ಕಾನು ತೋಟ ಬೆಳೆಸಲು ಯೋಜನೆ
| ಪಶು-ಪಕ್ಷಿಗಳಿಗೆ ಆಹಾರ ಲಭ್ಯತೆಗಾಗಿ ಹಣ್ಣಿನ ಗಿಡಗಳ ನಾಟಿ
Team Udayavani, Jun 3, 2019, 10:47 AM IST
ಧಾರವಾಡ: ಬಣದೂರ ನಾಕಾ ಕೆರೆ
ಧಾರವಾಡ: ಜೂ. 5ರಂದು ವಿಶ್ವ ಪರಿಸರ ದಿನದ ಪ್ರಯುಕ್ತ ‘ಚಿನ್ನದ ಬೆಳೆಸು’ ತೋಟದ ಮಾದರಿಯಲ್ಲಿ ಕಾನನದ ಪಕ್ಷಿ-ಪಶುಗಳಿಗಾಗಿ ಮೀಸಲಿಟ್ಟ ಹಣ್ಣಿನ ಮರಗಳ ‘ಕಾನು ತೋಟ’ ಬೆಳೆಸಲು ನೇಚರ್ ರಿಸರ್ಚ್ ಸೆಂಟರ್ ಹಾಗೂ ನೇಚರ್ ಫಸ್ಟ್ ಇಕೋ ವಿಲೇಜ್, ಅರಣ್ಯ ಇಲಾಖೆ ಸಹಯೋಗದಲ್ಲಿ ಯೋಜನೆ ರೂಪಿಸಿವೆ.
ಧಾರವಾಡದಿಂದ ಹಳಿಯಾಳ ರಸ್ತೆಯಲ್ಲಿ 14 ಕಿಮೀ ದೂರದಲ್ಲಿದೆ ಹಳ್ಳಿಗೇರಿ. ಅಲ್ಲಿಂದ ಅಂದಾಜು ಕೇವಲ 1 ಕಿಮೀ ದೂರದಲ್ಲಿ ಬಣದೂರ ನಾಕಾ ಕೆರೆ. ಆಹಾರ-ನೀರನ್ನರಿಸಿ ಕಾಡಂಚಿಗೆ, ರಸ್ತೆಗೆ, ತೋಟಗಳಿಗೆ ನುಗ್ಗಿ ಬಂದು ಮಾನವ-ವನ್ಯ ಜೀವಿ ಸಂಘರ್ಷ ಹುಟ್ಟದಂತೆ ತಡೆಯಲೂ ಕೂಡ ಈ ‘ಚಿನ್ನದ ಬೆಳೆಸು’ ಹಣ್ಣಿನ ತೋಟ ಒಂದು ಮಾದರಿ ಪ್ರಯೋಗ ಆಗಿದೆ.
ಜೂ. 5ರಂದು ಬೆಳಗ್ಗೆ 10:30 ಗಂಟೆಗೆ ಡಿಸಿ ದೀಪಾ ರಾಜೇಂದ್ರ ಚೋಳನ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ನೇಚರ್ ಫಸ್ಟ್ ಇಕೋ ವಿಲೇಜ್ ಸಿಇಒ ಪಂಚಾಕ್ಷರಿ ಹಿರೇಮಠ ಹಾಗೂ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್ ಮೊದಲಾದವರು ಪಾಲ್ಗೊಂಡು, 250ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲಿದ್ದಾರೆ. ಜೊತೆಗೆ, ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ ಎಂಬ ಸೂಚನಾ ಫಲಕ ಅನಾವರಣಗೊಳಿಸಲಿದ್ದಾರೆ.
ನೇಚರ್ ರಿಸರ್ಚ್ ಸೆಂಟರ್‌ನ ಉಪಾಧ್ಯಕ್ಷ ಚಂದ್ರಶೇಖರ ಬೈರಪ್ಪನವರ, ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ, ಖಜಾಂಚಿ ಡಾ|ಧೀರಜ್ ವೀರನಗೌಡರ, ಕಲಾವಿದ ಮಂಜುನಾಥ ಹಿರೇಮಠ, ಪರಿಸರವಾದಿ ಅಸ್ಲಂ ಜಹಾನ್ ಅಬ್ಬೀಹಾಳ, ಸಾವಯವ ಕೃಷಿಕ ಕೃಷ್ಣಕುಮಾರ ಭಾಗವತ್, ಪಕ್ಷಿ ಪ್ರೇಮಿ ಆರ್. ಜಿ. ತಿಮ್ಮಾಪುರ ಹಾಗೂ ಅನಿಲ ಅಳ್ಳೊಳ್ಳಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.