6ರಿಂದ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ
Team Udayavani, Jan 4, 2017, 12:50 PM IST
ಹುಬ್ಬಳ್ಳಿ: ಕಲಾ ಧರೋಹರದ ವತಿಯಿಂದ 9ನೇ ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ ಜ.6ರಿಂದ 8ರವರೆಗೆ ನ್ಯೂ ಕಾಟನ್ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಕಲಾ ಧರೋಹರದ ಸಹ ಉಪಾಧ್ಯಕ್ಷ ವಿವೇಕ ಪವಾರ ಮಾತನಾಡಿ, ಜ.6ರಂದು ಸಂಜೆ 5:15ಕ್ಕೆ ಅಂತಾರಾಷ್ಟ್ರೀಯ ಕೊಳಲು ಕಲಾವಿದ ಪಂ| ರಾಕೇಶ ಚೌರಾಸಿಯಾ ಅವರಿಂದ ಕೊಳಲು ವಾದನವಿದೆ.
ನಂತರ ಮುಂಬೈನ ಗಾಯಕಿ ವಿದುಷಿ ದೇವಕಿ ಪಂಡಿತ ಅವರಿಂದ ಶಾಸ್ತ್ರೀಯ ಗಾಯನ ನಡೆಯುವುದು ಎಂದರು. ಜ.7ರಂದು ಸಂಜೆ 5:15ಕ್ಕೆ ಖ್ಯಾತ ತಬಲಾ ವಾದಕ ಪುಣೆಯ ಪಂ| ರಾಮದಾಸ ಪಸಪುಳೆ ಅವರಿಂದ ತಬಲಾ ಸೋಲೊ ನಡೆಯಲಿದ್ದು, ನಂತರ ಕೋಲ್ಕತ್ತದ ಅಭಿಸೇಕ್ ಲಹರಿ ಅವರಿಂದ ಸರೋದ ವಾದನ ನಡೆಯುವುದು.
ಜ.8ರಂದು ಬೆಳಗ್ಗೆ 9ಕ್ಕೆ ಪ್ರಸಿದ್ಧ ಗಾಯಕ, ಭೀಮಸೇನ ಜೋಶಿ ಅವರ ಶಿಷ್ಯ ಪುಣೆಯ ಪಂ| ಆನಂದ ಭಾಟೆ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದೆ. ಸಂಜೆ 5:15ಕ್ಕೆ ಕೀ ಬೋರ್ಡ್ ಮಾತ್ರಿಕ ಎಂದೇ ಖ್ಯಾತಿ ಪಡೆದಿರುವ ಮುಂಬೈನ ಅಭಿಜೀತ್ ಪೋಹಣಕ ಕೀಬೋರ್ಡ್ ಮೇಲೆ ಶಾಸ್ತ್ರೀಯ ಸಂಗೀತ ನುಡಿಸುವರು.
ಇದೇ ಸಂದರ್ಭದಲ್ಲಿ ಅವರಿಗೆ ಪ್ರಸಕ್ತ ಗಂಗೂಬಾಯಿ ಹಾನಗಲ್ಲ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರ 1 ಲಕ್ಷ ರೂ. ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ನಂತರ ಪುರಸ್ಕೃತ ಪಂಡಿತ ಅಜಯ ಪೋಹಣಕರ ಅವರಿಂದ ಶಾಸ್ತ್ರೀಯ ಗಾಯನ ಜರುಗಲಿದೆ ಎಂದರು.
ಸಂಗೀತ ಮಹೋತ್ಸವಕ್ಕೆ ಸಹ ಕಲಾವಿದರಾಗಿ ಪಂ| ರಾಮದಾಸ ಪಸಪುಳೆ, ಪಂ| ರವೀಂದ್ರ ಯಾವಗಲ್, ಪಂ| ವಿಶ್ವನಾಥ ನಾಕೋಡ, ಶ್ರೀಧರ ಮಾಂಡ್ರೆ (ತಬಲಾ), ಪಂ| ವ್ಯಾಸಮೂರ್ತಿ ಕಟ್ಟಿ, ಅಭಿಷೇಕ ಶಿಂಕರ, ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ) ಸಾಥ್ ನೀಡುವರು.
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಂಗೀತ ಮಹೋತ್ಸವದ ಪ್ರಾಯೋಜಕತ್ವ ವಹಿಸಲಿದೆ ಎಂದು ತಿಳಿಸಿದರು. ಸಂಗೀತ ಮಹೋತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ದೇಶಪಾಂಡೆ ನಗರದ ಡಾ| ಗಂಗೂಬಾಯಿ ಹಾನಗಲ್ಲ ಅವರ ನಿವಾಸದಲ್ಲಿ ಪ್ರವೇಶ ಪಾಸ್‌ಗಳನ್ನು ನೀಡಲಾಗುತ್ತಿದೆ ಎಂದರು.
ಕಲಾ ಧರೋಹರ ಕಳೆದ 9 ವರ್ಷಗಳಿಂದ ಸಂಗೀತ ಮಹೋತ್ಸವ ಆಯೋಜಿಸುತ್ತಿದೆ. ಮನೆ-ಮನೆಗಳಲ್ಲಿ ಶಾಸ್ತ್ರೀಯ ಸಂಗೀತದ ಬೈಠಕ್‌ಗಳನ್ನು ಆಯೋಜಿಸುವ ಮೂಲಕ ಸಂಪ್ರದಾಯಕ್ಕೆ ಮರುಜೀವ ತುಂಬಲಾಗುತ್ತಿದೆ.
ಶಾಲಾ-ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದಲ್ಲದೇ ಶಾಸ್ತ್ರೀಯ ಸಂಗೀತ ತರಬೇತಿ ನೀಡಲಾಗುತ್ತಿದೆ. ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ವಿವರಿಸಿದರು. ದಿನೇಶ ಹಾನಗಲ್ಲ, ಸುಪ್ರಿಯಾ ಆಚಾರ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.