ಜೀವ ಕಾರುಣ್ಯ ನಶಿಸಿದ ಜಗತ್ತಿನಲ್ಲಿ ಕೇಡು-ಮತ್ಸರ
Team Udayavani, Apr 18, 2018, 5:17 PM IST
ಬಾಗಲಕೋಟೆ: ಜೀವ ಕಾರುಣ್ಯ, ಜೀವ ಪ್ರೇಮ ನಶಿಸಿ ಹೋಗಿರುವ ಜಗತ್ತಿನಲ್ಲಿ ಮಾನವೀಯತೆ ಅಳಿಸಿ ಹೋಗಿದೆ. ಮತ್ಸರ, ಕೇಡು, ಕುಯುಕ್ತಿಗಳೇ ಪ್ರಮುಖವಾಗಿವೆ ಎಂದು ಚಿಂತಕಿ ವೀಣಾ ಬನ್ನಂಜೆ ಕಳವಳ ವ್ಯಕ್ತಪಡಿಸಿದರು.
ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ಎನ್. ಕಲಾ, ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ 34ನೇ ವಾರ್ಷಿಕೋತ್ಸವ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ನಿವೃತ್ತಿ ಹೊಂದಿದ ಡಾ. ಎಂ.ಜಿ. ದೀಕ್ಷಿತ್ ಅವರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಮ್ಮುವಿನಲ್ಲಿ ಪುಟ್ಟ ಬಾಲಕಿ ಅಸಿಫಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಮತಾಂಧರು ಮಾನವೀಯತೆಯನ್ನು ಮರೆತಿದ್ದಾರೆ ಎಂದು ಕಣ್ಣಿರಿಟ್ಟರು.
ಒಳಿತು ಎಂಬುದು ದೂರ ಇಲ್ಲ, ಅದು ನಮ್ಮೊಳಗಿದೆ. ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದ ಅವರು, ನಾನು ಏನೂ ಅಲ್ಲ ಎಂಬ ಭಾವನೆ ಬರಬೇಕು. ಕಣ್ಮುಚ್ಚಿ ಪ್ರಾರ್ಥಿಸಿದಾಗ ಒಳಗಿನ ಅದ್ಭುತ ಗೊತ್ತಾಗುತ್ತದೆ ಎಂದು ಹೇಳಿದರು. ಅಂಕ ಆಧಾರಿತ ಶಿಕ್ಷ ಣ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೊಸಕಿ ಹಾಕಿದೆ. ಪಾಲಕರ ಒತ್ತಾಯ, ಅವರ ಪ್ರೇರಣೆಗಾಗಿ ಶಿಕ್ಷಣ ನಡೆದಿದೆ. ಮತ್ತೂಬ್ಬರನ್ನು ಹೋಲಿಕೆ ಮಾಡುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವದಿಲ್ಲ, ಒಳಗಣ್ಣು ತೆರೆದು ನೋಡುವ ಶಿಕ್ಷಣ ನಮಗೆ ಬೇಕಿದೆ ಎಂದರು.
ವಿದ್ಯಾ ಪ್ರಸಾರಕ ಮಂಡಳದ ಉಪ ಕಾರ್ಯಾಧ್ಯಕ್ಷ ರಾಮ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ. ದೀಕ್ಷಿತ್ ಅವರು ಸೇವಾ ನಿವೃತ್ತಿ ಹೊಂದುತ್ತಿರುವ ನಿಮಿತ್ತ ಸಂಸ್ಥೆಯ ಪರವಾಗಿ ಬೀಳ್ಕೊಡಲಾಯಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಾಧಕರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಸಂದೀಪ ಕುಲಕರ್ಣಿ, ಎಸ್.ಬಿ. ಸತ್ಯನಾರಾಯಣ ಇದ್ದರು.
ಪ್ರಾಚಾರ್ಯ ಜಿ.ಬಿ. ಕುಲಕರ್ಣಿ ಸ್ವಾಗತಿಸಿದರು. ಡಿ.ಜಿ. ಕುಲಕರ್ಣಿ ಪರಿಚಯಿಸಿದರು. ಆರ್.ಆರ್. ದೇಶಮುಖ, ಪ್ರೊ. ಎ.ಎಸ್. ಲಿಗಾಡೆ ವರದಿ ವಾಚಿಸಿದರು. ಪಿ.ಎಸ್. ಹುಯಿಲಗೋಳ, ಶ್ರೀನಿವಾಸ ನರಗುಂದ, ಪ್ರೊ. ಜಿ.ಜೆ. ಮೊರಬ ನಿರೂಪಿಸಿದರು. ಬೋರಮ್ಮ ಹಂಗರಗಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.