಳಿಯ ಬೂದೀಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಿ.ಬಿ. ಗಂಗಾಧರಮಠ, ವೀರೇಶ ಪುರದೀರಪ್ಪನಮಠ, ನಾಗಪ್ಪ ದಳವಾಯಿ, ಜಂಗಮ ಸಮಾಜದ ತಾಲೂಕಾಧ್ಯಕ್ಷ ಸುರೇಶ ಹೊಂಬಾಳಿಮಠ, ಸುರೇಶ ಹಿರೇಮಠ, ಜಗದೀಶ ಅಬ್ಬಿಗೇರಿಮಠ, ಕಿರಣ ಹಿರೇಮಠ, ಪ್ರಕಾಶ ಕರವೀರಮಠ, ವೀರಯ್ಯ ಪರ್ವತದೇವರ ಮಠ, ಶ್ರೀಶೈಲಯ್ಯ ನಮಸ್ತೆಮಠ, ಭಾರತಿ ಹಿರೇಮಠ, ಶಶಿಕಲಾ, ಶೋಭಾ ಹಿರೇಮಠ ಇನ್ನಿತರರಿದ್ದರು.
ಪುರಸಭೆ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು. ವಿ.ಎಂ. ಹಿರೇಮಠ ಸ್ವಾಗತಿಸಿದರು. ಮಾಂತೇಶ ವಸ್ತ್ರದ ಪ್ರಾಸ್ತಾವಿಕ ಮಾತನಾಡಿದರು. ಎಂ.ವಿ. ಮುತ್ತಲಗೇರಿ ನಿರೂಪಿಸಿದರು. ಸೋಮಶೇಖರ ಹಿರೇಮಠ ವಂದಿಸಿದರು.
ಭವ್ಯ ಮೆರವಣಿಗೆ: ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಬಂಗಾರೇಶ ಹಿರೇಮಠ, ಶಿವಯೋಗಿ ಸುರಕೋಡ, ಷಣ್ಮುಖ ಗುರಿಕಾರ ಚಾಲನೆ ನೀಡಿದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಬಸವರಾಜ ಕುಂದಗೋಳಮಠ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.