ಅತಿ ಕಡಿಮೆ ಪ್ರೀಮಿಯಂ ದರದ ಜನರಕ್ಷಾ ವಿಮೆ ಜಾರಿ
ಜನರಕ್ಷಾ ಯೋಜನೆ ಬಿಡುಗಡೆ
Team Udayavani, Mar 16, 2022, 12:10 PM IST
ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಲಿಬರ್ಟಿ ಇನ್ಸುರನ್ಸ್ ಕಂಪನಿ ಸಹಯೋಗದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಅತಿ ಕಡಿಮೆ ಪ್ರೀಮಿಯಂ ದರದ ವಿಮಾ ಯೋಜನೆ ಜಾರಿ ಮಾಡಲಾಗಿದೆ.
ನಗರದ ಕೆವಿಜಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷ ಪಿ.ಗೋಪಿಕೃಷ್ಣ ಹಾಗೂ ಲಿಬರ್ಟಿ ಕಂಪನಿ ಉಪಾಧ್ಯಕ್ಷ ಮನೀಶ್ ಕೊಟ್ಯಾನ್ ಸಮ್ಮುಖದಲ್ಲಿ ಜನರಕ್ಷಾ ಹೆಸರಿನ ಈ ಯೋಜನೆ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ, 9 ಜಿಲ್ಲೆಗಳ ಕಾರ್ಯ ಕ್ಷೇತ್ರದಲ್ಲಿ 2 ಸಾವಿರಕ್ಕೂ ಮಿಕ್ಕಿದ ಗ್ರಾಮಗಳನ್ನು ಹೊಂದಿದ್ದು, ಸುಮಾರು 90 ಲಕ್ಷ ಗ್ರಾಹರನ್ನು ಹೊಂದಿದೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಡೆಂಘೀ ಜ್ವರ, ಮಲೇರಿಯಾ, ಚಿಕೂನ್ ಗುನ್ಯಾ ಸಾಮಾನ್ಯವಾಗಿದ್ದು, ಈ ರೋಗದಿಂದ ಅಥವಾ ಇನ್ನಿತರೆ ವಾಹಕ ರೋಗಗಳಾದ ಜಪಾನೀಸ್ ಎನ್ಸೆಫಾಲಿಟಿಸ್ಕ, ಕಲಾ-ಅಜರ್, ದುಗ್ಧರಸ ಫೈಲೇರಿಯಾಸಿಸ್, ಝಿಕಾ ವೈರಸ್ ರೋಗಗಳಿಂದ ಬಳಲುವವರಿಗೆ ಕೇವಲ 35 ರೂ. ವಾರ್ಷಿಕ ಪ್ರೀಮಿಯಂ ದರದಲ್ಲಿ 10,000 ರೂ.ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. ಇದರ ಜತೆಗೆ ಅಪಘಾತ ಸಾವಿಗೆ 20,000 ರೂ. ವಿಮಾ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಕೇವಲ ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಯಾವುದೇ ವಯಸ್ಸಿನ ನಿರ್ಬಂಧವಿರಲ್ಲ. ಬ್ಯಾಂಕಿನ ಎಲ್ಲ ಗ್ರಾಹಕರನ್ನು ಈ ವಿಮಾ ಯೋಜನೆಯೊಳಗಡೆ ತರಲು ಯೋಜಿಸಲಾಗಿದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸದ ಗ್ರಾಹಕರು ಸಂಬಂಧಿತ ಶಾಖೆಗೆ ತಿಳಿಸಿದಲ್ಲಿ ಅವರ ಹಣ ವಾಪಸ್ ನೀಡಲಾಗುವುದು ಎಂದರು.
ಲಿಬರ್ಟಿ ಜನರಲ್ ಇನ್ಶೂರೆನ್ಸ್‌ನ ಹಿರಿಯ ಉಪಾಧ್ಯಕ್ಷ ಮನೀಶ್ ಕೋಟ್ಯಾನ್ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಈ ಯೋಜನೆ ಜಾರಿಗೆ ತರಲಾಗಿದೆ. ಈ ವಿಮಾ ಯೋಜನೆ ಅತ್ಯಂತ ವಿಶೇಷವಾಗಿದ್ದು, ಸದ್ಯಕ್ಕೆ ದೇಶದ ಯಾವುದೇ ಬ್ಯಾಂಕಿನಲ್ಲಿ ಲಭ್ಯವಿಲ್ಲ. ಇದನ್ನು ಅತ್ಯಂತ ಸರಳೀಕರಿಸಲಾಗಿದ್ದು, 10,000 ರೂ. ಹಣವನ್ನು ಕ್ಲೇಮು ಮಾಡಲು ಅಧಿಕೃತ ವೈದ್ಯಾಧಿಕಾರಿಯಿಂದ ರೋಗದಿಂದ ಬಳಲುತ್ತಿರುವ ಬಗ್ಗೆ ಪ್ರಮಾಣ ಪತ್ರ, ಲ್ಯಾಬ್ ರಿಪೋರ್ಟ್ ಸಾಕು. ಇದಲ್ಲದೇ ಆಸ್ಪತ್ರೆ ದಾಖಲಾತಿ ಅವಶ್ಯವಿಲ್ಲ. ಅಪಘಾತ ವಿಮೆಗೆ ಸಂಬಂಧಿಸಿ 20,000 ಕ್ಲೇಮು ಮಾಡುವ ವಿಧಾನ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗೆ ಸರಿಸಮಾನವಾಗಿದೆ ಎಂದರು.
ಬ್ಯಾಂಕ್‌ನ ಮಹಾಪ್ರಬಂಧಕ ಬಿ.ಸಿ.ರವಿಚಂದ್ರ, ಮುಖ್ಯ ವ್ಯವಸ್ಥಾಪಕಿ ಎಸ್.ಎಸ್.ಮಣೂರ, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ, ಲಿಬರ್ಟಿ ಇನ್ಶೂರೆನ್ಸ್ ನ ಉಪಾಧ್ಯಕ್ಷ ಪ್ರವೀಣ ಟಿ.ಎಸ್, ಅಸೋಸಿಯೇಟ್ ಉಪಾಧ್ಯಕ್ಷ ಕಲ್ಯಾಣ ರೇವಣೂರ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.