ವಿಷಮುಕ್ತ ದೀಪಾವಳಿಗೆ ಕನೇರಿಮಠದಿಂದ ನೈಸರ್ಗಿಕ ಉಡುಗೊರೆ ಕಿಟ್
ಗೋಮೂತ್ರಾಧಾರಿತ ಸ್ಯಾನಿಟೈಸರ್ ,ಆಲ್ಕೋಹಾಲ್ ರಹಿತ-ಆರೋಗ್ಯಕ್ಕೂ ಹಿತ,ಗೋವಿನ ಸಗಣಿಯ ಹಣತೆಯೂ ಲಭ್ಯ
Team Udayavani, Nov 7, 2020, 8:36 PM IST
ಹುಬ್ಬಳ್ಳಿ: ಕೆಲವೇ ಕೆಲವರ ಬಳಕೆಗೆ ಸೀಮಿತವಾಗಿದ್ದ ಸ್ಯಾನಿಟೈಸರ್ ಇದೀಗ ಬಹುತೇಕರು ಬಳಸುವಂತಾಗಿದೆ. ಸ್ಯಾನಿಟೈಸರ್ ಬ್ಯಾಕ್ಟೀರಿಯಾ ತಡೆಗೆ ನೆರವಾಗಬಹುದಾದರೂ ಇದರ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ವೈದ್ಯರ ಅನಿಸಿಕೆ. ಆರೋಗ್ಯಕ್ಕೆ ಹಾನಿಕಾರವಾಗದ ಗೋಮೂತ್ರ, ನೈಸರ್ಗಿಕ ತೈಲಆಧಾರಿತ ಸ್ಯಾನಿಟೈಸರ್ ಅನ್ನು ಕೊಲ್ಲಾಪುರದ ಕನೇರಿ ಮಠ ಹೊರತಂದಿದೆ.
ವಿಪತ್ತು ಸಂದರ್ಭದಲ್ಲಿ ನೆರವು, ಸಾಮಾಜಿಕ ಸೇವೆ, ವಿಷಮುಕ್ತ ಆಹಾರ ಪದಾರ್ಥಗಳ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕನೇರಿ ಮಠ, ಇದೀಗ ಕೋವಿಡ್-19 ಸಂದರ್ಭದಲ್ಲಿ ವಿವಿಧ ನೆರವಿನ ಜತೆಗೆ ಸಿದ್ಧಗಿರಿ ನ್ಯಾಚುರಲ್ಸ್ ಹೆಸರಲ್ಲಿ ಅನೇಕ ಉತ್ಪನ್ನಗಳನ್ನು ಸಿದ್ಧಪಡಿಸಿದೆ. ಅದರಲ್ಲಿ ಗೋಮೂತ್ರಾಧಾರಿತ ಸ್ಯಾನಿಟೈಸರ್ ಒಂದಾಗಿದೆ. ಬಹುತೇಕ ಸ್ಯಾನಿಟೈಸರ್ ಆಲ್ಕೋಹಾಲ್ ಅಂಶಹೊಂದಿರುತ್ತದೆ. ಆದರೆ, ಕನೇರಿಯ ಸಿದ್ಧಗಿರಿ ನ್ಯಾಚುರಲ್ಸ್ ಹೊರತಂದಿರುವ ಸ್ಯಾನಿಟೈಸರ್ ಆಲ್ಕೋಹಾಲ್ ರಹಿತವಾಗಿದೆ. ಸ್ಯಾನಿಟೈಸರ್ ಬಳಕೆಯಿಂದ ಕೈ ಚರ್ಮದ ತೊಂದರೆ ಸೇರಿದಂತೆ ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವೈದ್ಯರ ಅನಿಸಿಕೆ. ಆದರೆ, ಗೋಮೂತ್ರಾಧಾರಿತ ಸ್ಯಾನಿಟೈಸರ್ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮೂಲಕ ಕಂಡುಕೊಳ್ಳಲಾಗಿದೆ.
ಸ್ಯಾನಿಟೈಸರ್‌ನಲ್ಲಿ ಏನೇನಿದೆ?: ಸಿದ್ಧಗಿರಿ ನ್ಯಾಚುರಲ್ಸ್ ಹೊರತಂದಿರುವ ಸ್ಯಾನಿಟೈಸರ್‌ನಲ್ಲಿ ಗೋಮೂತ್ರ, ಬೇವಿನ ಎಣ್ಣೆ, ನೀಲಗಿರಿ ಎಣ್ಣೆ, ತುಳಸಿ ಎಣ್ಣೆ ಸೇರಿದಂತೆ ಐದಾರು ತರಹದ ನೈಸರ್ಗಿಕ ತೈಲಗಳನ್ನು ಬಳಸಲಾಗಿದೆ. ಜತೆಗೆ ವಿವಿಧ ಆಯುರ್ವೇದಿಕ ಪದಾರ್ಥಗಳನ್ನು ಸೇರಿಸಲಾಗಿದೆ. ಈ ಸ್ಯಾನಿಟೈಸರ್ ಸುವಾಸನೆ ಹೊಂದಿದ್ದು, ಬ್ಯಾಕ್ಟೀರಿಯಾ ನಾಶ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ. ಇದರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಜತೆಗೆ ಇತರೆ ಸ್ಯಾನಿಟೈಸರ್‌ಗಳನ್ನು ಮೊಬೈಲ್‌ಗೆ ಬಳಕೆ ಮಾಡಿದರೆ ಮೊಬೈಲ್ ಹಾಳಾಗುವ ಸಾಧ್ಯತೆ ಇದ್ದು, ಇದರ ಬಳಕೆಯಿಂದ ಹಾಳಾಗುವುದಿಲ್ಲವಂತೆ. ದೀಪಾವಳಿ ಬುಟ್ಟಿ: ಸಿದ್ಧಗಿರಿ ನ್ಯಾಚುರಲ್ಸ್‌ನಿಂದ ದೀಪಾವಳಿ ಹಬ್ಬದಲ್ಲಿ ಸ್ನೇಹಿತರು, ಸಂಬಂಧಿಕರು, ಸಿಬ್ಬಂದಿಗೆ ಉಡುಗೊರೆ ನೀಡುವ ನಿಟ್ಟಿನಲ್ಲಿ ವಿಷಮುಕ್ತ ಉತ್ಪನ್ನಗಳ ದೀಪಾವಳಿ ಬುಟ್ಟಿ ತಯಾರಿಸಲಾಗಿದೆ. ಬುಟ್ಟಿಯಲ್ಲಿ ದೀಪಾವಳಿಗೆ ಅಭ್ಯಂಗ ಸ್ನಾನಕ್ಕೆ ಬೇಕಾದ ಅಭ್ಯಂಗ ತೈಲ, ಗೋ ಆಧಾರಿತವಾಗಿ ತಯಾರಿಸಿದ ಶ್ರೀಗಂಧದ ಸಾಬೂನು, ಸಾವಯವ ಬೆಲ್ಲದ ಪುಡಿ, ತುಪ್ಪ ಬಳಸಿ ಮಾಡಿದ ಗೋದಿ ಹಾಗೂ ರಾಗಿ ಬಿಸ್ಕೆಟ್, ಅರಿಶಿಣ, ಧೂಪ, ಎಂಟು ಪಣತಿ ಸೇರಿದಂತೆ ಒಟ್ಟು 11 ಉತ್ಪನ್ನಗಳನ್ನು ಬುಟ್ಟಿ ಒಳಗೊಂಡಿದೆ. ದೀಪಾವಳಿ ಸಂದರ್ಭದಲ್ಲಿ ಸುಮಾರು 5 ಸಾವಿರದಷ್ಟು ವಿಷಮುಕ್ತ ಉತ್ಪನ್ನಗಳನ್ನೊಳಗೊಂಡ ಬುಟ್ಟಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಈ ಬುಟ್ಟಿಯಲ್ಲಿ ಸುಮಾರು 100 ಎಂಎಲ್‌ನ ಗೋಮೂತ್ರಾಧಾರಿತ ಸ್ಯಾನಿಟೈಸರ್ ಕೂಡ ಇರಲಿದೆ.
1 ಲಕ್ಷ ಗೋವಿನ ಸಗಣಿಯ ಹಣತೆ : ಭಾರತೀಯ ಪರಂಪರೆಯಲ್ಲಿ ಬೆಳಕಿನ ಹಬ್ಬವೆಂದೇ ಬಿಂಬಿತವಾದ ದೀಪಾವಳಿಗೆ ದೀಪಗಳನ್ನು ಹಚ್ಚುವುದು ಸಂಪ್ರದಾಯ. ಈ ಹಿಂದೆ ಗ್ರಾಮೀಣ ಭಾಗದಲ್ಲಿ ಕುಂಬಾರರು ತಯಾರಿಸುತ್ತಿದ್ದ ಹಣತೆಗಳನ್ನು ತಂದು ದೀಪ ಹಚ್ಚಲಾಗುತ್ತಿತ್ತು. ಇದೀಗ ಚೀನಾದಲ್ಲಿ ತಯಾರಾಗುವ ಹಣತೆಗಳೇ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿವೆ. ಚೀನಾ ಹಣತೆಗಳ ಬಳಕೆ ತಡೆ ನಿಟ್ಟಿನಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ ದೇಸಿ ಹಣತೆಗೆ ಉತ್ತೇಜನಕ್ಕೆ ಮುಂದಾಗಿದೆ. ಇದರ ಭಾಗವಾಗಿಯೇ ದೇಶದ ವಿವಿಧ ಕಡೆಗಳಲ್ಲಿ ಗೋವಿನ ಸಗಣಿಯಿಂದ ಹಣತೆಗಳನ್ನು ಸಿದ್ಧಪಡಿಸಲಾಗಿದೆ. ದೇಸಿಯತೆ ನಿಟ್ಟಿನಲ್ಲಿ ಸದಾ ಮುಂದಿರುವ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಸಿದ್ಧಗಿರಿ ನ್ಯಾಚುರಲ್ಸ್‌ನಿಂದ 1 ಲಕ್ಷದಷ್ಟು ಹಣತೆಗಳನ್ನು ತಯಾರಿಸಲಾಗಿದೆ. 5 ರೂ.ಗೆ ಒಂದು ಹಣತೆ ಮಾರಾಟ ಮಾಡಲಾಗುತ್ತದೆ.
ಕಂಪನಿಗಳು, ಸಂಘ-ಸಂಸ್ಥೆಗಳು, ವ್ಯಕ್ತಿಗಳು ದೀಪಾವಳಿ ಸಂದರ್ಭದಲ್ಲಿ ಸ್ನೇಹಿತರು, ಬಂಧುಗಳು, ಸಿಬ್ಬಂದಿಗೆ ಉಡುಗೊರೆ ನೀಡುತ್ತಾರೆ. ಏನೇನನ್ನೋ ನೀಡುವ ಬದಲು ದೇಸಿ ಹಾಗೂ ವಿಷಮುಕ್ತ ಉತ್ಪನ್ನಗಳನ್ನು ನೀಡಿದರೆ ಉತ್ತಮ ಎಂಬ ಉದ್ದೇಶದಿಂದ ಗೋಮೂತ್ರಾಧಾರಿತ ಸ್ಯಾನಿಟೈಸರ್, ಹಣತೆ ಸೇರಿದಂತೆ 11 ಉತ್ಪನ್ನಗಳನ್ನು ನೀಡಲಾಗುತ್ತದೆ. ಚೀನಾ ಉತ್ಪನ್ನಗಳ ಬಳಕೆ ತಡೆ ನಿಟ್ಟಿನಲ್ಲಿ ದೀಪಾವಳಿಗೆ ಹಸುವಿನ ಸಗಣಿಯಿಂದ ಸುಮಾರು 1 ಲಕ್ಷ ಹಣತೆ ತಯಾರಿಸಲಾಗಿದ್ದು, ಉಡುಗೊರೆ ಬುಟ್ಟಿಯಲ್ಲಿ ಎಂಟು ಹಣತೆ ನೀಡಲಾಗುತ್ತದೆ. – ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.