ಕುರುಕ್ಷೇತ್ರ ಸಂಭಾವನೆ ಸಂತ್ರಸ್ತರಿಗೆ: ನಿಖೀಲ್
•ಪ್ರವಾಹ ಪೀಡಿತರ ನಿವಾಸಗಳಿಗೆ ಭೇಟಿ •ಪಕ್ಷದಿಂದ ಪರಿಹಾರ ವಿತರಿಸುವ ಭರವಸೆ
Team Udayavani, Aug 13, 2019, 9:49 AM IST
ಧಾರವಾಡ: ನಗರದಲ್ಲಿ ಸಂತ್ರಸ್ತ ಅಂಧ ಮಕ್ಕಳಿಗೆ ನಿಖೀಲ್ ಕುಮಾರಸ್ವಾಮಿ ಅಗತ್ಯ ವಸ್ತುಗಳನ್ನು ವಿತರಿಸಿದರು.
ಹುಬ್ಬಳ್ಳಿ: ಕುರುಕ್ಷೇತ್ರ ಸಿನಿಮಾದ ನನ್ನ ಸಂಭಾವನೆಯನ್ನು ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ನೀಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಚಿತ್ರನಟ ನಿಖೀಲ್ ಕುಮಾರಸ್ವಾಮಿ ಹೇಳಿದರು.
ದೇವಿನಗರದ ಪ್ರವಾಹ ಪೀಡಿತರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಅಪಾರ ಹಾನಿಯಾಗಿದೆ. ಜನರು ಮನೆ ಕಳೆದುಕೊಂಡಿದ್ದಾರೆ. ಬೆಳೆ ಕೊಚ್ಚಿ ಹೋಗಿದೆ. ಜನರ ಬದುಕು ನರಕ ಸದೃಶವಾಗಿದೆ ಎಂದರು.
ಪ್ರವಾಹಕ್ಕೀಡಾದವರಿಗೆ ಜೆಡಿಎಸ್ ಯುವ ಘಟಕದಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಆಹಾರ ಧಾನ್ಯ, ಬ್ಲಾಂಕೆಟ್, ದಿನಬಳಕೆ ಸಾಮಗ್ರಿ ನೀಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜನರ ನೋವಿಗೆ ಸ್ಪಂದಿಸಬೇಕು. ರಾಜ್ಯದ ಸ್ಥಿತಿಗತಿ ಪರಿಶೀಲಿಸಿ ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಜನರ ಕಣ್ಣೀರೊರೆಸುವ ಕಾರ್ಯವಾಗಲಿ: ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಅಧಿಕಾರ ಪಡೆಯುವ ಮುನ್ನ ಇದ್ದ ತೀವ್ರತೆ ಈಗ ಬಿಜೆಪಿಯವರಿಗೆ ಇಲ್ಲ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಮಾಡಬೇಕಿದೆ. ಉಕ ಜನರ ಕಣ್ಣೀರೊರೆಸುವ ಕೆಲಸವನ್ನು ಸರಕಾರ ಮಾಡಬೇಕು. ಬೆಳೆ ಹಾನಿಗೆ ತ್ವರಿತಗತಿಯಲ್ಲಿ ರೈತರಿಗೆ ಪರಿಹಾರ ವಿತರಣೆಯಾಗಬೇಕು. ಸರಕಾರ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ನಿಖೀಲ್ ಕುಮಾರಸ್ವಾಮಿ ದೇವಿನಗರದಲ್ಲಿ ಪ್ರವಾಹ ಪೀಡಿತರ ನೋವನ್ನು ಆಲಿಸಿದರು. ಪಕ್ಷದ ವತಿಯಿಂದ ಪರಿಹಾರ ಸಾಮಗ್ರಿ ವಿತರಿಸಲಾಗುವುದು ಎಂಬ ಭರವಸೆ ನೀಡಿದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಳೆಯಿಂದಾಗಿ ಶಾಲಾ ಸಾಮಗ್ರಿ ಕಳೆದುಕೊಂಡ ಮಕ್ಕಳಿಗೆ ಪುಸ್ತಕ ಖರೀದಿಗೆ ಹಣ ನೀಡಿದರು.
ಮುಖಂಡರಾದ ರಾಜಣ್ಣ ಕೊರವಿ, ನವೀನ ಮುನಿಯಪ್ಪನವರ, ಶ್ರೀಕಾಂತ ಬಡವಣ್ಣವರ, ಗಣಿ ಗಿರಣಿ, ನಾಗನಗೌಡ, ರಾಜು ಪೂಜಾರಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.