ಸಂತ್ರಸ್ತರ ನೆರವಿಗೆ ಕರ್ನಾಟಕ ಥಿಂಕರ್ ಫೋರಂ ಸಾಥ್
Team Udayavani, Aug 20, 2018, 4:14 PM IST
ಧಾರವಾಡ: ಅನಿರೀಕ್ಷಿತ ಅತಿವೃಷ್ಟಿಯಿಂದ ತೀವ್ರ ತೊಂದರೆಗೆ ಸಿಲುಕಿರುವ ಕೊಡುಗು ಜಿಲ್ಲೆಯ ಜನರಿಗೆ ನಾಡಿನ ಜನರ ಸಹಾಯದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಥಿಂಕರ್ ಫೋರಂ (ರಿ) ಕೊಡಗು ಜಿಲ್ಲೆಯ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈ ಉದ್ದೇಶಕ್ಕಾಗಿ ಫೋರಂ, ಸಾರ್ವಜನಿಕರು ನೀಡುವ ವಸ್ತುಗಳನ್ನು ಕೊಡಗು ಜಿಲ್ಲೆಯ ಜನರಿಗೆ ತಲುಪಿಸುವ ಹೊಣೆ ನಿಭಾಯಿಸಲು ಸಜ್ಜಾಗಿದೆ.
ಆದ್ದರಿಂದ ಸಾರ್ವಜನಿಕರು ಧವಸ-ಧಾನ್ಯ, ಬಟ್ಟೆಗಳು, ಬ್ರೆಡ್, ಹಾಸಿಗೆ, ಹೊದಿಕೆ, ದಿಂಬು, ಬೆಂಕಿಪೊಟ್ಟಣ, ಮೇಣಬತ್ತಿ, ಔಷಧಿ ಸಾಮಗ್ರಿ, ಡೆಟಾಲ್, ವಾಶಿಂಗ್ ಪೌಡರ್, ಕೊಬ್ಬರಿ ಎಣ್ಣೆ, ಸಾಬೂನು ಮತ್ತಿತರ ಜೀವನಾವಶ್ಯಕ ವಸ್ತುಗಳನ್ನು ಚೀಲ ಅಥವಾ ಡಬ್ಬಿಯಲ್ಲಿ ಪ್ಯಾಕ್ ಮಾಡಿ ಕೊಡಬೇಕು. ಹಣಕಾಸಿನ ರೂಪದಲ್ಲಿ ಸಹಾಯ ಮಾಡಲು ಬಯಸುವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯ ಮಾಡಲು ಅವಕಾಶವಿದೆ. ದಾನಿಗಳು ತಮ್ಮ ಚೆಕ್ ಅಥವಾ ಡಿ.ಡಿ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಕಚೇರಿ, ಕರ್ನಾಟಕ ಸರ್ಕಾರ ಈ ವಿಳಾಸಕ್ಕೆ ಬರೆದು ಸಲ್ಲಿಸಬೇಕು. ಸಾರ್ವಜನಿಕರು ತಾವು ನೀಡಿದ ವಸ್ತುಗಳ ಬಗ್ಗೆ ಸಂಬಂಧಿಸಿದವರ ಬಳಿ ರಶೀದಿ ಪಡೆಯಬೇಕು.
ಆಸಕ್ತ ಸಾರ್ವಜನಿಕರು ಜೆ.ಸಿ. ಕಂಬಾರ, ಅಧ್ಯಾಪಕರು, ಆರ್.ಎಲ್.ಎಸ್. ಕಾಲೇಜು, ಮಹಾನಗರ ಪಾಲಿಕೆ ಕಚೇರಿ ಹತ್ತಿರ, ಧಾರವಾಡ (ಮೊ:8296756966), ದೂ:0836-2441185 ಅಥವಾ ಪ್ರಕಾಶ ಶ್ಯಾಡ್ಲಗೇರಿ, ಕರ್ನಾಟಕ ಥಿಂಕರ್ ಫೋರಂ (ರಿ) ಕಚೇರಿ, ಕಿಲ್ಲಾ ಧಾರವಾಡ (ಮೊ:9945720037) ಆ.25ರೊಳಗಾಗಿ ತಲುಪಿಸಬೇಕು. ಮಾಹಿತಿಗಾಗಿ ಪಿ.ಎಚ್. ನೀರಲಕೇರಿ, ಅಧ್ಯಕ್ಷರು, ಕರ್ನಾಟಕ ಥಿಂಕರ್ ಫೋರಂ ಅಥವಾ ಕರಣ ದೊಡವಾಡ (ಮೊ: 7760965110) ಸಂಪರ್ಕಿಸಬಹುದು.
ಕೊಡಗು ಸಂತ್ರಸ್ತರಿಗೆ ಆಹಾರ ಪದಾರ್ಥ ಸಂಗ್ರಹ
ನವಲಗುಂದ: ಪಟ್ಟಣದಲ್ಲಿ ಜನರಿಂದ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಖಾಸಗಿ ವಾಹನಿ ಮೂಲಕ ಕೊಡಗು ಸಂತ್ರಸ್ತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮಂಜುನಾಥ ಬೇಲೂರು, ಉಮೇಶ ಹಕ್ಕರಕ್ಕಿ, ನಿಂಗಪ್ಪ ಕುಂಬಾರ, ಜಯಪ್ರಕಾಶ ಬದಾಮಿ, ವಿನಾಯಕ ದಾಡಿಬಾಯಿ, ರಾಮು ಭೋವಿ, ಮಹೇಶ ಪೂಜಾರ, ಆಸೀಫ್ ಉಮಚಗಿ, ರವಿ ಬ್ಯಾಹಿಟಿ, ರಾಘು ಮಲ್ಲಾಪೂರ, ಸೋಮಯ್ಯ ಪೂಜಾರ, ರಾಮಕೃಷ್ಣ ಬಡಿಗೇರ, ಬಾಲಾಜಿ ಆನೇಗುಂದಿ, ಗುರು ವಿಠಲ ರಾಯಬಾಗಿ, ಮಂಜು ಮಟಗೇರ, ಮಾರುತಿ ಗುಡಿಸಾಗರ, ಪುಟ್ಟು ಹೀರಗಣ್ಣನವರ ಇದ್ದರು.
ಪ್ರವಾಹ ಇಳಿಮುಖಕ್ಕೆ ಆಗ್ರಹಿಸಿ ದೀರ್ಘ ದಂಡ ನಮಸ್ಕಾರ
ಧಾರವಾಡ: ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಇಳಿಮುಖವಾಗುವಂತೆ ಪ್ರಾರ್ಥಿಸಿ ನಗರದಲ್ಲಿ ರವಿವಾರ ಸಾಮೂಹಿಕ ದೀರ್ಘ ದಂಡ ನಮಸ್ಕಾರ ಸೇವೆ ಸಲ್ಲಿಸುವ ಮೂಲಕ ದೇವರ ಮೊರೆ ಹೋದ ಘಟನೆ ನಡೆದಿದೆ. ರಾಜೀವಗಾಂಧಿ ನಗರದ ಕೆಲ ಭಕ್ತ ಸಮೂಹವು ಹೊಳೆಮ್ಮದೇವಿ ದೇವಸ್ಥಾನದಿಂದ ಸೋಮೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದು, ಅಲ್ಲದೇ ಆ ಬಳಿಕ ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಹೊಳೆಮ್ಮದೇವಿ ದೇವಸ್ಥಾನದ ಮೈಲಾರ ಅಜ್ಜ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ದೀರ್ಘ ದಂಡ ನಮಸ್ಕಾರ ಸೋಮೇಶ್ವರ ದೇವಸ್ಥಾನದವರೆಗೂ ಬಂದು ಪುನಃ ದೀಡ ನಮಸ್ಕಾರ ಮೂಲಕವೇ ಹೊಳೆಮ್ಮದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಮಕ್ಕಳು ಸಹ ಈ ದೀರ್ಘ ದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
MUST WATCH
ಹೊಸ ಸೇರ್ಪಡೆ
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
Breast Cancer: ಸ್ತನಗಳ ಕ್ಯಾನ್ಸರ್ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.