ಆಸ್ತಿಗಾಗಿ ಹಲ್ಲೆ ಪ್ರಕರಣ: ನಾಲ್ವರನ್ನು ಬಂಧಿಸಿದ ಕೇಶ್ವಾಪುರ ಪೊಲೀಸರು, ಓರ್ವ ಪರಾರಿ
Team Udayavani, Jul 9, 2021, 2:56 PM IST
ಹುಬ್ಬಳ್ಳಿ: ಆಸ್ತಿಗೆ ಸಂಬಂಧಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ, ನಾಲ್ವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿ ಕೊಂಡಿದ್ದಾನೆ.
ಹಲ್ಲೆ, ಕೊಲೆ ಯತ್ನ ಪ್ರಕರಣದಡಿ ಮುನ್ನಾ, ಶ್ರೀನಿವಾಸ್, ಜಾವೀದ್, ಇಮ್ರಾನ್ ಬಂಧಿತರಾಗಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಮರ್ಥನೆ ತಪ್ಪೆಂದ ಶಾಸಕ,ತಾನು ತಪ್ಪುಮಾಡಿಲ್ಲ ಎಂದ ಎಸ್ ಐ:ಏನಿದು ಕಾರ್ಕಳ ಘಟನೆ?
ಇಲ್ಲಿನ ಗೋಪನಕೊಪ್ಪ ಸ್ವಾಗತ ಕಾಲೋನಿಯ ವೀರೇಶ ಹೆಗಡಾಳ ಎಂಬುವರ ತಾಯಿಯ ಹೆಸರಿನಲ್ಲಿ ಕುಂದಗೋಳ ತಾಲೂಕ ತರ್ಲಘಟ್ಟ ಗ್ರಾಮದಲ್ಲಿದ್ದ 1ಎಕರೆ 16ಗುಂಟೆ ಜಮೀನನ್ನು ಬೇರೆಯವರಿಗೆ ಒತ್ತೆ ಹಾಕಿದ್ದರು. ಈ ಜಮೀನನ್ನು ಮುನ್ನಾ ಬೇಪಾರಿ, ಅಲ್ತಾಫ ಬೇಪಾರಿ ಎಂಬುವರು ಬೇರೆಯವರಿಗೆ ಮಾರಾಟ ಮಾಡಿದ್ದರು. ಅದನ್ನು ವಾಪಸ್ಸು ಕೊಡುವಂತೆ ವೀರೇಶ ಕೇಳಿದ್ದಕ್ಕೆ ಗುರುವಾರ ರಾತ್ರಿ ಇಲ್ಲಿನ ಬೆಂಗೇರಿಯ ಸಂತೆ ಬಯಲಿಗೆ ವೀರೇಶನನ್ನು ಕರೆಯಿಸಿ, ಮಾರಣಾಂತಿಕ ಹಲ್ಲೆ ಮಾಡಿದ್ದರು.
ಗಂಭೀರ ಗಾಯಗೊಂಡಿರುವ ವೀರೇಶ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.