ಸೌಹಾರ್ದದಿಂದ ಶಾಂತಿ
Team Udayavani, Mar 11, 2017, 1:39 PM IST
ಹುಬ್ಬಳ್ಳಿ: ಸೌಹಾರ್ದತೆ ಎಂಬುದು ನಾಟಕೀಯವಾಗಿರದೇ ಮನ ಪೂರ್ವಕವಾಗಿದ್ದರೆ ಅಲ್ಲಿ ಶಾಂತಿ ನೆಲೆಸುತ್ತದೆ ಎಂದು ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನುಡಿದರು. ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಳಿ ಹಬ್ಬ ಆಚರಣೆಯ ಸೌಹಾರ್ದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಬದುಕಿನಲ್ಲಿ ಸೌಹಾರ್ದದಿಂದ ನಡೆದುಕೊಳ್ಳುವುದು ಮುಖ್ಯ.
ಸಂದರ್ಭಗಳು ಮುಖ್ಯವೇ ಹೊರತು ಜಾತಿಯಿಂದ ವ್ಯಕ್ತಿಯನ್ನು ಅಳೆಯುವುದು ಸರಿಯಲ್ಲ. ಪೊಲೀಸರು ನಗರದ ಸರ್ವ ಜನಾಂಗದ ಜನರ ಭಾವನೆ ಅರಿತವರಾಗಿರುತ್ತಾರೆ. ಪೊಲೀಸರಿಂದ ಮಾತ್ರ ಜನರ ಶಾಂತಿಮಂತ್ರದ ನಾಡಿಮಿಡಿತ ಹಿಡಿಯಲು ಸಾಧ್ಯವೆಂದರು. ಹಬ್ಬಗಳ ನಿಮಿತ್ತ ನಡೆಯುವ ಉತ್ಸವ,ಮೆರವಣಿಗೆ ವೇಳೆ ಎಲ್ಲರೂ ಮತ, ಧರ್ಮ-ಪಂಥ ಮರೆತು ಮೆರವಣಿಗೆಕಾರರಿಗೆ ಮಾರ್ಗ ಮಧ್ಯೆ ಹಣ್ಣು-ಹಂಪಲ, ತಂಪುಪಾನೀಯ ವಿತರಿಸುವ ಮೂಲಕ ಸೌಹಾರ್ದ ಮೆರೆಯುತ್ತಾರೆ.
ಅದೇ ರೀತಿ ರಂಜಾನ್, ಬಕ್ರೀದ್ ಹಾಗೂ ಕ್ರಿಸ್‌ಮಸ್‌ದಂದು ಸಾಮೂಹಿಕ ಪ್ರಾರ್ಥನೆ ಮಾಡಿಬರುವವರನ್ನು ಕಂಡು ನಾವೆಲ್ಲ ಸಂತಸ ಪಡಬೇಕೇ ವಿನಃ ಅಸೂಯೆ ಪಡಬಾರದು ಎಂದು ಕಿವಿಮಾತು ಹೇಳಿದರು. ಮುಸ್ಲಿಂ ಧರ್ಮಗುರು ತಾಜುದ್ದೀನ ಖಾದ್ರಿ, ಸಿಖ್ ಧರ್ಮಗುರು ಮೇಜರ್ ಗ್ಯಾನಿಸಿಂಗ್,ಕ್ರೈಸ್ತ್ ಧರ್ಮಗುರು ರೇ. ಎಸ್.ಎಸ್. ಉಳ್ಳಾಗಡ್ಡಿ ಮಾತನಾಡಿ, ಯಾವುದೇ ಧರ್ಮವು ಇನ್ನೊಬ್ಬರನ್ನು ದ್ವೇಷಿಸಬೇಕೆಂದು ತಿಳಿಸಿಲ್ಲ.
ಹಬ್ಬಗಳು ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವುದಾಗಿದೆ. ಚರಿತ್ರೆ ಹೊಂದಿರುತ್ತವೆ. ಅವುಗಳ ಅರ್ಥ, ಮಹತ್ವ ಅರಿತುಕೊಂಡು ನಾವೆಲ್ಲ ನಡೆಯಬೇಕು. ಸಮಾಧಾನ, ಶಾಂತಿ, ಸೌಹಾರ್ದದಿಂದ ಆಚರಿಸಬೇಕು ಎಂದರು.ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಸಂತಸಗಳನ್ನು ಹಂಚಿಕೊಳ್ಳುವುದೆ ಹಬ್ಬಗಳ ಉದ್ದೇಶ. ಆದರೆ ಅದು ಇನ್ನೊಬ್ಬರಿಗೆಸಮಸ್ಯೆ, ತೊಂದರೆ ಹಾಗೂ ಭಾವನೆಗಳಿಗೆ ಧಕ್ಕೆಯಾಗದಂತಿರಬೇಕು. ಪ್ರತಿಯೊಬ್ಬರ ಹಕ್ಕು, ವ್ಯಕ್ತಿಗತ ಗೌರವಿಸಬೇಕು.
ಕೆಲವು ಕಿಡಿಗೇಡಿಗಳು ಮಾಡುವ ಗಲಾಟೆ, ಹಗೆತನಕ್ಕೆ ಸಮಾಜದರಿಯರು ಅವಕಾಶ ನೀಡಬಾರದು. ಅವಳಿ ನಗರದಲ್ಲಿ ಯಾವುದೇ ರೀತಿ ಭಯ, ಆತಂಕದ ವಾತಾವರಣವಿಲ್ಲ. ಎಲ್ಲರೂ ಕೂಡಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದರು. ಅಂಜುಮನ್ ಸಂಸ್ಥೆ ಅಧ್ಯಕ್ಷ ಜಬ್ಟಾರಖಾನ ಹೊನ್ನಳ್ಳಿ ಮಾತನಾಡಿ, ನಾವೆಲ್ಲ ಭಾರತೀಯರು. ಎಲ್ಲ ಹಬ್ಬಗಳೂ ಭಾರತೀಯರ ಹಬ್ಬಗಳು. ನಮ್ಮಲ್ಲಿರುವ ಕಾಮ, ಕ್ರೋಧ, ಮತ್ಸರವನ್ನುತೊಡೆದು ಹಾಕುವ ಸಲುವಾಗಿಯೇ ಹೋಳಿ ಹಬ್ಬ ಆಚರಿಸಲಾಗುತ್ತದೆ.
ಅವನ್ನೆಲ್ಲ ತೊಡೆದುಹಾಕಿ ನಾವೆಲ್ಲ ಸಹಬಾಳ್ವೆಯಿಂದ ಬಾಳ್ಳೋಣ ಎಂದರು. ಮಹಾಪೌರ ಡಿ.ಕೆ. ಚವ್ಹಾಣ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಎಸ್‌ಎಸ್‌ಕೆಯ ಎಸ್.ಕೆ. ದಲಭಂಜನ ಮಾತನಾಡಿದರು. ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ತಹಶೀಲ್ದಾರ ಶಶಿಧರ ಮಾಡ್ಯಾಳ, ಎ.ಎಂ. ಹಿಂಡಸಗೇರಿ, ಪ್ರೊ| ಐ.ಜಿ. ಸನದಿ, ಮಹೇಂದ್ರ ಸಿಂಘಿ, ಜಿ.ಎಂ. ಚಿಕ್ಕಮಠ, ಮದನ ದೇಸಾಯಿ, ವೀರಭದ್ರಪ್ಪ ಹಾಲಹರವಿ, ಮಹೇಶ ಟೆಂಗಿನಕಾಯಿ, ಅಲ್ತಾಫ ಕಿತ್ತೂರ, ಅಲ್ತಾಫ ಹಳ್ಳೂರ, ಸತೀಶ ಮೆಹರವಾಡೆ ಮೊದಲಾದವರಿದ್ದರು. ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಜಿನೇಂದ್ರ ಖನಗಾವಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.