ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಮು ಮೂಲಗಿ ಉಮೇದುವಾರಿಕೆ
Team Udayavani, Apr 7, 2021, 3:11 PM IST
ಧಾರವಾಡ: ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಾನಪದ ತಜ್ಞ, ಆಶು ಕವಿ ಡಾ|ರಾಮು ಮೂಲಗಿ ತಹಶೀಲ್ದಾರ್‌ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಂತರ ಮಾತನಾಡಿ, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ಅನ್ನು ಜನಸಾಮಾನ್ಯರಕಲಾವಿದರ, ಸಾಹಿತಿಗಳ ಕೇಂದ್ರವನ್ನಾಗಿಮಾಡಿ, ರಾಜ್ಯಮಟ್ಟದಲ್ಲಿ ಗುರುತಿಸುವಂತೆಕೆಲಸ ಮಾಡುವ ಕನಸು ನನ್ನದು.ಯುವ ಸಾಹಿತಿಗಳು, ಬರಹಗಾರರು,ಕಲಾವಿದರು, ಮಹಿಳೆಯರಿಗೆ ಹೆಚ್ಚಿನಅವಕಾಶ ಕಲ್ಪಿಸುವ ದೃಷ್ಟಿಕೋನದಿಂದಒಮ್ಮೆ ಅವಕಾಶ ಕೊಡಿ ಎಂದರು.
ಬೆಂಬಲಿಗರೊಂದಿಗೆ ಸಭೆ: ನಾಮಪತ್ರಸಲ್ಲಿಕೆಗೂ ಮುನ್ನ ಬಾಸೆಲ್‌ಮಿಷನ್ ರಿಷ್ ಮೆಮೋರಿಯಲ್‌ಸಭಾಂಗಣದಲ್ಲಿ ಬೆಂಬಲಿಗರೊಂದಿಗೆಸಭೆ ಕೈಗೊಂಡು ರಾಮು ಮೂಲಗಿಅವರು ಮತಯಾಚಿಸಿದರು. ಜಿಲ್ಲೆಯಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ಜಿ.ಆರ್. ಭಟ್ ಮಾತನಾಡಿ,ತಳಮಟ್ಟದಲ್ಲಿ ಶ್ರಮಪಟ್ಟ ಡಾ|ರಾಮುಮೂಲಗಿ ಅವರು ಸಾಹಿತ್ಯ ಪರಿಷತ್ತಿನಅಧ್ಯಕ್ಷರಾಗುವುದು ಬಹು ಮುಖ್ಯವಾಗಿದೆ. ಇಲ್ಲದಿದ್ದರೆ ಸಾತ್ವಿಕರು ಆತ್ಮವಂಚನೆಮಾಡಿಕೊಂಡಂತಾಗುತ್ತದೆ ಎಂದರು.
ಹುಬ್ಬಳ್ಳಿಯ ನೌಕರರ ಸಂಘದ ಅಧ್ಯಕ್ಷ ಡಾ| ಪ್ರಹ್ಲಾದ ಗೆಜ್ಜಿ ಮಾತನಾಡಿ, ಹಾಲಿ ಅಧ್ಯಕ್ಷರು ಯಾವ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಯಾರ ಮಾತಿಗೂ ಮಾನ್ಯತೆ ನೀಡಲಿಲ್ಲ. ಇದು ಸಾಹಿತ್ಯ ವಲಯದಲ್ಲಿ ತುಂಬಾ ಬೇಸರವನ್ನುಂಟು ಮಾಡಿದೆ ಎಂದರು.
ಡಾ|ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕಟ್ರಸ್ಟ ಅಧ್ಯಕ್ಷ ಡಾ|ಡಿ.ಎಂ.ಹಿರೇಮಠಅಧ್ಯಕ್ಷತೆ ವಹಿಸಿದ್ದರು. ನವಲಗುಂದಸರ್ಕಾರಿ ನೌಕರರ ಸಂಘದ ಅಧ್ಯಕ್ಷಎ.ಬಿ. ಕೊಪ್ಪದ, ಹಿರಿಯ ಸಂಶೋಧಕಿಹನುಮಾಕ್ಷಿ ಗೋಗಿ, ಅದರಗುಂಚಿಯಶೇಖರಗೌಡ ಪಾಟೀಲ, ಕುಂದಗೋಳದಶಂಬಯ್ಯ ಹಿರೇಮಠ, ಕಲಘಟಗಿಯವಿ.ವಿ. ಆಲೂರ, ಅಳ್ನಾವರದ ಟಿ.ಎಸ್.ಚೌಗಲೆ, ಅಣ್ಣಿಗೇರಿಯ ಸಂಜೀವಗೌಡಬಿ.ಎಸ್., ಡಾ| ವಿಶ್ವನಾಥ ಚಿಂತಾಮಣಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.