ಸಚಿವ ಮುನೇನಕೊಪ್ಪ ಮಾದರಿ ನಡೆ; ಹಾರ-ತುರಾಯಿ ಬದಲು ಪುಸ್ತಕಕ್ಕೆ ಮನವಿ
Team Udayavani, Aug 7, 2021, 1:18 PM IST
ಹುಬ್ಬಳ್ಳಿ: ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಶಂಕರ ಪಾಟೀಲ ಮುನೇಕೊಪ್ಪ ಅವರು ನಗರಕ್ಕೆ ಶನಿವಾರ ಆಗಮಿಸುತ್ತಿದ್ದಾರೆ. ತಮ್ಮ ಸ್ವಾಗತ ಹಾಗೂ ಅಭಿನಂದನೆಗೆ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರು ಹಾರ-ತುರಾಯಿ ತರುವುದು ಬೇಡ, ತರುವುದಾದರೆ ಕನ್ನಡ ಪುಸ್ತಕಗಳನ್ನು ತರುವಂತೆ ಮನವಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಶುಭಕೋರಲು ಆಗಮಿಸುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಹಾರ-ತುರಾಯಿ, ನೆನಪಿನ ಕಾಣಿಕೆಗಳನ್ನು ತರುವುದು ಬೇಡ. ತರುವುದಾದರೆ ಕನ್ನಡ ಪುಸ್ತಕಗಳನ್ನು ತಂದರೆ ಅವುಗಳನ್ನು ಗ್ರಂಥಾಲಯಗಳಿಗೆ ನೀಡುವುದಾಗಿ ನೂತನ ಸಚಿವರು ಹೇಳಿದ್ದಾರೆ.
ಮುನೇನಕೊಪ್ಪ ಅವರು ಶನಿವಾರ ಮಧ್ಯಾಹ್ನ 1 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಪರಿಶೀಲನೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ನವಲಗುಂದದ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ರೈತ ಭವನಕ್ಕೆ ಭೇಟಿ ನೀಡುವರು. ಸಂಜೆ 4 ಗಂಟೆಗೆ ಸ್ವಗ್ರಾಮ ಅಮರಗೋಳಕ್ಕೆ ತೆರಳುವರು. ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.