ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪ್ರಕಟ
Team Udayavani, Feb 27, 2021, 6:10 AM IST
ಧಾರವಾಡ : ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2017-18, 2018-19ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ, 2017 ಮತ್ತು 2018ನೇ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಹಾಗೂ 2021ನೇ ಸಾಲಿನ ಬಾಲಗೌರವ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಲಾಗಿದ್ದು, ನಗರದ ಡಾ| ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ಫೆ.28ರಂದು ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಹೇಳಿದರು.
ಗೌರವ ಪ್ರಶಸ್ತಿ ಜತೆಗೆ ತಲಾ 25 ಸಾ. ರೂ., ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಜತೆಗೆ ತಲಾ 15 ಸಾ. ರೂ. ಹಾಗೂ 2021ನೇ ಸಾಲಿನ ಬಾಲಗೌರವ ಪ್ರಶಸ್ತಿ ಜತೆಗೆ ತಲಾ 10 ಸಾ.ರೂ. ಹಾಗೂ ಸ್ಮರಣಿಕೆಗಳಿರಲಿವೆ ಎಂದರು.
ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು :
2017-18ನೇ ಸಾಲಿನಲ್ಲಿ ವಿಜಯಪುರದ ಬಾ.ಇ. ಕುಮಠೆ (ಮಕ್ಕಳ ಸಾಹಿತ್ಯ), ತಾಳಿಕೋಟೆಯ ಚಂದ್ರಗೌಡ ಕುಲಕರ್ಣಿ (ಮಕ್ಕಳ ಸಾಹಿತ್ಯ), ಶಿವಮೊಗ್ಗದ ಕೆ.ಆರ್. ಶ್ರೀಧರ್ (ಮಕ್ಕಳ ವಿಜ್ಞಾನ ಸಾಹಿತ್ಯ), ಮೈಸೂರಿನ ಯೋಗಾನಂದ ಡಿ. (ಮಕ್ಕಳ ರಂಗಭೂಮಿ), ಧಾರವಾಡದ ಚಿಲಿಪಿಲಿ ಸಂಸ್ಥೆ (ಸಾಂಸ್ಕೃತಿಕ/ಶೈಕ್ಷಣಿಕ), ಕಲಬುರಗಿಯ ದತ್ತು ಅಗರವಾಲ್ (ವಿಕಲಚೇತನ), ಮಂಗಳೂರಿನ ನರೇಂದ್ರ ನಾಯಕ್ (ಮನೋವಿಕಾಸ) ಹಾಗೂ 2018-19ನೇ ಸಾಲಿನಲ್ಲಿ ವಿಜಯಪುರದ ಈಶ್ವರಚಂದ್ರ ಚಿಂತಾಮಣಿ (ಮಕ್ಕಳ ಸಾಹಿತ್ಯ), ಉಡುಪಿಯ ವೈದೇಹಿ (ಮಕ್ಕಳ ಸಾಹಿತ್ಯ), ಕೋಲಾರದ ಡಾ| ಸಿ.ಎಂ. ಗೋವಿಂದ ರೆಡ್ಡಿ (ಮಕ್ಕಳ ಸಾಹಿತ್ಯ), ಬೆಂಗಳೂರಿನ ಎನ್. ಮಂಗಳಾ (ಮಕ್ಕಳ ರಂಗಭೂಮಿ), ಹಾವೇರಿಯ ನಾಮದೇವ ಕಾಗದಗಾರ (ಸಾಂಸ್ಕೃತಿಕ/ಶೈಕ್ಷಣಿಕ), ಗದಗದ ಸೇವಾ ಭಾರತಿ ಸಂಸ್ಥೆ (ಪುನರ್ವಸತಿ/ವಿಕಲಚೇತನ), ಬೆಳಗಾವಿಯ ಬಿ.ಎಲ್. ಪಾಟೀಲ್ (ಸಂಸ್ಥೆ/ಮುಕ್ತ ಶಿಕ್ಷಣ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ.
ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಪುರಸ್ಕೃತರು :
2017ನೇ ಸಾಲಿನಲ್ಲಿ ಮಕ್ಕಳ ಕಥೆ ಕ್ಷೇತ್ರದಲ್ಲಿ ಟಿ.ಎಸ್. ನಾಗರಾಜ ಶೆಟ್ಟಿ ಅವರ “ಚಿನ್ನಾರಿ-ಕಿನ್ನರಿ’, ಕವನ ಸಂಕಲನ ಕ್ಷೇತ್ರದಲ್ಲಿ ಡಾ| ಬಿ.ಎಸ್. ಸನದಿ ಅವರ “ಹೂರಣ ಹೋಳಿಗೆ’ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಡಾ| ಎ.ಒ. ಆವಲ ಮೂರ್ತಿ ಅವರ “ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?’ ಕೃತಿ ಆಯ್ಕೆಯಾಗಿದೆ. 2018ನೇ ಸಾಲಿನ ಮಕ್ಕಳ ಕಥೆ ಕ್ಷೇತ್ರದಲ್ಲಿ ಡಾ| ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ’, ನಾಟಕ ಕ್ಷೇತ್ರದಲ್ಲಿ ವಿನಾಯಕ ಕಮತದ ಅವರ “ಬೆಳ್ಳಕ್ಕಿ ಕೊಡೆ’, ಕವನ ಸಂಕಲನ ಕ್ಷೇತ್ರದಲ್ಲಿ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ “ಗುಡುಗುಡು ಗುಮ್ಮಟ ದೇವರು’, ಕಾದಂಬರಿ ಕ್ಷೇತ್ರದಲ್ಲಿ ಮುತ್ತೂರು ಸುಬ್ಬಣ್ಣ ಅವರ “ಅಂಶು’, “ಅನು ಮತ್ತು ರೋಬೋ’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2021ನೇ ಸಾಲಿನ ಬಾಲಗೌರವ ಪ್ರಶಸ್ತಿ ಪುರಸ್ಕೃತರು :
ಸಂಗೀತ ವಿಭಾಗ: ಹೇಮಂತ ಜೋಷಿ (ಧಾರವಾಡ), ವರುಣ ಗೌಡ (ದಾವಣಗೆರೆ), ಆಯುಷ್ ಎಂ.ಡಿ. (ವಿರಾಜಪೇಟೆ), ಕುಸುಮಾ ಭೋವಿ ಕಕ್ಕೇರಾ (ಸುರಪುರ); ನೃತ್ಯ ವಿಭಾಗ: ಸೌಜನ್ಯಾ ಕೆ. ಮೊಹರೆ (ಬಾಗಲಕೋಟೆ), ಸಾಯಿ ಸಂಜನಾ ಕೆ. (ದಾವಣಗೆರೆ), ರೆಮೋನಾ ಪಿರೇರಾ (ಮಂಗಳೂರು), ವರಲಕ್ಷ್ಮೀ ಮಹೇಶ (ಹೊಸಪೇಟೆ); ನಟನೆ ವಿಭಾಗ: ಪ್ರಜ್ವಲ್ ಹೂಗಾರ್ (ಧಾರವಾಡ), ಸತೀಶ ಜಿ.ಎಸ್. (ಚಾಮರಾಜನಗರ); ವಿಜ್ಞಾನ ಮತ್ತು ಸಂಶೋಧನೆ ವಿಭಾಗ: ಪ್ರಸನ್ನ ಉಮೇಶ ಶಿರಹಟ್ಟಿ (ಬೆಳಗಾವಿ), ರಂಜನ್ ಪಿ. (ಬೆಂಗಳೂರು), ಅಮೋಘ ನಾರಾಯಣ (ಬೆಳ್ತಂಗಡಿ), ಶ್ರೀನಿಧಿ ನೀರಮಾನ್ವಿ (ಬಳ್ಳಾರಿ); ಬರವಣಿಗೆ ವಿಭಾಗ: ಪ್ರಮಥೇಶ ಆರ್. ಗಡಾದ (ಗದಗ); ಚಿತ್ರಕಲೆ ವಿಭಾಗ: ಸುದೀಪ ಶಿವಾನಂದ ಹೆಗಡೆ (ಬೆಳಗಾವಿ), ಸ್ನೇಹಶ್ರೀ ಎಸ್.ಜಿ. (ಶಿವಮೊಗ್ಗ), ಹರ್ಷಿತ್ ಎಸ್.ಎಸ್. (ಉಡುಪಿ), ಶಶಾಂಕ್ ಆರ್. ಕೋಲಕಾರ (ರಾಯಚೂರು); ಕರಕುಶಲ ವಿಭಾಗ: ಚಂದನ ಎ. (ಸರಗೂರು ಎಚ್.ಡಿ.ಕೋಟೆ); ಕ್ರೀಡೆ ವಿಭಾಗ: ಅನನ್ಯ ಹಿರೇಮಠ (ಧಾರವಾಡ), ಅಮೂಲ್ಯಾ ಬಿ.ಎಂ. (ತುಮಕೂರು), ಪ್ರಖ್ಯಾತ್ ಪೂಜಾರಿ (ಉಡುಪಿ), ಕೆ. ವಿದ್ಯಾ (ಬಳ್ಳಾರಿ); ಬಹುಮುಖ ವಿಭಾಗ: ಪೂರ್ವಿ ಶಾನುಭಾಗ್ (ಧಾರವಾಡ), ವೈಷ್ಣವಿ ಭಾರದ್ವಾಜ್ (ದಾವಣಗೆರೆ), ಅಥರ್ವ ಹೆಗ್ಡೆ (ಮಂಗಳೂರು), ಆಕಾಂಕ್ಷಾ ಪುರಾಣಿಕ್ (ಕಲಬುರಗಿ), ಸ್ವಸ್ತಿಕ್ ಶರ್ಮ ಪಿ. (ಕಾಸರಗೋಡು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.