Karnataka Polls ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್ ಆರೋಪ
Team Udayavani, Apr 18, 2023, 1:29 PM IST
ಹುಬ್ಬಳ್ಳಿ: ನನಗೆ ಟಿಕೆಟ್ ತಪ್ಪಲು, ರಾಜ್ಯದಲ್ಲಿ ಬಿಜೆಪಿ ಬಲಹೀನದತ್ತ ಸಾಗಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು ಹಿರಿಯ ನಾಯಕನಾದ ನನಗೆ ಟಿಕೆಟ್ ತಪ್ಪುವಂತೆ ಮಾಡಿದರು. ರಾಜ್ಯ ಕೋರ್ ಕಮಿಟಿ, ಕೇಂದ್ರ ಸ್ಕ್ರೀನಿಂಗ್ ಕಮಿಟಿನಲ್ಲೂ ನನ್ನ ಹೆಸರೇ ಶಿಫಾರಸ್ಸು ಆಗಿತ್ತು. ಸಂಸದೀಯ ಮಂಡಳಿ ಸಭೆಯಲ್ಲಿ ನನ್ನ ಹೆಸರು ಮಾಯವಾಗಿದೆ ಎಂದರು.
ಇದಕ್ಕೆ ಮುಖ್ಯ ಕಾರಣ ಬಿ.ಎಲ್. ಸಂತೋಷ ನೇರ ಕಾರಣ, ತಮ್ಮ ಮಾನಸ ಪುತ್ರನ ಮೇಲಿನ ಮಮಕಾರಕ್ಕಾಗಿ ನನ್ನಂತಹ ಹಿರಿಯ ನಾಯಕನನ್ನು ಬಲಿ ಕೊಡಲಾಗಿದೆ ಎಂದರು.
ತಳಮಟ್ಟದಿಂದ ಪಕ್ಷ ಕಟ್ಟಿದ, ಆರು ಬಾರಿ ಸತತ ಗೆಲುವು ಸಾಧಿಸಿದ ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವ ಕುತಂತ್ರದಲ್ಲಿ ಬಿ.ಎಲ್.ಸಂತೋಷ ಪಾತ್ರ ಪ್ರಮುಖವಾಗಿದ್ದು, ರಾಜ್ಯದ ಕೆಲ ನಾಯಕರು ಇದಕ್ಕೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು.
2018ರ ಚುನಾವಣೆಯಲ್ಲಿ ಇದೇ ಬಿ.ಎಲ್.ಸಂತೋಷ ಕಲಘಟಗಿ ಕ್ಷೇತ್ರಕ್ಕೆ ತಮ್ಮ ಮಾನಸಪುತ್ರ ಮಹೇಶ ಟೆಂಗಿನಕಾಯಿಗೆ ಟಿಕೆಟ್ ಕೊಡಿಸಿದ್ದರು. ಅಲ್ಲಿ ಸಿ.ಎಂ.ನಿಂಬಣ್ಣವರಿಗೆ ಟಿಕೆಟ್ ನೀಡಬೇಕೆಂಬ ನಮ್ಮೆಲ್ಲರ ಅನಿಸಿಕೆ ತಿರಸ್ಕರಿಸಿದ್ದರು. ಅಂತಿಮವಾಗಿ ಸಿ ಫಾರಂ ನೀಡಿ ನಿಂಬಣ್ಣವರ ಸ್ಪರ್ಧಿಸಿದ್ದರು. ನನ್ನ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಟೆಂಗಿನಕಾಯಿ ರಹಸ್ಯ ಪ್ರಚಾರ ಕೈಗೊಂಡಿದ್ದು, ಈ ಬಾರಿ ನನಗೆ ಟಿಕೆಟ್ ಖಚಿತ ಎಂದು ಹೇಳಿಕೊಂಡಿದ್ದಾರೆ. ಹಿರಿಯ ನಾಯಕನಾದ ನನಗೆ ಟಿಕೆಟ್ ತಪ್ಪದು ಎಂಬ ವಿಶ್ವಾಸ ನನ್ನದಾಗಿತ್ತು. ಇವರ ಕುತಂತ್ರ ಅರಿಯದಾದೆ ಎಂದರು.
ಇದನ್ನೂ ಓದಿ:ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ
ನನಗೆ ಟಿಕೆಟ್ ತಪ್ಪುವ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಗಟ್ಟಿಯಾಗಿ ಮನವರಿಕೆ ಮಾಡಿಕೊಡಬೇಕಾಗಿತ್ತು. ಜೋಶಿರವರೆ ನಾಲ್ಕು ಬಾರಿ ನಿಮ್ಮನ್ನು ಸಂಸದರಾಗಿಸಲು ನಾನು ಪಟ್ಟ ಶ್ರಮ ನಿಮಗೆ ನೆನಪಾಗಲಿಲ್ಲವೆ, ನಾನು ಸ್ಪೀಕರ್ ಆಗಿದ್ದಾಗ ನನ್ನ ಭಾವಚಿತ್ರ ಬಳಸಲು ಬರುವುದಿಲ್ಲವೆಂದು ನನ್ನ ಪತ್ನಿ ಹೆಸರನ್ನು ಶಿಲ್ಪಾ ಜಗದೀಶ ಶೆಟ್ಟರ ಎಂದು ದೊಡ್ಡ ಅಕ್ಷರದಲ್ಲಿ ಕರಪತ್ರದಲ್ಲಿ ಹಾಕಿಸಿದ್ದು, ಪ್ರಚಾರಕ್ಕೆ ಅವರನ್ನು ಕರೆದುಕೊಂಡು ಹೋಗಿದ್ದಾದರು ನೆನಪಾಗಲಿಲ್ಲವೆ. ಸದಸ ಪ್ರಧಾನಿ ಬಳಿ ಇರುವ ನೀವು ಪ್ರಧಾನಿ ಮೋದಿಯವರು, ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತಲ್ಲ ಎಂದರು.
ಬಿ.ಎಲ್.ಸಂತೋಷ ಕಾರಣದಿಂದಾಗಿ ರಾಜ್ಯದೆಲ್ಲಡೆ ಬಿಜೆಪಿಯಲ್ಲಿ ಬೆಂಕಿ ಬೀಳುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಅವರು ಸಂತೋಷ ಹೇಳಿದಷ್ಟು ಮಾತ್ರ ಮಾತನಾಡುತ್ತಾರೆ ಎಂದರು.
ತಮ್ಮ ಮೇಲೆ ಐಟಿ, ಇಡಿ ದಾಳಿ ನಡೆಯಲುಬಹುದು. ನನ್ನದೇನು ಸಾವಿರಾರು ಕೋಟಿ ಆಸ್ತಿ ಇಲ್ಲ .ಇರುವ ಆಸ್ತಿ ಕಾನೂನು ಚೌಕಟ್ಟಿನಲ್ಲಿಯೇ ಇದೆ ಎಂದರು.
ಬಿ.ಎಲ್.ಸಂತೋಷ ಇನ್ನು ಕೆಲವರು ಮಾಡಿದ ಅಪಮಾನ, ಮಾನಸಿಕ ಹಿಂಸೆಯಿಂದ ಸ್ವಾಭಿಮಾನ, ಗೌರವಕ್ಕಾಗಿ ಕಾಂಗ್ರೆಸ್ ಗೆ ಹೋಗಿದ್ದೇನೆ ಹೊರತು ಅಧಿಕಾರದ ಲಾಲಸೆಗಾಗಿ ಅಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.