ಅನಧಿಕೃತ ಜಾಹೀರಾತು ಫಲಕಗಳವಿರುದ್ಧ ಕ್ರಮ ಜಾರಿಯಾದೀತೆ..?
Team Udayavani, Mar 4, 2017, 2:57 PM IST
ಹುಬ್ಬಳ್ಳಿ: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ವಿರುದ್ಧ ಕಠಿಣ ಕ್ರಮದ ಹೇಳಿಕೆ ನಂತರದಲ್ಲಿ ಪಾಲಿಕೆ ಕ್ರಮಕ್ಕೇನೋ ಮುಂದಾಗಿದೆ. ಆದರೆ, ಈ ಹಿಂದೆ ಇಂತಹದ್ದೇ ಅಬ್ಬರದ ಹೇಳಿಕೆಗಳನ್ನು ಕೇಳಿರುವ, ಅನಂತರದಲ್ಲಿ ಮತ್ತದೇ ಅನಧಿಕೃತ ಜಾಹೀರಾತು ಫಲಗಳ ಹಾವಳಿಯನ್ನು ಅನುಭವಿಸಿರುವ ಮಹಾನಗರದ ನಾಗರಿಕರು, ಇದು ಕೂಡ ಈ ಹಿಂದಿನಂತೆ ಅಬ್ಬರದ ಹೇಳಿಕೆ ಹಾಗೂ ತೋರಿಕೆ ಕ್ರಮ ಆಗದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆ ಹಾಗೂ ಮಹಾನಗರ ಪೊಲೀಸ್ ಆಯುಕ್ತರುಗಳು ಹೇಳಿಕೆ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದ್ದರೂ, ಇದು ಕೂಡ ಠುಸ್ ಪಟಾಕಿ ಆದೀತೆ ಎಂಬ ಶಂಕೆ ವ್ಯಕ್ತವಾಗಿದೆ.
ಮಹಾನಗರದ ಯಾವುದೇ ಪ್ರಮುಖ ವೃತ್ತ, ರಸ್ತೆ ಅಷ್ಟೇ ಅಲ್ಲ ಒಳಭಾಗದ ಹಲವು ರಸ್ತೆ, ವೃತ್ತಗಳಲ್ಲೂ ಹತ್ತಾರು ಫ್ಲೆಕ್ಸ್, ಬ್ಯಾನರ್, ಬಂಟಿಂಗ್‌ಗಳು ರಾರಾಜಿಸುತ್ತವೆ. ಪಾಲಿಕೆಯಲ್ಲಿನ ಜಾಹೀರಾತು ಆದಾಯ ನೋಡಿದರೆ ಪ್ರದರ್ಶನಕ್ಕೂ, ಆದಾಯಕ್ಕೂ ತಾಳ-ಮೇಳವೇ ಇಲ್ಲವಾಗಿದೆ. ಇಷ್ಟಿದ್ದರೂ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಆಗೊಮ್ಮೆ ಈಗೊಮ್ಮೆ ಸಣ್ಣಪುಟ್ಟ ಕ್ರಮಗಳು ಜರುಗಿದ್ದು ಬಿಟ್ಟರೆ ಸಮರ್ಪಕ ಕ್ರಮ ಇಲ್ಲವಾಗಿದೆ.
ಹೇಳಿಕೆಯಾಗೇ ಉಳಿದಿತ್ತು ಸಚಿವರ ಸೂಚನೆ: ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ ಅಧಿಕವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ದಿನೇಶ ಗುಂಡೂರಾವ್ ಹೇಳಿದ್ದರು. ಎಲ್ಲ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ಸಮೀಕ್ಷೆ ನಡೆಸಿ ಅಧಿಕೃತ ಜಾಹೀರಾತು ಫಲಕಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ಅನಧಿಕೃತ ಜಾಹೀರಾತು ಫಲಕಗಳನ್ನು ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಸಚಿವರು ತಾಕೀತು ಮಾಡಿದ ಒಂದೇ ವಾರದಲ್ಲಿ ಅದೇ ಸಚಿವರು, ಆಡಳಿತ ಪಕ್ಷದ ಶಾಸಕರು, ನಾಯಕರ ಭಾವಚಿತ್ರ ಇರುವ ಆಳೆತ್ತರದ ನೂರಾರು ಫ್ಲೆಕ್ಸ್, ಬಂಟಿಂಗ್ ಗಳು ರಾರಾಜಿಸತೊಡಗಿ ಅಧಿಕಾರಿಗಳನ್ನೇ ಅಣುಕಿಸತೊಡಗಿದ್ದವು. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾದ ವಿಷಯವಲ್ಲ.
ಎಲ್ಲ ಪ್ರಮುಖ ಪಕ್ಷಗಳು ಇದೇ ಕಾರ್ಯ ಮಾಡುತ್ತಿವೆ. ಆಯಾ ಪಕ್ಷಗಳ ನಾಯಕರ ಆಗಮನ, ಜನ್ಮದಿನ, ಸರಕಾರಗಳಿಂದ ಯೋಜನೆಗಳ ಘೋಷಣೆ, ಹಬ್ಬಗಳ ಶುಭಾಶಯ ಹೀಗೆವಿವಿಧ ಕಾರಣಗಳನ್ನು ತೋರಿ ಜಾಹೀರಾತು ಫಲಕಗಳು ಪೈಪೋಟಿಗೆ ಬಿದ್ದಂತೆ ನೇತಾಡುತ್ತವೆ. ಜನಪ್ರತಿನಿಧಿಗಳ ಭಾವಚಿತ್ರಇದ್ದ ಮೇಲೆ ಅವು ಅನಧಿಕೃತವೆಂದು ತಿಳಿದರೂ ಅವುಗಳನ್ನು ಮುಟ್ಟುವ ಧೈರ್ಯವಾದರೂ ಅಧಿಕಾರಿಗಳಿಗೆಲ್ಲಿಂದ ಬರಬೇಕು.
ಪತ್ರದವರೆಗೂ ಕಾಯಬೇಕಿತ್ತೆ?: ಪಾಲಿಕೆ ಆಯುಕ್ತರು, ಮಹಾನಗರ ಪೊಲೀಸ್ ಆಯುಕ್ತರು ಇದೀಗ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಮಿತಿ ಮೀರಿದ ಫ್ಲೆಕ್ಸ್, ಬಂಟಿಂಗ್, ಬ್ಯಾನರ್ ಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಸವರಾಜಹೊರಟ್ಟಿ ಅವರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದು, ಮಹಾಪೌರರ ಸಮ್ಮುಖದಲ್ಲಿ ಸಭೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಎಚ್ಚರಿಕೆ ನೀಡಿದ ಅನಂತರತಡಬಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ವಿಚಾರಕ್ಕೆ ಬಂದಾಗ ಅಧಿಕಾರಿಗಳಿಗೆ ಪ್ರಮುಖ ಸಮಸ್ಯೆ ಹಾಗೂ ಸವಾಲು ಎಂದರೆ ರಾಜಕೀಯ ಹಾಗೂ ಧಾರ್ಮಿಕ ಆಧಾರಿತ ಜಾಹೀರಾತುಗಳು. ಬೇರೆಯವುಗಳನ್ನು ತೆರವುಗೊಳಿಸಲು ಮುಂದಾಗುವ ಅಧಿಕಾರಿಗಳು ಇವೆರಡು ಬಂದ ಕೂಡಲೇ ಮೌನಕ್ಕೆ ಜಾರಿ ಬಿಡುತ್ತಾರೆ.
ಇತ್ತೀಚೆಗಂತೂ ಫ್ಲೆಕ್ಸ್‌ಗಳ ಅಬ್ಬರ ಎಷ್ಟರ ಮಟ್ಟಿಗೆಂದರೆ ಬಾಡಿಗೆ-ತೆರಿಗೆ ಕಟ್ಟುವ ವ್ಯಾಪಾರ ಮಳಿಗೆಗಳು ಕಾಣದಂತೆ ಮುಚ್ಚುವ ರೀತಿಯಲ್ಲಿ ರಸ್ತೆಗೆ ಹೊಂದಿಕೊಂಡು ಹಾಕಿದರೂ, ವ್ಯಾಪಾರಿಗಳು ಏನೊಂದು ಹೇಳದ ಸ್ಥಿತಿ ಇದೆ. ಇವೆಲ್ಲವುದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ. ಯಾರದ್ದೇ ಒತ್ತಡ ಬಂದರೂ ಮಣಿದೆ ಕಟ್ಟುನಿಟ್ಟಿನ ಕ್ರಮವನ್ನು ಮುಂದುವರಿಸುವ ಹಾಗೂ ಅನಧಿಕೃತ ಜಾಹೀರಾತು ಫಲಕ ಮುಕ್ತ ನಗರ ಮಾಡುವ ಪಣ ತೊಡಬೇಕಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.