ಮೂತ್ರಪಿಂಡ ಕಸಿಗೆ ಕಿಮ್ಸ್ ಸಿದ್ಧ; ಒಪ್ಪಿಗೆಯಷ್ಟೇ ಬಾಕಿ
ಸುಸಜ್ಜಿತ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್-ಡಯಾಲಿಸಿಸ್ ಕೇಂದ್ರ ಅಣಿ! ಕೋವಿಡ್ ಹಿನ್ನೆಲೆ; ನಿಯೋಜಿತ ವೈದ್ಯರ ತಂಡದ ಪರಿಶೀಲನೆ ವಿಳಂಬ
Team Udayavani, Apr 20, 2021, 7:27 PM IST
ವರದಿ : ಶಿವಶಂಕರ ಕಂಠಿ
ಹುಬ್ಬಳ್ಳಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ವರದಾನವಾದ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ (ಮೂತ್ರಪಿಂಡ ಕಸಿ) ಹಾಗೂ ಡಯಾಲಿಸಿಸ್ ಕೇಂದ್ರ ಕಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿತವಾಗಿದ್ದು, ಕೋವಿಡ್ 2ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇದರ ಕಾರ್ಯಾರಂಭಕ್ಕೆ ತಡೆಯಾಗಿದೆ. ಶೀಘ್ರದಲ್ಲಿಯೇ ಇದು ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆಯಿದೆ.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯ ಸಹಕಾರದೊಂದಿಗೆ ಕಿಮ್ಸ್‌ನ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸಪ್ಲಾ Âಂಟ್ ಹಾಗೂ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. ಕಿಡ್ನಿ ಕಸಿ ಮಾಡಲು ಅವಶ್ಯವಾದ ಪರವಾನಗಿಗಾಗಿ ಕಿಮ್ಸ್‌ನ ನಿರ್ದೇಶಕರು ಸರಕಾರದ ಕುಟುಂಬ ಮತ್ತು ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ. ಅ ಧಿಕಾರಿಗಳ ತಂಡ ಕೇಂದ್ರಕ್ಕೆ ಭೇಟಿಕೊಟ್ಟು, ಪರಿಶೀಲಿಸಿ ಒಪ್ಪಿಗೆ ನೀಡುವುದು ಬಾಕಿಯಿದೆ. ಆದರೆ, ರಾಜ್ಯದಲ್ಲಿ ಕೋವಿಡ್-19ರ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಕಾರ್ಯಾರಂಭ ಸಹ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಿಮ್ಸ್‌ನಲ್ಲಿ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್‌ಗೆ ಅವಶ್ಯವಾದ ಉಪಕರಣಗಳು ಹಾಗೂ ಎಲ್ಲ ಬಗೆಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಸರಕಾರ ಕೂಡ ಮೂತ್ರಪಿಂಡ ಪಡೆದುಕೊಳ್ಳಲು ಅನುಮತಿ ನೀಡಿದೆ. ಆದರೆ ಕಸಿ ಮಾಡಲು ಅವಶ್ಯಕವಾದ ಪರವಾನಗಿ ನೀಡಬೇಕಾಗಿದೆ. ಅದಕ್ಕಾಗಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ನೇಮಿಸಿದ ಮೂರ್‍ನಾಲ್ಕು ವೈದ್ಯರುಳ್ಳ ತಂಡದ ಸದಸ್ಯರು ಕೇಂದ್ರಕ್ಕೆ ಭೇಟಿಕೊಟ್ಟು ತಪಾಸಣೆ ನಡೆಸಬೇಕಾಗಿದೆ. ಈ ತಂಡದವರು ಭೇಟಿ ನೀಡಿ ಅನುಮತಿ ಕೊಟ್ಟರೆ ತಕ್ಷಣವೇ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಿದ್ಧರಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಅವರು ಕೇಂದ್ರಕ್ಕೆ ಭೇಟಿ ಕೊಡಲು ವಿಳಂಬವಾಗುತ್ತಿರಬಹುದು ಎಂದು ಮೂಲಗಳು ತಿಳಿಸಿವೆ.
ಬಡವರ ಪಾಲಿಗೆ ವರದಾನ; ಕಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಮೂತ್ರಪಿಂಡ ಕಸಿ ಮತ್ತು ಡಯಾಲಿಸೀಸ್ ಕೇಂದ್ರದಲ್ಲಿ ಕಸಿ ಮಾಡಲು ಅನುಮತಿ ಸಿಕ್ಕರೆ ಇದು ಉತ್ತರ ಕರ್ನಾಟಕ ಭಾಗದವರಿಗೆ ಹಾಗೂ ಬಡವರ ಪಾಲಿಗೆ ವರದಾನವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಬೆಂಗಳೂರು, ಮುಂಬಯಿ, ಹೈದರಾಬಾದ್ ಕಡೆಗೆ ಮುಖ ಮಾಡಬೇಕು. ಇಲ್ಲವೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕೆಂದರೆ ಕನಿಷ್ಠ 5-6 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಜೊತೆಗೆ ದೂರ ಪ್ರಯಾಣ ಮಾಡಬೇಕು. ಅದರಲ್ಲೂ ಬಡವರು ಈ ಚಿಕಿತ್ಸೆಗಾಗಿ ಸಾಲ-ಸೋಲ ಮಾಡುವುದು ಇಲ್ಲವೆ ಹೊಲ, ಆಸ್ತಿ ಮಾರಾಟ ಮಾಡಬೇಕಾಗುತ್ತದೆ. ಸಾಲ ತೀರಿಸಲು ಜೀವನಪರ್ಯಂತ ಶ್ರಮಿಸಬೇಕಾಗಿದೆ. ಒಂದು ವೇಳೆ ಕಿಮ್ಸ್‌ನಲ್ಲಿ ಇದರ ಸೌಲಭ್ಯ ದೊರೆತರೆ ಸರಕಾರದ ವಿವಿಧ ಆರೋಗ್ಯ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಮಧ್ಯಮ ವರ್ಗದವರು ಸೇರಿದಂತೆ ಉಳಿದವರು ಸಹ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.