ಕೆವಿಜಿ ಬ್ಯಾಂಕ್‌-ಮೆಕ್ವಿನ್  ಟೆಕ್ನಾಲಜೀಸ್‌ ಒಡಂಬಡಿಕೆ


Team Udayavani, Jan 9, 2022, 9:35 PM IST

ದ್ಗಹಜಕ್ದಸದ್ಗಹಹ

ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಸೌರ ವಿದ್ಯುತ್‌ ಆಧಾರಿತ ಪಂಪ್‌ಗ್ಳ ಪೂರೈಕೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಮೂಲದ ಮೆಕ್ವಿನ್‌ ಟೆಕ್ನಾಲಜೀಸ್‌ ಲಿ. ಬ್ಯಾಂಕಿನ ಆರ್ಥಿಕ ಸಹಾಯದ ಮೂಲಕ ಸೌರ ವಿದ್ಯುತ್‌ ಆಧಾರಿತ ಪಂಪ್‌ಗ್ಳನ್ನು ರೈತರಿಗೆ ಪರಿಚಯಿಸುವ ಉದ್ದೇಶಕ್ಕೆ ಸಂಬಂ ಧಿಸಿದಂತೆ ಶನಿವಾರ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ನಗರದ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಬ್ಯಾಂಕ್‌ ಅಧ್ಯಕ್ಷ ಪಿ.ಗೋಪಿಕೃಷ್ಣ ಅವರ ಸಮ್ಮುಖದಲ್ಲಿ ಬ್ಯಾಂಕಿನ ಮಹಾಪ್ರಬಂಧಕ ಶ್ರೀನಿವಾಸ ರಾವ್‌ ಮತ್ತು ಮೆಕ್ವಿನ್‌ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಡಾ|ಶಿವಕುಮಾರ ಎಚ್‌.ಎಮ್‌ ಅವರು ಪರಸ್ಪರ ಸಹಿ ಮಾಡಿದರು.

ಈ ಒಡಂಬಡಿಕೆ ಹಸ್ತಾಂತರಿಸಿದ ಬಳಿಕ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ಮಾತನಾಡಿ, ಕಳೆದ 25 ವರ್ಷಗಳಿಂದ ಸೆಲ್ಕೋ ಸಂಸ್ಥೆ ಸಹಯೋಗದಲ್ಲಿ ಸೌರ ವಿದ್ಯುತ್‌ ಅನುಷ್ಠಾನದಲ್ಲಿ ಬ್ಯಾಂಕ್‌ ಮಂಚೂಣಿಯಲ್ಲಿದೆ. ಸೌರ ವಿದ್ಯುತ್‌ ಕ್ಷೇತ್ರದಲ್ಲಿ ಉತ್ತೇಜಕರ ಸಂಶೋಧನೆಗಳಾಗಿದ್ದು, ರೈತ ಸ್ನೇಹಿ ಉಪಕರಣಗಳು ಹೊರ ಬಂದಿವೆ. ಅದರಲ್ಲೂ ನೀರಾವರಿ ಪಂಪ್‌ಗ್ಳು ಇತ್ತೀಚಿನ ಆವಿಷ್ಕಾರವಾಗಿದ್ದು, ಸೌರ ವಿದ್ಯುತ್‌ನ ಮೇಲೆ ರೈತರೇ ನೇರವಾದ ನಿಯಂತ್ರಣ ಹೊಂದುವಂತಾಗುತ್ತದೆ ಎಂದರು.

ಆರಂಭದಲ್ಲಿ ಬೆಲೆ ತುಸು ಹೆಚ್ಚಳವಾದಂತೆ ಕಂಡರೂ ಆ ಸಲಕರಣೆಗಳು 20 ರಿಂದ 25 ವರ್ಷಗಳ ಅವಧಿವರೆಗೂ ಬಾಳಿಕೆ ಬರುವುದರಿಂದ ವರ್ಷ ಕಳೆದಂತೆ ಅಗ್ಗದ ಮಾಧ್ಯಮವಾಗಬಲ್ಲದು. ಡಿಸೇಲ್‌ ಬಳಕೆಯ ಪಂಪ್‌ಗ್ಳೂ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಅವುಗಳನ್ನು ಸೌರ ವಿದ್ಯುತ್‌ ಪಂಪ್‌ಗ್ಳಿಗೆ ಬದಲಿಸಿದರೆ ವಾತಾವರಣಕ್ಕೆ ಕಾರ್ಬನ್‌ ಸೇರಿಸುವುದನ್ನು ಗಣನೀಯವಾಗಿ ಕಡಿಮೆ ಮಾಡಿದಂತಾಗುತ್ತದೆ.

ಮೆಕ್ವಿನ್‌ ಟೆಕ್ನಾಲಜೀಸ್‌ ಲಿ.ಸೌರ ವಿದ್ಯುತ್‌ ನೀರಾವರಿ ಪಂಪ್‌ಗ್ಳ ಉತ್ಪಾದನೆ ಹಾಗೂ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದರಿಂದ ಹಾಗೆಯೇ ತಮ್ಮ ಬ್ಯಾಂಕ್‌ ಗ್ರಾಮೀಣ ಭಾಗದಲ್ಲೇ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವುದರಿಂದ ರೈತ ಬಾಂಧವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಮೆಕ್ವಿನ್‌ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ|ಶಿವಕುಮಾರ ಎಚ್‌. ಎಮ್‌. ಮಾತನಾಡಿ, ಮೆಕ್ವಿನ್‌ ಸೋಲಾರ್‌ ಪಂಪ್‌ ಜನಪ್ರಿಯಗೊಳ್ಳುತ್ತಲಿದ್ದು, ಈಗಾಗಲೇ 15 ಸಾವಿರಕ್ಕೂ ಹೆಚ್ಚಿನ ಸಂತೃಪ್ತ ರೈತರು ರಾಜ್ಯಾದ್ಯಂತ ಇರುವರು. ಮೆಕ್ವಿನ್‌ ಟೆಕ್ನಾಲಜೀಸ್‌ ಬೆಂಗಳೂರು ಮೂಲದ್ದಾದರೂ 25 ಕ್ಕೂ ಹೆಚ್ಚಿನ ರಾಜ್ಯ ಮತ್ತು 18 ದೇಶಗಳಲ್ಲಿ ಸೇವಾ ಜಾಲ ವಿಸ್ತರಿಸಿದೆ ಎಂದರು.

1ಎಚ್‌ಪಿಯಿಂದ 50 ಎಚ್‌ಪಿಯವರೆಗೂ ಪಂಪ್‌ ಗಳು ಲಭ್ಯವಿದ್ದು, ಕೊಳವೆ ಬಾವಿ, ತೆರೆದ ಬಾವಿ ಮತ್ತು ಇನ್ನಿತರೆ ನೀರಾವರಿ ಯೋಜನೆಗಳಿಗೆ ಸೂಕ್ತವಾಗಿದೆ. ಹನಿ ನೀರಾವರಿ, ತುಂತುರು ನೀರಾವರಿಗಳಿಗೂ ಈ ತಂತ್ರಜ್ಞಾನ ಅಳವಡಿಸಬಹುದು. ಇವುಗಳು ಇಂಧನ-ನಿರ್ವಹಣಾ ವೆಚ್ಚ ರಹಿತ ಪಂಪ್‌ಗ್ಳಾಗಿ ರುವುದರಿಂದ ರೈತರು  ದೀರ್ಘಾವ ಧಿಯಲ್ಲಿ ವೆಚ್ಚರಹಿತ ನೀರಾವರಿ ಕೈಗೊಳ್ಳಬಹುದಾಗಿದೆ ಎಂದರು. ಬ್ಯಾಂಕ್‌ನ ಮಹಾಪ್ರಬಂಧಕ ಬಿ.ಸಿ.ರವಿಚಂದ್ರ, ಮೆಕ್ವಿನ್‌ ಟೆಕ್ನಾಲಜೀಸ್‌ನ ಇನ್ನೋರ್ವ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಆಶಾರಾಣಿ , ಬ್ಯಾಂಕ್‌ನ ಸಾಲಗಳ ವಿಭಾಗದ ಮುಖ್ಯ ಪ್ರಬಂಧಕ ವಿಶ್ವೇಶ್ವರ ಯಾಜಿ, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಇದ್ದರು.

 

ಟಾಪ್ ನ್ಯೂಸ್

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.