ಗ್ರಾಮೀಣ ಭಾಗದಲ್ಲಿ ಜ್ಯೋತಿ ಸಂಚಾರ
Team Udayavani, Apr 15, 2018, 4:52 PM IST
ಹೊಳೆಆಲೂರ: ಜಿಪಂ, ತಾಪಂ ರೋಣ ಹಾಗೂ ಸ್ಥಳೀಯ ಗ್ರಾಪಂಗಳ ಸಹಯೋಗದಲ್ಲಿ ಶನಿವಾರ ಹೊಳೆಆಲೂರ ಹೋಬಳಿಯ ಬೆಳವಣಕಿ, ಯಾವಗಲ್ಲ, ಕೌಜಗೇರಿ, ಅಸೂಟಿ, ಮೆಣಸಗಿ ಹಾಗೂ ಹೊಳೆಆಲೂರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತದಾನ ಜಾಗೃತಿ ಅಂಗವಾಗಿ ಬೈಕ್ ರ್ಯಾಲಿಯೊಂದಿಗೆ ಜ್ಯೋತಿ ಸಂಚರಿಸಿತು.
ತಾಲೂಕು ಯುವಜನ ಸೇವಾ ಇಲಾಖೆ ಸಹಾಯಕ ಅಧಿಕಾರಿ ಜಗದೀಶ ಎಂ. ಬೂದಿಹಾಳ ಹಾಗೂ ಮಂಜುನಾಥ ಗಣಿ ನೇತೃತ್ವ ವಹಿಸಿದ್ದರು. ಹೊಳೆಆಲೂರಿನ ಗ್ರಾಪಂನಿಂದ ಅರಂಭವಾದ ಜ್ಯೋತಿ ಆಲೂರ ವೆಂಕಟರಾವ್ ವೃತ್ತ, ಮುಖ್ಯ ಬಜಾರ್, ದುರ್ಗದ ಬಯಲು, ಯಚ್ಚರೇಶ್ವರ ಮಠ, ಗಾಂಧಿ ನಗರ, ಬಸವ ನಗರ, ಸೇವಾಲಾಲ್ ನಗರ, ಬಾಲಾಜಿ ನಗರ, ಸ್ಟೇಷನ್ ರಸ್ತೆ, ಮೇಘರಾಜ ನಗರದಲ್ಲಿ ಸಂಚರಿಸಿ ಚನ್ನಮ್ಮಾ ವೃತ್ತದಲ್ಲಿ ಸಮಾರೋಪಗೊಂಡಿತು.
ರ್ಯಾಲಿಯಲ್ಲಿ ಬಸವರಾಜ ಶೃಂಗೇರಿ, ಈರಣ್ಣ ಪತ್ತಾರ, ಬಸವರಾಜ ತಳವಾರ, ಯಚ್ಚರಪ್ಪ ಚಲವಾದಿ, ಬಸವರಾಜ ಮೇಟಿ, ಈರಣ್ಣ ಹರ್ತಿ, ಬಸವರಾಜ ಕಲ್ಲಮ್ಮನ್ನವರ, ಮೈಲಾರಿ ಚಲವಾದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.