ಅಂಗವಿಕಲರಿಗೆ ಮಾಸಾಶನ ಕೊಡದ ಅಧಿಕಾರಿ ತರಾಟೆಗೆ
Team Udayavani, Jul 29, 2018, 5:19 PM IST
ಬೆಳಗಾವಿ: ಸಾಂಬ್ರಾ ಜನತಾ ದರ್ಶನದಲ್ಲಿ ಅನೇಕ ಅಂಗವಿಕಲರು ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಲು ಬಂದಿರುವುದನ್ನು ಕಂಡು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಸಾಂಬ್ರಾ ಗ್ರಾಮದ ದುರ್ಗಾಮಾತಾ ದೇವಸ್ಥಾನದಲ್ಲಿ ಶನಿವಾರ ನಡೆದ ಜನತಾ ದರ್ಶನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಅರ್ಜಿ ಸ್ವೀಕರಿಸಿ, ಸಾರ್ವಜನಿಕರ ಅಹವಾಲು ಕೇಳಿದರು. ಅಂಗವಿಕಲರಿಗೆ ವೇತನ ಕೊಡದಿದ್ದರೆ ಮತ್ತೆ ಇನ್ನು ಯಾರಿಗೆ ಪಿಂಚಣಿ ಕೊಡುತ್ತೀರಾ. ಮೊದಲೇ ಇವರು ವಿಕಲಾಂಗರು. ವೇತನಕ್ಕಾಗಿ ಇವರು ನಿಮ್ಮ ಕಚೇರಿಗೆ ಸುತ್ತಾಡಬೇಕಾ. ಮಾನವೀಯತೆ ಎನ್ನುವುದು ನಿಮಗೆ ಇಲ್ಲವೇ ಎಂದು ಲಕ್ಷ್ಮೀ ಹೆಬ್ಟಾಳಕರ ಅವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಕೆಲ ಫಲಾನುಭವಿಗಳಿಗೆ ಮಾಸಾಶನದ ಆದೇಶದ ಪತ್ರ ನೀಡಿದ ಶಾಸಕಿ ಹೆಬ್ಟಾಳಕರ, ಕ್ಷೇತ್ರದ ಎಲ್ಲ ಹಳ್ಳಿಗಳ ಮನೆ-ಮನೆಗೂ ಹೋಗಲು ನಾನು ಸಿದ್ಧ. ಹಗಲು ರಾತ್ರಿ ಜನರ ಕಷ್ಟ, ಸುಖಗಳನ್ನು ಕೇಳಲು ತಯಾರಿದ್ದೇನೆ. ಅಧಿಕಾರಿಗಳು ನನ್ನ ವೇಗಕ್ಕೆ ತಕ್ಕಂತೆ ಜನರ ಸೇವೆ ಮಾಡಬೇಕು. ಈ ವಿಷಯದಲ್ಲಿ ವಿಳಂಬ ಮಾಡಿದರೆ ಕ್ಷಮಿಸುವುದಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಂದೋಲನದ ರೂಪದಲ್ಲಿ ಅಭಿಯಾನ ನಡೆಸಿ ಕ್ಷೇತ್ರದ ಜನರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸಬೇಕು ಎಂದು ತಾಕೀತು ಮಾಡಿದರು.
ಜನತಾ ದರ್ಶನದಲ್ಲಿ ಸಲ್ಲಿಸುತ್ತಿರುವ ಅರ್ಜಿಗಳ ಜೊತೆಗೆ ಅರ್ಜಿ ಸಲ್ಲಿಸುವವರ ದೂರವಾಣಿ ಸಂಖ್ಯೆ ಪಡೆಯುತ್ತಿದ್ದೇನೆ. ಅವರು ಯಾವ ಸವಲತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಅದು ಎಲ್ಲಿಗೆ ಬಂತು ಎನ್ನುವುದನ್ನು ಫಾಲೋಅಪ್ ಮಾಡಲು ನನ್ನ ಸ್ವಂತ ಕಚೇರಿಯಲ್ಲಿ ಕಾಲ್ ಸೆಂಟರ್ ಆರಂಭಿಸುತ್ತೇನೆ. ನನ್ನ ಕ್ಷೇತ್ರದ ಜನರಿಗೆ ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ ಎಂದು ಹೇಳಿದರು.
ಅಂಗವಿಕಲರಿಗೆ ವೇತನ ಕೊಡದಿದ್ದರೆ ಮತ್ತೆ ಇನ್ನು ಯಾರಿಗೆ ಪಿಂಚಣಿ ಕೊಡುತ್ತೀರಾ. ಮೊದಲೇ ಇವರು ವಿಕಲಾಂಗರು. ವೇತನಕ್ಕಾಗಿ ಇವರು ನಿಮ್ಮ ಕಚೇರಿಗೆ ಸುತ್ತಾಡಬೇಕಾ. ಮಾನವೀಯತೆ ಎನ್ನುವುದು ನಿಮಗೆ ಇಲ್ಲವೇ ?
ಲಕ್ಷ್ಮೀ ಹೆಬ್ಟಾಳಕರ, ಶಾಸಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi-Dharwad ಪ್ರತ್ಯೇಕ ಮಹಾನಗರ ಪಾಲಿಕೆ: ಸರ್ಕಾರದಿಂದ ಮಧ್ಯಂತರ ರಾಜ್ಯಪತ್ರ
ಸದ್ಯಕ್ಕೆ ಸಿಎಂ ಚರ್ಚೆ ಗೊಡವೆಯೇ ನನಗೆ ಬೇಡ: ಡಿ.ಕೆ.ಶಿವಕುಮಾರ್
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ