ಹಳ್ಳಿ ಹಳ್ಳಿಗಳಲ್ಲೀಗ ಬೆಟ್ಟಿಂಗ್‌ ದೆವ್ವದ ಕುಣಿತ!


Team Udayavani, Apr 18, 2017, 1:08 PM IST

hub2.jpg

ಹುಬ್ಬಳ್ಳಿ: ಕ್ರಿಕೆಟ್‌ ಬೆಟ್ಟಿಂಗ್‌ ಈ ಹಿಂದೆ ಮಹಾನಗರ, ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಐಪಿಎಲ್‌ ಕ್ರಿಕೆಟ್‌ ಪರಿಣಾಮ ಇದೀಗ ಹಳ್ಳಿ ಹಳ್ಳಿಗಳಿಗೂ ಬೆಟ್ಟಿಂಗ್‌ ಭೂತ ಕಾಲಿಟ್ಟಿದೆ. ಐಪಿಎಲ್‌ ಕ್ರಿಕೆಟ್‌ ಹೈಟೆಕ್‌ ಜೂಜಾಟವಾಗಿ ಪರಿವರ್ತನೆಗೊಂಡಿದೆ. ಕೆಲ ಹಳ್ಳಿಗಳಲ್ಲಿ ನಿತ್ಯ 50ಸಾವಿರ ರೂ.ಮೇಲ್ಪಟ್ಟು ಹಣ ಪಣಕ್ಕಿಡುವಷ್ಟರ ಮಟ್ಟಿಗೆ ಇದು ಬೆಳೆದು ನಿಂತಿದೆ. 

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಹಳ್ಳಿ-ಹಳ್ಳಿಗಲ್ಲೂ ಐಪಿಎಲ್‌ ಬೆಟ್ಟಿಂಗ್‌ ಭೂತ ಕುಣಿದಾಡುತ್ತಿದೆ. ಐಪಿಎಲ್‌ ಬೆಟ್ಟಿಂಗ್‌ ಕಾರಣದಿಂದಲೇ ಒಂದೆರಡು ವರ್ಷಗಳ ಹಿಂದೆ ಕೆಲ ಅನಾಹುತಗಳು ನಡೆದಿವೆ. ಬೆಟ್ಟಿಂಗ್‌ಗಾಗಿ ಮಾಡಿದ ಸಾಲ ಕಟ್ಟಲಾಗದೆ ಕೆಲ ಯುವಕರು ಊರು ತೊರೆದ ಘಟನೆಗಳು ನಡೆದಿದ್ದರೂ, ಈ ಬಾರಿಯ ಐಪಿಎಲ್‌ ಬೆಟ್ಟಿಂಗ್‌ ಕ್ರೇಜಿಗೆ ಯಾವುದೇ ಭಂಗ ಬಂದಂತೆ ಕಾಣುತ್ತಿಲ್ಲ. 

ಐಪಿಎಲ್‌ ಬೆಟ್ಟಿಂಗ್‌ ಲಂಚ ಹಣದ ಕುರಿತಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಡಿಸಿಪಿ, ಕೆಲ ಪೊಲೀಸ್‌ ಸಿಬ್ಬಂದಿ ಅಮಾನತುಗೊಂಡಿದ್ದರು. ಬೆಟ್ಟಿಂಗ್‌ ದಂಧೆಯ ಪ್ರಮುಖರು ಬಂಧನವಾಗಿದ್ದರೂ ಬೆಟ್ಟಿಂಗ್‌ ದಂಧೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಅವಳಿನಗರದಲ್ಲಿ ಹಲವರ ಬಂಧನ ಸಾಕ್ಷಿ ಹೇಳುವಂತಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದವರ ಕೆಲವರಬಂಧನವಾಗಿದೆ. ಆದರೆ, ಒಟ್ಟಾರೆ ಬೆಟ್ಟಿಂಗ್‌ ದಂಧೆಗೆ ಹೋಲಿಸಿದರೆ ಇದು ನಗಣ್ಯ ರೀತಿಯಲ್ಲಿದೆ. 

ಬೆಟ್ಟಿಂಗ್‌ ದೆವ್ವ: ಕಳೆದೆರಡು ವರ್ಷಗಳಿಂದ ಬರ ಕಟ್ಟಿ ಕಾಡುತ್ತಿದೆ. ರಾಜ್ಯ ಬಹುತೇಕ ಜಲಾಶಯಗಳು ಖಾಲಿಯಾಗಿವೆ. ಕುಡಿಯುವ ನೀರು, ಮೇವಿನ ಸಮಸ್ಯೆ ಮುಗಿಲು ಮುಟ್ಟಿದ  ಸ್ಥಿತಿಯಲ್ಲಿದೆ. ಆದರೆ, ಹಳ್ಳಿ ಹಳ್ಳಿಗಳಲ್ಲಿ ಮಾತ್ರ ಐಪಿಎಲ್‌ ಬೆಟ್ಟಿಂಗ್‌ ತಾಂಡವವಾಡುತ್ತಿದೆ. 

ಐಪಿಎಲ್‌ ಕ್ರಿಕೆಟ್‌ ತಂಡಗಳ ಆಟಗಾರರು ಅಷ್ಟೊಂದು ತದೇಕ ಚಿತ್ತದಿಂದ ಪಂದ್ಯ  ವೀಕ್ಷಿಸುತ್ತಾರೋ ಇಲ್ಲವೋ ಆದರೆ, ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಪಂದ್ಯ ಮುಗಿಯುವವರೆಗೂ ಕ್ಷಣವೂ ಕಣ್ಣು ಮಿಟುಕಿಸದಂತೆ ನೋಡುತ್ತಾರೆ. ಪ್ರತಿ ಬಾಲ್‌, ರನ್‌,  ವಿಕೆಟ್‌, ಕ್ಯಾಚ್‌ ಹೀಗೆ ಪ್ರತಿ ಕ್ಷಣ ಕ್ಷಣದ ವಿದ್ಯಮಾನಕ್ಕೂ ಬೆಟ್ಟಿಂಗ್‌ ನಡೆಯುತ್ತಿದೆ.

ನೋವಿನ ಸಂಗತಿ ಎಂದರೆ 8-10ನೇ ತರಗತಿ ವಿದ್ಯಾರ್ಥಿಗಳು ಸಹ ತಮ್ಮ ಶಕ್ಯಾನುಸಾರ  ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗ್ರಾಮವೊಂದರಲ್ಲಿ ನಿತ್ಯ ಸುಮಾರು 50 ಸಾವಿರ ರೂ. ಗೂ ಅಧಿಕ ಮೊತ್ತದ ಹಣ ಬೆಟ್ಟಿಂಗ್‌ನಲ್ಲಿ  ಚಲಾವಣೆ ಆಗುತ್ತಿದೆ.

ಇದು ಕೇವಲ ಒಂದು ಗ್ರಾಮದ ಕಥೆಯಲ್ಲ ರಾಯಚೂರು, ಬೀದರ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ,  ಧಾರವಾಡ ಇನ್ನಿತರ ಜಿಲ್ಲೆಗಳ ಹಳ್ಳಿ, ಹಳ್ಳಿಗಳಲ್ಲಿ ಐಪಿಎಲ್‌ ಬೆಟ್ಟಿಂಗ್‌ ದಂಧೆ ವ್ಯಾಪಕವಾಗಿದ್ದು, ಲಕ್ಷಾಂತರ ರೂ. ಬೆಟ್ಟಿಂಗ್‌ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಇದರ ಪ್ರಮಾಣ  ಇನ್ನೂ ಹೆಚ್ಚಿನದಾಗಿದೆ. 

ಬೀದರ ಜಿಲ್ಲೆಯಲ್ಲಿ ಈ ಬಾರಿಯ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ ಇಬ್ಬರನ್ನು ಬಂಧಿಸಿ ಸುಮಾರು 18 ಸಾವಿರ ರೂ.ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಗದಗ ಜಿಲ್ಲೆ ಗಜೇಂದ್ರಗಡ, ಶಿರಹಟ್ಟಿ  ಸೇರಿ ಒಟ್ಟು ಒಂಬತ್ತು ಜನರ ಬಂಧನವಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಐದು ಜನರ ಬಂಧನ, 23 ಮೊಬೈಲ್‌, 33 ಸಾವಿರ ರೂ. ಹಾಗೂ ಕನೆಕ್ಟರ್‌ ಇನ್ನಿತರ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮೂವರನ್ನು ಬಂಧಿಸಲಾಗಿದ್ದರೆ, ಗಂಗಾವತಿ ತಾಲೂಕಿನಲ್ಲಿ ಕೆಲವರ ಬಂಧನವಾಗಿದೆ. 

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು

Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು

MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್

MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್

police

Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.