ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣೆ
Team Udayavani, Jul 21, 2018, 5:27 PM IST
ಬನಹಟ್ಟಿ: ಕೃಷ್ಣೆಯ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ
ಭಾರೀ ಮಳೆಯಾಗುತ್ತಿರುವುದರಿಂದ ಅಲ್ಲಿನ ಅನೇಕ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ, ಅಸ್ಕಿ ಸೇರಿದಂತೆ ಅನೇಕ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನಗರ ಸಮೀಪದಲ್ಲಿ ಕೃಷ್ಣಾನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ಎರಡು ಒಡಲು ಭರ್ತಿಯಾಗಿ ರಭಸದಿಂದ ಹರಿಯುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ನದಿ ದಡದಲ್ಲಿ ಸುಳಿಗಳು ನಿರ್ಮಾಣವಾಗುತ್ತಿವೆ. ಆದ್ದರಿಂದ ಜನರು ಮತ್ತು ಜಾನುವಾರುಗಳನ್ನು ನದಿ ನೀರಿಗೆ ಇಳಿಸಬಾರದು ಎಂದು ತಾಲೂಕು ಆಡಳಿತ ಮುನ್ನಚ್ಚರಿಗೆ ನೀಡಿದೆ.
ಅಲ್ಲದೇ ನದಿಯ ಹಿನ್ನೀರಿನಿಂದಾಗಿ ನೀರು ನದಿಯ ದಡದಲ್ಲಿರುವ ಹೊಲ ಗದ್ದೆಗಳನ್ನು ಸುತ್ತುವರೆಯುತ್ತಿದೆ. ರಬಕವಿ-ಬನಹಟ್ಟಿ ಜಾಕ್‌ವೆಕಲ್ ಹತ್ತಿರ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೋಟ್ ವ್ಯವಸ್ಥೆ ಬಂದ್ ಮಾಡಲಾಗಿದೆ. ಅಥಣಿ ತಾಲೂಕಿಗೆ ಬೋಟ್ ಮೂಲಕ ತೆರಳಲು ಅನುಕೂಲವಾಗಲೆಂದು ನೆರೆಯ ಅಸ್ಕಿ ಗ್ರಾಮದಿಂದ ಈ ಬೋಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಥಣಿ ತಾಲೂಕಿನ ಮಹಿಷವಾಡಗಿಗೆ ಹೋಗಲು ಅನೂಕೂಲವಾಗಿದೆ. ಆಸ್ಕಿ ಗ್ರಾಮಕ್ಕೆ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹಾಗೂ ಉಪತಹಶೀಲ್ದಾರ್ ಎಸ್.ಬಿ. ಕಾಂಬಳೆ ನದಿಯ ನೀರಿನ ಮಟ್ಟ ಪರಿಶೀಲಿಸಿದರು. ಶುಕ್ರವಾರ ಮುಂಜಾನೆ 6ಗಂಟೆಗೆ ದಾಖಲಾದಂತೆ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 2,03,010 ಕೂಸೆಕ್ ನೀರು ಹರಿದು ಬರುತ್ತಿದೆ. ಇಂದಿನ ನೀರಿನ ಮಟ್ಟ 524.10 ಮೀಟರ್ ಇದ್ದು, ಜಲಾಶಯದ ಹೊರಹರಿವು 2,02000 ಕ್ಯೂಸೆಕ್ ನಷ್ಟಿದೆ. ಮಹಾರಾಷ್ಟ್ರದ ಕೊಯ್ನಾ 93 ಮೀ, ನವಜಾ 129 ಮಿ.ಮೀ., ಮಹಾಬಲೇಶ್ವರ 71 ಮಿ. ಮೀ, ವಾರಣಾ 54 ಮಿ.ಮೀ., ಸಾಂಗಲಿ 7 ಮಿ.ಮೀ, ರಾಧಾನಗರಿ 73 ಮಿ. ಮೀ, ದೂಧಗಂಗಾ 81 ಮಿ. ಮೀ ನಷ್ಟು
ಮಳೆಯಾದ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ನದಿಗೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಿ ಜನರು ನದಿ ತೀರಕ್ಕೆ ಸ್ನಾನಕ್ಕೆ, ಬಟ್ಟೆ ತೊಳೆಯಲಿಕ್ಕೆ, ದನ ಕರುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ರೀತಿಯಿಂದ ಸಜ್ಜಾಗಿದ್ದು, ಆ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು
ನೇಮಿಸಲಾಗಿದ್ದು, ಅಸ್ಕಿ, ಆಸಂಗಿ ಗ್ರಾಮದ ನೋಡಲ್ ಅಧಿಕಾರಿಯಾಗಿ ರಬಕವಿ-ಬನಹಟ್ಟಿ ಪೌರಾಯುಕ್ತ ಆರ್.
ಎಂ. ಕೊಡಗೆ 9901919691, ತಮದಡ್ಡಿಗೆ ತೇರದಾಳ ಪುರಸಭೆ ಮುಖ್ಯಾಧಿಕಾರಿ ಬೀಳಗಿ 9035391371,
ಹಳಿಂಗಳಿ ಗ್ರಾಮಕ್ಕೆ ಜಿಎಲ್‌ಬಿಸಿ ಅಧಿಕಾರಿ ಎಂ. ಎಂ. ಸಾಗರ 9448750989, ರಬಕವಿ, ಹೊಸೂರ, ಕುಲಹಳ್ಳಿ
ಗ್ರಾಮಕ್ಕೆ ರಬಕವಿ-ಬನಹಟ್ಟಿ ನಗರಸಭೆಯ ಸಹಾಯಕ ಅಭಿಯಂತರರಾದ ಡಿ.ಎಂ. ತರಡೆ 9449842524,
ಮದನಮಟ್ಟಿ ಗ್ರಾಮಕ್ಕೆ ವಲಯ ಅರಣ್ಯಾಧಿಕಾರಿ ಎಸ್. ಡಿ. ಬಬಲಾದಿ 9482373036, ಹಿಪ್ಪರಗಿ ಗ್ರಾಮಕ್ಕೆ
ಮಗದುಮ್ 9448907950 ಅವರನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.