ರಕ್ತದ ಬೇಡಿಕೆ-ರಕ್ತದಾನದಲ್ಲೂ ಕುಸಿತ
Team Udayavani, Mar 31, 2020, 10:52 AM IST
ಹುಬ್ಬಳ್ಳಿ: ಕೋವಿಡ್ 19 ಲಾಕ್‌ಡೌನ್ ರಕ್ತ ಭಂಡಾರಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ರಕ್ತದಾನಿಗಳ ಸಂಖ್ಯೆಯೂ ಕ್ಷೀಣಿಸುತ್ತಿದ್ದು, ಹೀಗಾಗಿ ರಕ್ತ ಸಂಗ್ರಹ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ.
ಇಲ್ಲಿನ ನೀಲಿಜಿನ್ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದಲ್ಲಿ ಪ್ರತಿ ತಿಂಗಳು 400-600 ಯುನಿಟ್‌ನಷ್ಟು ರಕ್ತ ಸಂಗ್ರಹವಾಗುತ್ತಿತ್ತು. ಪ್ರತಿ ತಿಂಗಳಿಗೆ 12-15 ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ರಕ್ತದಾನ ಶಿಬಿರಗಳು ಸ್ಥಗಿತಗೊಂಡವು. ಇದರ ಪರಿಣಾಮ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದಿಂದ ಮಾರ್ಚ್‌ನಲ್ಲಿ ಕೇವಲ 2-3 ರಕ್ತದಾನ ಶಿಬಿರಗಳು ನಡೆದವು. ಕೇವಲ 40-50 ಯುನಿಟ್‌ನಷ್ಟು ರಕ್ತ ಸಂಗ್ರಹವಾಗಿತ್ತು.
ರಕ್ತದಾನಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಹಾಗೂ ರಕ್ತ ಸಂಗ್ರಹ ಕಡಿಮೆ ಆಗುತ್ತಿದ್ದಂತೆ ಭಂಡಾರದಿಂದ ಕಾಯಂ ರಕ್ತದಾನಿಗಳನ್ನು ಸಂಪರ್ಕಿಸಿ ರಕ್ತದಾನ ಮಾಡಲು ಮನವಿ ಮಾಡಲಾಯಿತು. ಅಲ್ಲದೇ ರಕ್ತದಾನ ಮಾಡಲು ಇಚ್ಛಿಸುವವರನ್ನು ಅವರಿದ್ದಲ್ಲಿಗೆ ಸಂಸ್ಥೆಯ ವಾಹನ ತೆಗೆದುಕೊಂಡು ಹೋಗಿ ಕರೆತಂದು ರಕ್ತ ಪಡೆದುಕೊಂಡು ಬಳಿಕ ಅವರನ್ನು ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಯಿತು. ಹೀಗಾಗಿ 2-3 ದಿನಗಳಲ್ಲಿ 50-100 ಯುನಿಟ್‌ನಷ್ಟು ರಕ್ತ ಸಂಗ್ರಹವಾಯಿತು ಎನ್ನುತ್ತಾರೆ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರದವರು. ನಗರದಲ್ಲಿನ ಬಹುತೇಕ ಬ್ಲಿಡ್ ಬ್ಯಾಂಕ್‌ಗಳು ರಕ್ತ ಸಂಗ್ರಹದ ಸಮಸ್ಯೆಯನ್ನು ಎದುರಿಸುತ್ತಿವೆ.
ರಕ್ತದ ಬೇಡಿಕೆ ಕಡಿಮೆ: ಕೋವಿಡ್ 19 ವ್ಯಾಪಿಸುವುದಕ್ಕಿಂತಲೂ ಮೊದಲು ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರಕ್ಕೆ ಪ್ರತಿದಿನ ಕನಿಷ್ಟ 20-30 ಯುನಿಟ್ ನಷ್ಟು ಬೇಡಿಕೆ ಬರುತ್ತಿತ್ತು. ಆದರೀಗ 6-7 ಯುನಿಟ್‌ಗಳಷ್ಟು ಮಾತ್ರ ಬೇಡಿಕೆಯಿದೆ. ಇದಕ್ಕೆ ಕಾರಣ ಬಹುತೇಕ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗ (ಒಪಿಡಿ) ಮುಚ್ಚಿವೆ. ತುರ್ತು ಇದ್ದರೆ ಮಾತ್ರ ದಾಖಲು ಮಾಡಿಕೊಳ್ಳುತ್ತಿವೆ. ಲಾಕ್‌ಡೌನ್ ಘೋಷಣೆ ಆದ ಆರಂಭದಲ್ಲಿ ಬೇಡಿಕೆ ಇತ್ತು. ಆದರೆ ಈಗ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ್ದರಿಂದ ರಕ್ತದ ಬೇಡಿಕೆ ಕಡಿಮೆ ಆಗಿದೆ. ಕಾರಣ ಪಿಕ್‌ಅಪ್ ಆ್ಯಂಡ್ ಡ್ರಾಪ್ ಅನ್ನು 2-3 ದಿನ ಸ್ಥಗಿತಗೊಳಿಸಲಾಗುತ್ತಿದೆ ಎಂದು ರಕ್ತಭಂಡಾರದವರು ಹೇಳುತ್ತಾರೆ.
ಇನ್ಸ್‌ಪೆಕ್ಟರ್ ರಕ್ತದಾನ : ದೇಶಾದ್ಯಂತ ಲಾಕ್‌ಡೌನ್ ಆದ ನಿಮಿತ್ತ ರಕ್ತದಾನಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬುದನ್ನು ಅರಿತ ನಗರದ ವಿಮಾನ ನಿಲ್ದಾಣದ ಇನ್ಸ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಇನ್ನಿತರರು ರವಿವಾರ ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರಕ್ಕೆ ತೆರಳಿ ರಕ್ತದಾನ ಮಾಡಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಹಂಚಿನಾಳ ಅವರು ಕಳೆದ ಮೂರು ವರ್ಷಗಳಿಂದ ತಮ್ಮ ಜನ್ಮದಿನದಂದು ರಕ್ತದಾನ ಮಾಡುತ್ತ ಬಂದಿದ್ದಾರೆ. ಇವರು ರಕ್ತದಾನ ಮಾಡಿದ್ದನ್ನು ಕೇಳಿದ ಕೆಲವು ಕೆಎಸ್‌ಐಎಸ್‌ಎಫ್ ಹಾಗೂ ಇತರೆ ಪೊಲೀಸರು ಸಹಿತ ಸ್ವ-ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿದ್ದಾರೆ.
ಕೋವಿಡ್ 19ಲಾಕ್‌ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳು ರದ್ದಾಗಿವೆ. ಇದರಿಂದಾಗಿ ರಕ್ತನಿಧಿ ಭಂಡಾರದಲ್ಲಿ ರಕ್ತ ಸಂಗ್ರಹ ಕಡಿಮೆಯಾಗಿದೆ ಹಾಗೂ ರಕ್ತದಾನಿಗಳ ಸಂಖ್ಯೆಯೂ ಕ್ಷೀಣಿಸಿದೆ. ಕಾರಣ ಸಂಸ್ಥೆಯಿಂದ ಪಿಕ್‌ಅಪ್ ಆ್ಯಂಡ್ ಡ್ರಾಪ್ ವ್ಯವಸ್ಥೆ ಮಾಡಿದ್ದರಿಂದ ಸುಮಾರು 100 ಯುನಿಟ್‌ದಷ್ಟು ರಕ್ತ ಸಂಗ್ರಹವಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ್ದರಿಂದ ರಕ್ತದ ಬೇಡಿಕೆ ಕುಸಿದಿದೆ. ಹೀಗಾಗಿ 2-3ದಿನ ಪಿಕ್‌ಅಪ್ ಆ್ಯಂಡ್ ಡ್ರಾಪ್ ನಿಲ್ಲಿಸಲಾಗುವುದು. ಸ್ವ-ಇಚ್ಛೆಯಿಂದ ಯಾರಾದರೂ ರಕ್ತದಾನ ಮಾಡಲು ಮುಂದಾದರೆ ಸ್ವೀಕರಿಸಲಾಗುವುದು. -ದತ್ತಮೂರ್ತಿ ಕುಲಕರ್ಣಿ, ಶಿಬಿರದ ಸಂಯೋಜಕ, ರಾಷ್ಟ್ರೋತ್ಥಾನ ರಕ್ತನಿಧಿ ಭಂಡಾರ
-ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.