ಕಳಸಾ-ಬಂಡೂರಿ; ಹೊಸ ವರ್ಷಕ್ಕೆ ಸಿಹಿ; ಜನವರಿಗೆ 1.2 ಟಿಎಂಸಿ ನೀರು ತರಲು ಸಿದ್ಧತೆ
Team Udayavani, Oct 22, 2022, 6:35 AM IST
ಹುಬ್ಬಳ್ಳಿ: ಮಹದಾಯಿ, ಕಳಸಾ- ಬಂಡೂರಿ ನಾಲಾ ಯೋಜ ನೆಯ ಒಂದು ಹಂತದ ಕಾಮಗಾರಿಗೆ ತಾರ್ಕಿಕ ಅಂತ್ಯ ಕಾಣಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನ್ಯಾಯಾಧಿಕರಣದ ತೀರ್ಪಿನನ್ವಯ ಕಳಸಾ ನಾಲಾದಿಂದ ಸುಮಾರು 1.2 ಟಿಎಂಸಿ ಅಡಿ ನೀರು ಪಡೆದುಕೊಳ್ಳುವ ನಿಟ್ಟಿನಲ್ಲಿ ಜನವರಿ ವೇಳೆಗೆ ಕಾಮಗಾರಿ ಕೈಗೊಳ್ಳಲು ಸಜ್ಜಾಗುತ್ತಿದೆ. ಏತ ನೀರಾವರಿ ಯೋಜನೆ ಮೂಲಕ ಅನುಷ್ಠಾನಕ್ಕೆ ಮುಂದಾಗಿದೆ.
ಮಹದಾಯಿಯನ್ನು ಮಲಪ್ರಭಾ ನದಿಗೆ ಜೋಡಿಸಿ ಹು-ಧಾ ಮಹಾನಗರ ಸೇರಿದಂತೆ 4 ಜಿಲ್ಲೆಗಳ 9 ತಾಲೂಕು, 13 ಪಟ್ಟಣಗಳಿಗೆ ಕುಡಿಯುವ ನೀರು, ನೀರಾವರಿ ಸೌಲಭ್ಯಕ್ಕೆ ಚಿಂತನೆ ಇತ್ತು. ಗೋವಾದ ಹಠಮಾರಿತನದಿಂದಾಗಿ ಇಂದಿಗೂ ಹನಿ ನೀರು ಪಡೆಯಲು ಸಾಧ್ಯವಾಗಿಲ್ಲ. ಮಹದಾಯಿ ನ್ಯಾಯಾಧಿ ಕರಣದ ತೀರ್ಪು, ಕೇಂದ್ರ ಸರ್ಕಾರದಿಂದ ಅಧಿಸೂಚನೆ ನಂತರದಲ್ಲೂ ಗೋವಾದ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕಳಸಾ ನಾಲಾದಿಂದ ಕಾಲುವೆ ಮೂಲಕ ನೀರು ಬರುವ ಬದಲು ಏತನೀರಾವರಿ ಮೂಲಕ ತರಲು ಮುಂದಾಗಿದೆ.
ಕಾಮಗಾರಿ ಸದ್ಯಕ್ಕಿಲ್ಲ
ಸದ್ಯಕ್ಕೆ ಕಳಸಾದಿಂದ ಮಾತ್ರ ಏತ ನೀರಾವರಿ ಯೋಜನೆ ಮೂಲಕ ನೀರು ಪಡೆಯುವ ಯೋಜನೆ ಇದೆ. ಬಂಡೂರಿ ನಾಲಾ ಕುರಿತಾಗಿ ಯಾವುದೇ ಕಾಮಗಾರಿ ಕೈಗೊಳ್ಳು ತ್ತಿಲ್ಲ. ಡಿಸೆಂಬರ್ ಇಲ್ಲವೇ ಜನವರಿ ಯಲ್ಲಿ ಇದಕ್ಕೆ ಚಾಲನೆ ದೊರೆಯ ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ನೀರು ಪಡೆಯುವ ದೃಷ್ಟಿಯಿಂದ ದುರ್ಗಮ ಸ್ಥಿತಿಯಲ್ಲಿರುವ ಬಂಡೂರಿ ನಾಲಾ ದಿಂದ ನೀರು ಪಡೆಯುವ ಯೋಜನೆ ಎರಡನೇ ಹಂತದಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ. ಆದರೆ, ಕಳಸಾ ಕ್ಕಿಂತ ಬಂಡೂರಿಯಿಂದಲೇ ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗಲಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.