MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್
Team Udayavani, Jan 15, 2025, 7:00 PM IST
ಧಾರವಾಡ : ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎನ್ನುವ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಅರ್ಜಿ ವಿಚಾರಣೆಯನ್ನು ಮತ್ತೆ ಜ.27ಕ್ಕೆ ಧಾರವಾಡ ಹೈಕೋರ್ಟ್ ಮುಂದೂಡಿದೆ.
ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರು ಮತ್ತು ಸ್ನೇಹಮಯಿ ಕೃಷ್ಣ ಪರ ವಕೀಲರ ವಾದ ಆಲಿಸಿ, ಅಂತಿಮವಾಗಿ ಪ್ರಕರಣದ ವಿಚಾರಣೆಯನ್ನು ಜ.27 ಕ್ಕೆ ಮುಂದೂಡಿತು.
ಬೆಳಗ್ಗೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಪರವಾಗಿ ವಾದ ಮಂಡಿಸಿದ ಸುಪ್ರಿಂಕೋರ್ಟ್‌ನ ಹಿರಿಯ ವಕೀಲ ಮಣೀಂದ್ರ ಸಿಂಗ್, ಮುಡಾ ಅಕ್ರಮ ಕುರಿತ ಪ್ರಕರಣವನ್ನು ಲೋಕಾಯುಕ್ತ ಡಿವೈಎಸ್‌ಪಿ ಸೇರಿ ಮೂವರು ಸದಸ್ಯರ ಸಮಿತಿ ತನಿಖೆ ನಡೆಸುತ್ತಿದ್ದು, ಇವರು ಸರ್ಕಾರದಿಂದ ನೇಮಕವಾಗಿರುವ ಪೊಲೀಸರೇ ಆಗಿರುತ್ತಾರೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ಅಸಾಧ್ಯವಾಗಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಬೇಕು ಎಂದು ವಾದ ಮಂಡಿಸಿದರು.
ಇಲ್ಲಿ ಸಿಎಂ ಪತ್ನಿ 56 ಕೋಟಿ ರೂ.ಮೊತ್ತದ ಸೈಟ್‌ಗಳನ್ನು ಪಡೆದುಕೊಂಡಿದ್ದು, 14 ಸೈಟ್‌ಗಳನ್ನು ಮಿಂಚಿನ ವೇಗದಲ್ಲಿ ಮರಳಿಸಿದ್ದಾರೆ.ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಿಸುವುದಕ್ಕೆ ಮುಂದಾಗಿದೆ.೧೪೫ ಫೈಲ್‌ಗಳನ್ನು ನಗರಾಭಿವೃದ್ಧಿ ಅಽಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ನಗರಾಭಿವೃದ್ಧಿ ಸಚಿವರೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಈ ವರೆಗೂ ಈ ಪೈಲ್‌ಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಇಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಮಣೀಂದ್ರ ಸಿಂಗ್ ಪ್ರಬಲ ವಾದ ಮಂಡಿಸಿದರು.
ನ್ಯಾಯಾಧೀಶರ ಪ್ರಶ್ನೆ ? : ಸುಪ್ರಿಂಕೋರ್ಟ್ ವಕೀಲ ಪಣೀಂದ್ರ ಸಿಂಗ್ ವಾದ ಮಂಡಿಸುವ ವೇಳೆ ನ್ಯಾ.ನಾಗಪ್ರಸನ್ನ ಅವರು, 14 ನಿವೇಶನಗಳಿಗೂ ಈ ಪೈಲ್‌ಗಳನ್ನು ಪಡೆದುಕೊಂಡಿರುವುದುಕ್ಕೂ ಏನಾದರೂ ಸಂಬಂಧ ಇದೆಯೇ ? ಎಂದು ಪ್ರಶ್ನಿಸಿದರು. ಇದೇ ಎಂದು ಪಣೀಂದ್ರ ಸಿಂಗ್ ಹೇಳಿದರು. ನಂತರ ವಾದ ಮಂಡಿಸಿದ ಸಿಎಂ ಪರ ವಕೀಲ ರವಿವರ್ಮಕುಮಾರ್, ಸಂಬಂಧವಿಲ್ಲದ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.
ಈ ಮಧ್ಯೆ ಈ ವರೆಗೂ ಲೋಕಾಯುಕ್ತರು ನಡೆಸಿದ ತನಿಖೆಯ ಸಂಪೂರ್ಣ ವರದಿಯನ್ನು ಗುರುವಾರ (ಜ.16)ದ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಲೋಕಾಯುಕ್ತರ ಪರ ವಕೀಲ ವೆಂಕಟೇಶ ಅರಬಗಟಿ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು.
ಕೊನೆಗೆ ಈ ಪ್ರಕರಣದಲ್ಲಿ ಇ.ಡಿ.ಯನ್ನು ಕೂಡ ಭಾಗಿಯಾಗಿಸುವ ಅರ್ಜಿ ಮತ್ತು ಮುಖ್ಯ ಅರ್ಜಿ (ಮೇನ್ ಪಿಟಿಷನ್)ಗೆ ತಕಾರರು ಸಲ್ಲಿಸಲು ಲೋಕಾಯುಕ್ತ ಪರ ವಕೀಲರು ಕಾಲಾವಕಾಶ ಕೇಳಿದ್ದರಿಂದ ಅಂತಿಮವಾಗಿ ಹೈಕೋರ್ಟ್ ಪೀಠ ಜ.27 ಕ್ಕೆ ವಿಚಾರಣೆಯನ್ನು ಮುಂದೂಡಿತು.
**
ಲೋಕಾಯುಕ್ತ ತನಿಖೆಯಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂಬುದನ್ನು ನಮ್ಮ ಪರ ವಕೀಲರು ಮಾನ್ಯ ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದಾರೆ. ಜ.27 ಕ್ಕೆ ಪ್ರಕರಣ ಮುಂದೂಡಿದ್ದು, ಅಂದು ಈ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವಹಿಸುವ ಅಂತಿಮ ಆದೇಶ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
– ಸ್ನೇಹಮಯಿ ಕೃಷ್ಣ, ಸಾಮಾಜಿಕ ಹೋರಾಟಗಾರ.
**
ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದ್ದು, ಅಲ್ಲಿನ ಎಫ್‌ಐಆರ್‌ನ್ನು ಸಿಬಿಐಗೆ ವಹಿಸುವಂತೆ ಕೋರಿದ್ದೇವೆ. ಅಷ್ಟೇಯಲ್ಲ, ಇ.ಡಿ.ಯನ್ನು ಪ್ರಕರಣದಲ್ಲಿ ಸೇರಿಸುವಂತೆ ಕೋರಿದ್ದೇವೆ.ಜ. 27 ಕ್ಕೆ ಸುದೀರ್ಘ ವಾದ ಪ್ರತಿವಾದ ನಡೆಯಲಿದೆ. ಜ.೨೬ ವರೆಗೆ ಆಗಿರುವ ತನಿಖೆಯನ್ನು ಮುಂದಿನ ವಿಚಾರಣೆ ಒಳಗಾಗಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
– ವಸಂತ ಕುಮಾರ್, ಸ್ನೇಹಮಯಿ ಕೃಷ್ಣ ಪರ ವಕೀಲರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
MUST WATCH
ಹೊಸ ಸೇರ್ಪಡೆ
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.